Get Updates
Get notified of breaking news, exclusive insights, and must-see stories!

Vani Vilasa Sagara Dam: ಕೆಲವೇ ದಿನಗಳಲ್ಲಿ ವಾಣಿ ವಿಲಾಸ ಸಾಗರ ಡ್ಯಾಂ ಭರ್ತಿಯಾಗುವ ಸಾಧ್ಯತೆ: ಪ್ರಸ್ತುತ ನೀರಿನ ಮಟ್ಟ ತಿಳಿಯಿರಿ

Vani Vilasa Sagara Dam: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ತಗ್ಗಿದ್ದ ಮುಂಗಾರು ಮಳೆ ಮತ್ತೆ ಚುರುಕು ಪಡೆದಿದೆ. ಪರಿಣಾಮ ಹಲವು ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು, ನದಿಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿದು ಅವಾಂತರಗಳೇ ಸೃಷ್ಟಿಯಾಗಿವೆ. ಮತ್ತೊಂದೆಡೆ, ಹಲವು ಪ್ರಮುಖ ಜಲಾಶಯಗಳು ಈಗಾಗಲೇ ಭರ್ತಿಯಾಗಿವೆ. ಹಾಗೆಯೇ ರಾಜ್ಯದ ಹಳೇ ಅಣೆಕಟ್ಟುಗಳಲ್ಲಿ ಒಂದಾದ ಹಿರಿಯೂರಿನ ತಾಲೂಕಿನ ವಾಣಿ ವಿಲಾಸ ಸಾಗರ ಜಲಾಶಯ ಮತ್ತೆ ತುಂಬುವ ಹಂತದಲ್ಲಿದೆ. ಹಾಗಾದ್ರೆ ಇಂದು (ಆಗಸ್ಟ್‌ 29) ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.

ಕೋಟೆ ನಾಡು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕಿನಲ್ಲಿರುವ ಇತಿಹಾಸನ ಪ್ರಸಿದ್ಧ ಜಲಾಶಯ 2025ರ ಜನವರಿಯಲ್ಲಿ ಮೊದಲ ಬಾರಿಗೆ ಭತ್ತಿಯಾಗಿತ್ತು. ಇದೀಗ ಮತ್ತೆ ಎರಡನೇ ಬಾರಿ ಭರ್ತಿಯಾಗುವ ಹಂತದಲ್ಲಿದೆ. ಭಾರೀ ಮಳೆ ಮುಂದುವರೆದರೆ, ಸೆಪ್ಟೆಂಬರ್‌ ತಿಂಗಳ ಮೊದಲ ವಾರದಲ್ಲೇ ಭರ್ತಿಯಾಗುವ ಸಾಧ್ಯತೆಯಿದೆ.

Vani vilasa Sagara Dam Likely to Fill Up in Few Days Check Current Water Level

ಇದೀಗ ಮತ್ತೊಮ್ಮ ಭರ್ತಿಯಾದ್ರೆ, ವರ್ಷದದಲ್ಲಿ ಎರಡು ಬಾರಿ ತುಂಬಿದಂತಾಗಲಿದ್ದು, ಇದು ಹೊಸ ದಾಖಲೆ ಆಗಲಿದೆ. ಯಾಕೆಂದ್ರೆ, ವರ್ಷದಲ್ಲಿ ಎಡರನೇ ಬಾರಿ ಇದೇ ಮೊದಲು ತುಂಬಿದೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈಗಾಗಲೇ ಮಾರಿಕಣಿವೆ ಅಥವಾ ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಯಾಗುವ ಸನಿಹದಲ್ಲಿದೆ.

