• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರದುರ್ಗ: ಹಂದಿ ಕದಿಯಲು ಬಂದ ಕಳ್ಳರಿಂದ ಮೂವರ ಕೊಲೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಆಗಸ್ಟ್ 17: ಹಂದಿಗಳನ್ನು ಕಳವು ಮಾಡಲು ಬಂದವರಿಂದ ಮೂವರನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

   Sri Ramulu, ಸಚಿವರ ಆರೋಗ್ಯದಲ್ಲಿ ಚೇತರಿಕೆ | Oneindia Kannada

   ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

   ಕೋವಿಡ್ -19 ಗೆ ಹಿರಿಯೂರು ಹಾಲಿ ನಗರಸಭಾ ಸದಸ್ಯ ಸಾವುಕೋವಿಡ್ -19 ಗೆ ಹಿರಿಯೂರು ಹಾಲಿ ನಗರಸಭಾ ಸದಸ್ಯ ಸಾವು

   ಹಂದಿ ಕಾಯುತ್ತಿದ್ದ ಮಾರೇಶ್, ಸೀನಪ್ಪ ಹಾಗೂ ಯಲ್ಲೇಶ್ ಮೃತರು ಎಂದು ಗುರುತಿಸಲಾಗಿದೆ. ಕೊಲೆಯಾದ ಜಾಗದಲ್ಲಿ ವಾಹನಗಳಲ್ಲಿ ಬಂದು ಕಾರದ ಪುಡಿ ಎರಚಿ ಕೊಲೆ ಮಾಡಿರುವ ಕುರುಹು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

   ಹಂದಿಗಳನ್ನು ಕದಿಯಲು ಬಂದವರಿಂದ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ವಿಷಯ ತಿಳಿದ ನಾಯಕನಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಾಯಕನಹಟ್ಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಬಳಿ ನಾಲ್ಕು ಹಂದಿ ಶೆಡ್ ಗಳಿದ್ದು, ಇದರಲ್ಲಿ ನೂರಕ್ಕೂ ಹೆಚ್ಚು ಹಂದಿಗಳಿದ್ದವು. ರಾತ್ರಿ 12ರ ಸುಮಾರಿಗೆ ಹಂದಿ ಕಳ್ಳತನ ಮಾಡುವ ಗುಂಪೊಂದು ಏಕಾಏಕಿ ಶೆಡ್ ಗಳ ಮೇಲೆ ದಾಳಿ ನಡೆಸಿದ್ದಾರೆ.

   ನಂತರ ಖಾರದ ಪುಡಿ ಎರಚಿ ಹಂದಿ ಶೆಡ್ ಗಳಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಸೀನಪ್ಪ ಎಂಬ ವ್ಯಕ್ತಿಯ ತಲೆಯನ್ನು ಕತ್ತರಿಸಿದ್ದಾರೆ. ಯಲ್ಲೇಶ ಮತ್ತು ಮಾರೇಶ ಎಂಬ ಯುವಕರ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

   English summary
   Chitradurga: 3 people murdered by thieves who cam to steal pig in Nayakanahatti. Know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X