ಚಿತ್ರದುರ್ಗ: "90"ಗೆ ದುಡ್ಡು ಕೊಡ್ಲಿಲ್ಲವೆಂದು ತಾಯಿಯನ್ನೇ ಕೊಲೆಗೈದ ಪಾಪಿ ಮಗ
ನವೆಂಬರ್, 26: ಮಧ್ಯಪಾನ ಮಾಡಲು ಹಣ ಕೊಡಲಿಲ್ಲವೆಂದು ಕೋಪಿತಗೊಂಡು ಮಗನೊಬ್ಬ ತನ್ನ ಜನ್ಮ ನೀಡಿದ ತಾಯಿಯನ್ನು ಕೊಲೆ ಮಾಡಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಂಜಿನಮ್ಮ (58) ವರ್ಷ ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ. ಶಿವಾರೆಡ್ಡಿ (37) ಕೊಲೆ ಮಾಡಿದ ಪಾಪಿ ಮಗ ಎನ್ನಲಾಗಿದೆ. ಆರೋಪಿ ಶಿವಾರೆಡ್ಡಿ10 ವರ್ಷಗಳಿಂದ ಮದ್ಯಪಾನ ಮಾಡುವ ದುಶ್ಚಟವಿದ್ದು, ಕಳೆದ 8 ವರ್ಷಗಳಿಂದ ಹೆಂಡತಿಯಿಂದ ದೂರ ಉಳಿದಿದ್ದನು. ಇದರಿಂದ ಪ್ರತಿನಿತ್ಯವೂ ಕುಡಿತಕ್ಕೆ ದಾಸನಾಗಿದ್ದನು.

ಇದರಿಂದ ತಾಯಿಯೊಂದಿಗೆ ಮದ್ಯಪಾನ ಮಾಡಲು ದುಡ್ಡು ಕೊಡುವುದಿಲ್ಲ ಎಂದು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದನು. ಕುಡಿಯಲು ಹಣ ನೀಡದೆ ಇದ್ದಾಗ ಆಕ್ರೋಶಗೊಂಡ ಮಗ ಅಂಜಿನಮ್ಮ ಜೊತೆ ಜಗಳವಾಡಿ ಮನೆಯಲ್ಲಿದ್ದ ಚಾಕುವಿನಿಂದ ತಾಯಿಯ ಹೊಟ್ಟೆಯ ಬಲಭಾಗಕ್ಕೆ ಇಂದು ತಿವಿದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಅಂಜಿನಮ್ಮ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಇನ್ನು ಘಟನೆಗೆ ಸಂಬಂಧಪಟ್ಟಂತೆ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಕೆ ಕೈಗೊಂಡಿದ್ದಾರೆ ಎನ್ನಲಾಗಿದೆ.
ಬಸ್ ಚಾಲಕನಿಗೆ ಹೃದಯಾಘಾತ
ಖಾಸಗಿ ಬಸ್ ಚಾಲಕ ಬಸ್ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ, ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಿರಿಯೂರು ನಗರದ ಗಾಂಧಿ ಸರ್ಕಲ್ ನೆಹರೂ ಮಾರುಕಟ್ಟೆ ಮುಂಭಾಗದಲ್ಲಿ ನಡೆದಿದೆ. ಚಳ್ಳಕೆರೆ ತಾಲ್ಲೂಕಿನ ದೇವರಮರಿಕುಂಟೆ ಗ್ರಾಮದ ಕುಮಾರ್ (45)ಮೃತ ಬಸ್ ಚಾಲಕ ಎಂದು ಗುರುತಿಸಲಾಗಿದೆ. ರೆಡ್ಡಿಹಳ್ಳಿ ಗ್ರಾಮದ ಮಂಜುನಾಥ ಲ್ಲಿ ಹಲವಾರು ವರ್ಷಗಳಿಂದ ಬಸ್ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇಂದು ಹಿರಿಯೂರು ನಗರದ ಖಾಸಗಿ ಬಸ್ ನಿಲ್ದಾಣದಿಂದ ಹೇಮದಳ, ರಂಗೇನಹಳ್ಳಿ, ಬೆಳಗೆರೆ ಕಡೆ ಹೋರಾಟಾಗ ನಗರದಲ್ಲಿದ್ದಾಗ ಚಾಲಕನಿಗೆ ಹಠಾತ್ ಹೃದಯಘಾತ ಸಂಭವಿಸಿದೆ. ಇದರಿಂದ ದೊಡ್ಡ ದುರಂತ ತಪ್ಪಿದೆ. ನಿಯಂತ್ರಣ ಇಲ್ಲದ ಬಸ್ ರಸ್ತೆ ಪಕ್ಕದಲಿದ್ದ ಟೆಲಿಪೋನ್ ಕಂಬಕ್ಕೆ ಗುದ್ದಿದೆ. ಅಲ್ಲಿದ್ದ ಫರ್ನಿಚರ್ ಅಂಗಡಿಯ ಮುಂಭಾಗದಲ್ಲಿದ್ದ ಚೇರ್ ಸೇರಿದಂತೆ ಕೆಲವು ವಸ್ತುಗಳು ಮುರಿದು ಬಿದ್ದು ದೊಡ್ಡ ಅನಾಹುತ ತಪ್ಪಿದೆ. ಸದ್ಯ ಈ ಪ್ರಕರಣ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications