ಹಿರಿಯೂರು ಬಳಿ ಭೀಕರ ಬಸ್ ಅಪಘಾತ ಪ್ರಕರಣ: ಚಿಕಿತ್ಸೆ ಫಲಕಾರಿಯಾಗದೇ ಚಾಲಕ ಸಾವು
Chitradurga Tragedy: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಗುರುವಾರ ಮುಂಜಾನೆ ಲಾರಿ ಡಿಕ್ಕಿಯಾಗಿ ಖಾಸಗಿ ಬಸ್ ಹೊತ್ತಿ ಉರಿದಿತ್ತು. ