Vani Vilasa Sagara Dam: ಅಬ್ಬರಿಸಿದ ಕೃತಿಕಾ ಮಳೆಯಿಂದ ವಿವಿ ಸಾಗರ ಜಲಾಶಯಕ್ಕೆ ಜೀವಕಳೆ: ನೀರಿನ ಮಟ್ಟ ಎಷ್ಟಿದೆ?
ಚಿತ್ರದುರ್ಗ, ಮೇ, 19: ಇದೀಗ ರಾಜ್ಯಾದ್ಯಂತ ಕೃತಿಕಾ ಮಳೆಯದ್ದೇ ಅಬ್ಬರ ಜೋರಾಗಿದೆ. ಅದರಲ್ಲೂ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಮತ್ತೊಂದೆಡೆ ಭಾರೀ ಮಳೆಯಿಂದ ಇದೀಗ ವಿವಿ ಸಾಗರ ಡ್ಯಾಂಗೆ ಜೀವಕಳೆ ಬಂದಂತಾಗಿದೆ. ಹಾಗಾದರೆ ಇದೀಗ ಪ್ರಸ್ತುತ ಇಂದು (ಮೇ 19) ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಉತ್ತಮ ಮಳೆಯಾಗಿದ್ದರಿಂದ ಹೊಸದುರ್ಗ ತಾಲ್ಲೂಕಿನ ಕೆಲ್ಲೋಡ್ ಚೆಕ್ ಡ್ಯಾಂ ಭರ್ತಿಯಾಗಿ ಮೈದುಂಬಿ ಹರಿದು, ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯದ ಕಡೆ ನೀರು ಹರಿದು ಬರುತ್ತಿದೆ. ಸಂಪೂರ್ಣವಾಗಿ ಬತ್ತಿ ಹೋಗಿದ್ದ ಕೆಲ್ಲೋಡ್ ಚೆಕ್ ಡ್ಯಾಂ ಇದೀಗ ಒಂದೇ ದಿನದಲ್ಲಿ ಮೈದುಂಬಿ ಹರಿಯುತ್ತಿದ್ದು, ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.

ಪ್ರಸಕ್ತ ಸಾಲಿನಲ್ಲಿ ಆರಂಭದಲ್ಲಿ ಮುಂಗಾರು ಮಳೆ ಅಬ್ಬರಿಸಿದ್ದು, ರೈತರು ಉತ್ತಮ ಬೆಳೆ ಬೆಳೆಯುವ ನಿರೀಕ್ಷೆಯಲ್ಲಿದ್ದಾರೆ. 2022ರಲ್ಲಿ ಎರಡನೇ ಬಾರಿಗೆ ಭರ್ತಿಯಾಗಿ ಕೋಡಿ ಬಿದ್ದಿದ್ದ ವಿವಿ ಸಾಗರ ಡ್ಯಾಂಗೆ ಕಳೆದ ವರ್ಷ ಮಳೆ ಇಲ್ಲದ ಕಾರಣ ನೀರು ಹರಿದು ಬಂದಿರಲಿಲ್ಲ. ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು 300 ರಿಂದ 500 ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎನ್ನಬಹುದು.
ಇನ್ನು ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇನ್ನು ಒಂದು ವಾರ ಹೀಗೆ ಮಳೆ ಮುಂದುವರೆದರೆ ವಿವಿ ಸಾಗರಕ್ಕೆ ಅರ್ಧದಷ್ಟು ನೀರು ಬರುವುದರದಲ್ಲಿ ಯಾವುದೇ ಅನುಮಾನವಿಲ್ಲ.
ತಾಲೂಕುವಾರು ಮಳೆ ವಿವರ
* ಚಿತ್ರದುರ್ಗ -1ರಲ್ಲಿ 24.0, ಚಿತ್ರದುರ್ಗ -2ರಲ್ಲಿ 33.7, ಭರಮಸಾಗರ -9.3, ಹೀರೆಗುಂಟನೂರು -4.5, ತುರುವನೂರು -13.4, ಸಿರಿಗೆರೆ -12.0, ಐನಹಳ್ಳಿಯಲ್ಲಿ 35.4 ಮಿಲಿ ಮೀಟರ್ ಮಳೆಯಾಗಿದೆ.
* ಹಿರಿಯೂರು-18.2,ಇಕ್ಕನೂರು-35.2, ಈಶ್ವರಗೆರೆ-16.0, ಬಬ್ಬೂರು-24.8 ಮಿಲಿ ಮೀಟರ್ ಮಳೆಯಾಗಿದ್ದು, ಸೂಗೂರಿನಲ್ಲಿ ಮಳೆಯಾದ ಬಗ್ಗೆ ವರದಿಯಾಗಿಲ್ಲ.
* ಹೊಸದುರ್ಗ -120.6, ಬಾಗೂರು -40.3, ಮಡದಕೆರೆ-51.2, ಮತ್ತೊಡ್-14.4, ಶ್ರೀರಾಂಪುರ -15.0 ಮಿಮೀ ಮಳೆಯಾಗಿದೆ.
* ಚಳ್ಳಕೆರೆ ತಾಲೂಕಿನಲ್ಲೂ ಮಳೆಯಾಗಿದ್ದು, ಚಳ್ಳಕೆರೆ -5.2, ನಾಯಕನಹಟ್ಟಿ -6.4, ತಳುಕು -4.2 ಹಾಗೂ ಡಿ.ಮರಿಕುಂಟೆಯಲ್ಲಿ 2.4 ಮಿಲಿ ಮೀಟರ್ ಮಳೆಯಾಗಿದೆ.
* ಇನ್ನು ಅರೆ ಮಲೆನಾಡು ಹೊಳಲ್ಕೆರೆ ಭಾಗದಲ್ಲೂ ಸಹ ಕೃತಿಕಾ ಮಳೆಯಾಗಿದೆ. ಹೊಳಲ್ಕೆರೆ -16.8, ರಾಮಗಿರಿ -25.4, ಚಿಕ್ಕಜಜೂರು -29.7, ಬಿ.ದುರ್ಗ -26.0, ಹೆಚ್.ಡಿ.ಪುರ -24.4 ಹಾಗೂ ತಾಳ್ಯದಲ್ಲಿ 3.2 ಮಿಲಿ ಮೀಟರ್ ಮಳೆಯಾಗಿದೆ.
* ಮೊಳಕಾಲ್ಮುರಿನ ರಾಯಾಪುರ- 2.2, ಬೀಜಿಕೆರೆ-2.5, ರಾಂಪುರ-3.2 ಮಿಲಿ ಮೀಟರ್ ಮಳೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
-
Bengaluru Rain: ಬೆಂಗಳೂರಲ್ಲಿ ಮಳೆ ಬಂದಾಗ ಪವರ್ ಕಟ್ ಆಗುವುದ್ಯಾಕೆ, ಡಾಕ್ಟರ್ ಪ್ರಶ್ನೆಗೆ ನೆಟ್ಟಿಗರು ಹೇಳಿದ್ದೇನು -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ












Click it and Unblock the Notifications