ಇದೀಗ ಮತ್ತೆ ಭರ್ತಿಯಾದ್ರೆ, ವರ್ಷದಲ್ಲಿ ಇದೇ ಮೊಟ್ಟ ಮೊದಲ ಬಾರಿ ಎರಡನೇ ಬಾರಿಗೆ ಭರ್ತಿಯಾಗಿ ಹೊಸ ಇತಿಹಾಸ ಸೃಷ್ಟಿಸಲಿದೆ. ಮತ್ತೊಂದೆಡೆ, ನಾಲ್ಕನೇ ಬಾರಿಗೆ ಕೋಡಿ ಬೀಲಲು ಸಜ್ಜಾಗಿದೆ. ಹಾಗಾದ್ರೆ ಇದೀಗ ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಈ ಕೆಳಗೆ ನೀಡಲಾಗಿದೆ ತಿಳಿಯಿರಿ.

ವಾಣಿ ವಿಲಾಸ ಸಾಗರವನ್ನ ಮಾರಿಕಣಿವೆ ಅಂತಲೂ ಕರೆಯುತ್ತಾರೆ. ಇದು ರಾಜ್ಯದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿದ್ದು, ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ. ಇದೀಗ ಈ ಜಲಾಶಯ ಇದುವರೆಗೂ ನಾಲ್ಕನೇ ಬಾರಿಗೆ ಭರ್ತಿಯಾಗಿ ದಾಖಲೆ ಸೃಷ್ಟಿಸಲು ಸಜ್ಜಾಗಿದೆ. ಮತ್ತೊಂದೆಡೆ, ಈಗಾಗಲೇ ಇದೇ ವರ್ಷದ ಜನವರಿಯಲ್ಲಿ ಕೋಡಿ ಬಿದ್ದಿದ್ದು, ಮತ್ತೊಮ್ಮೆ ಇದೀಗ ಕೋಡಿ ಬೀಳುವ ಸಹಿಹದಲ್ಲಿದೆ. ಇದು ನೆರವೇರಿದರೆ, ವರ್ಷದಲ್ಲಿ ಎರಡು ಬಾರಿ ಕೋಡಿ ಬಿದ್ದ ಹೊಸ ಇತಿಹಾಸ ಪಟ್ಟಿಗೆ ಸೇರಲಿದೆ.

ಈ ವರ್ಷದ ಆರಂಭದಲ್ಲಿ ವಾಣಿ ವಿಲಾದ ಜಲಾಶಯದ ಕೋಡಿ ಬಿದ್ದಿತ್ತು. ಅದು ಮಳೆ ನೀರಿನಿಂದಲ್ಲ, ಬದಲಾಗಿ ಭದ್ರ ಡ್ಯಾಂನಿಂದ ಬಿಟ್ಟ ನೀರಿನಿಂದ. ಇನ್ನೂ ಇದೀಗ ಮುಂಗಾರು ಮಳೆ ಆರ್ಭಟ ಮುಂದುವರೆದಿದ್ದು, ಪ್ರಸ್ತುತ ಆಗಸ್ಟ್‌ 29ರ ಶುಕ್ರವಾರ ನೀರಿನ ಮಟ್ಟ 126.85 ಅಡಿ ತಲುಪಿದ್ದು, ಭರ್ತಿಯಾಗಲು ಕೇವಲ 4 ಅಡಿಯಷ್ಟೇ ಬಾಕಿಯಿದೆ. ಭಾರೀ ಮಳೆ ಮುಂದುವರೆದರೆ, ಮುಂಬರು ಸೆಪ್ಟೆಂಬರ್ ಮೊದಲ ವಾರದಲ್ಲೇ ಭರ್ತಿಯಾಗುವ ಸಾಧ್ಯತೆಯಿದೆ.

ವಾಣಿ ವಿಲಾಸ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯ 130 ಅಡಿ (30 ಟಿಎಂಸಿ) ಆಗಿದ್ದು, ಇದೀಗ ನೀರಿನ ಮಟ್ಟ 126.85 ಇದ್ದರೆ, 724 ಕ್ಯೂಸೆಕ್‌ ಒಳಹರಿವು ದೆ. ಆದರೆ, ಹೊರಹರಿವಿಲ್ಲ. ಇನ್ನೂ ಕೇವಲ 4 ಅಡಿ ನೀರು ಬಂದ್ರೆ ಮತ್ತೆ ಭರ್ತಿಯಾಗಲಿದೆ. ಈ ಮೂಲಕ ಇದುವರೆಗೂ ನಾಲ್ಕೂ ಬಾರಿ ಕೋಡಿ ಬಿದ್ದಂತಾಗಲಿದೆ.

