ಟಿಪ್ಪು ಜಯಂತಿ ಆಚರಣೆಯಿಂದ ದಲಿತರಿಗೆ ಅವಮಾನ: ಆರ್ ಎಸ್ ಎಸ್

Posted By:
Subscribe to Oneindia Kannada

ಚಿತ್ರದುರ್ಗ, ನವೆಂಬರ್, 3: ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡುವುದರ ಮೂಲಕ ದಲಿತರನ್ನು ಸ್ವಾಭಿಮಾನವನ್ನು ಅವಮಾನಿಸಲು ಮುಂದಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರು ತಿಳಿಸಿದ್ದಾರೆ.

ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಆರ್ ಎಸ್ ಎಸ್ ಮತ್ತು ಇತರೆ ಸಂಘಟನೆಗಳು ಬುಧವಾರ ಚಿತ್ರದುರ್ಗದ್ಲಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರು ಈ ರೀತಿಯ ಹೇಳಿಕೆ ನೀಡುವುದರ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ. [ಕನ್ನಡ ವಿರೋಧಿ ಟಿಪ್ಪು ಜಯಂತಿ ಏಕೆ?: ಚಿಮೂ ಆಕ್ರೋಶ]

Tipu Jayanthi an insult to Dalits in Karnataka: RSS

ಟಿಪ್ಪು ಜಯಂತಿಯನ್ನು ಆಚರಿಸುವುದು 'ಒನಕೆ ಓಬವ್ವ' ಅವರನ್ನು ಹಿಯಾಳಿಸಿದಂತೆ ಆ ಮೂಲಕ ಇಡೀ ಒನಕೆ ಓಬವ್ವ ಅವರ ಇಡೀ ದಲಿತ ಸಮುದಾಯವನ್ನೇ ರಾಜ್ಯ ಸರ್ಕಾರ ಅವಮಾನಿಸಲು ಮುಂದಾಗಿದೆ ಎಂದು ಸಂಘ ಪರಿವಾರ ಕಾರ್ಯಕರ್ತರು ಹೇಳಿದರು.

ಒನಕೆ ಓಬವ್ವ ಅವರು ಟಿಪ್ಪುವಿನ ತಂದೆ ಹೈದರಾಲಿ ಅವರು ಚಿತ್ರದುರ್ಗ ಕೋಟೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಓಬವ್ವ ಅವರ ವಿರುದ್ಧ ವಿರೋಚಿತವಾಗಿ ಹೋರಾಟಿ ಪ್ರಾಣ ತ್ಯಜಿಸಿದ್ದಳು ಎಂದು ಅವರು ಹೇಳಿದರು. [ಟಿಪ್ಪು ಜಯಂತಿ ಆಚರಿಸುವ ಉದ್ದೇಶವೇನು: ಹೈಕೋರ್ಟ್ ಪ್ರಶ್ನೆ]

ಟಿಪ್ಪು ಜಯಂತಿ ಆಚರಿಸುವುದರಿಂದ ಪರಿಶಿಷ್ಟ ಸಮುದಾಯದ ಚಿತ್ರದುರ್ಗ ದೊರೆ ಮದಕರಿನಾಯಕ ಮತ್ತು ದಲಿತ ಮಹಿಳೆ ಒನಕೆ ಓಬವ್ವ ಅವರನ್ನು ಅವಮಾನಿಸಿದಂತೆ ಆಗುತ್ತದೆ ಎಂದು ಆರ್ ಎಸ್ ಎಸ್ ನಾಯಕರು ಹೇಳಿದ್ದಾರೆ.

ಪ್ರತಿಭಟನೆಯಲ್ಲಿ ಬಿಜೆಪಿ, ಭಜರಂಗ ದಳ, ಆರ್ ಎಸ್ ಎಸ್, ನಾಯಕ ಸಮುದಾಯದ 1500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಪ್ತತಿಭಟನೆಯಲ್ಲಿ ಮದಕರಿ ನಾಯಕ ಸಂರಕ್ಷಣ ವೇದಿಕೆಯ ಹಲವು ಮಹಿಳೆಯರು ಒನಕೆ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಟಿಪ್ಪು ಒಬ್ಬ ಹಿಂದೂ ವಿರೋಧಿಯಾಗಿದ್ದು, ಕೊಡಗಿನಲ್ಲಿ ಹಲವಾರು ಕೊಡವರನ್ನು ಹತ್ಯೆ ಮಾಡಿದ್ದಾನೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಟಿಪ್ಪು ಜಯಂತಿ ಆಚರಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರು ಕೊಡಗಿನಲ್ಲಿ ಕಳೆದ ವರ್ಷ ಪ್ರತಿಭಟನೆ ಹಮ್ಮಿಕೊಂಡಿರದ್ದರು.

ಕೊಡಗಿನಲ್ಲಿ ಅಂದು ನಡೆದ ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ನ ಮುಖಂಡರೊಬ್ಬರು ಮೃತಪಟ್ಟಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On Wednesday, the RSS organised a protest in Chitradurga district, claiming that the celebration was an insult to Onake Obavva, a Dalit woman who died fighting Tipu Sultan’s father Hyder Ali, who attempted to invade the Chitradurga Fort.
Please Wait while comments are loading...