ಇತಿಹಾಸ ಬರೆದ ಜಲಾಶಯ: 1933ರಲ್ಲಿ ಜಲಾಶಯಕ್ಕೆ 135.25 ಅಡಿ ನೀರು ಸಂಗ್ರಹ ಆಗುವ ಮೂಲಕ ಮೊದಲ ಬಾರಿಗೆ ಡ್ಯಾಂ ಕೋಡಿ ಬಿದ್ದು, ಇತಿಹಾಸ ಸೃಷ್ಟಿಸಿತ್ತು. ಬಳಿಕ 2022 135, 2025ರ ಜನವರಿ ತಿಂಗಳಲ್ಲಿ 130 ಅಡಿ ನೀರು ಬಂದಿದ್ದು, ಈ ವೇಳೆ ಕೋಡಿ ಬಿದ್ದು ಮೂರನೇ ಬಾರಿ ದಾಖಲೆ ಸೃಷ್ಟಿಸಿತ್ತು. ಇದೀಗ ಮತ್ತೆ ಭರ್ತಿಯಾದ್ರೆ, ಇದು ನಾಲ್ಕನೇ ಬಾರಿ ಆಗಲಿದೆ.

ಯಾವ್ಯಾವ ವರ್ಷ ನೀರಿನ ಮಟ್ಟ ಎಷ್ಟು?: 1917ರಲ್ಲಿ 120.60 ಅಡಿ, 1918 - 121.30, 1919 - 128.30, 1920 - 125.50, 1932 - 125.50, ಅಡಿ, 1933 - 135.25 ಅಡಿ, 1934 - 130.24 ಅಡಿ, 1935 - 123.22 ಅಡಿ, 1956 - 125 ಅಡಿ, 1957 - 125.05 ಅಡಿ, 1958 - 124.50 ಅಡಿ, 2000 - 122.50 ಅಡಿ, 2021 - 125.50 ಅಡಿ, 2022 - 135 ಅಡಿ, 2024ರಲ್ಲಿ 128.40 ಅಡಿ, 2025 ಜನವರಿಯಲ್ಲಿ 130 ಅಡಿ ನೀರು ಸಂಗ್ರ ಆಗಿತ್ತು.

1907ರಲ್ಲಿ ನಿರ್ಮಾಣ ಆಗಿರುವ ಈ ಡ್ಯಾಂಗೆ ಸುಮಾರು 117 ವರ್ಷಗಳ ಕಾಲ ಇತಿಹಾಸ ಇದೆ. ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ "ವೇದಾ" ನದಿ ಕಡೂರಿನ ಬಳಿ "ಅವತಿ" ಎಂಬ ನದಿಯನ್ನು ಸೇರಿ ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ. ಇದು ಕೋಟೆನಾಡು ಅಂತಲೇ ಪ್ರಸಿದ್ಧಿ ಪಡಡದಿರುವ ಚಿತ್ರದುರ್ಗ ಜಿಲ್ಲೆಯ ಜೀನವಾಡಿಯೂ ಆಗಿದೆ. ಇದು ಭರ್ತಿಯಾದ್ರೆ ಸಾಕು ಈ ಭಾಗದ ರೈತರ ಮುಖದಲ್ಲಿ ಸಂತದ ಇಮ್ಮಡಿಯಾಗಲಿದೆ. ಯಾಕಂದ್ರೆ, ಮೊದಲೇ ಈ ಭಾಗದಲ್ಲಿ ಬಿಸಿಲಿನ ಪ್ರಮಾಣ ತುಸು ಹಚ್ಚಿರಲಿದೆ. ಅಲ್ಲದೆ, ಜಿಲ್ಲೆಯ ಬಹುತೇಕ ಹಳ್ಳಿಗಳ ಭೂಮಿಗಳು ಮಳೆಯಾಶ್ರಿತವಾಗಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+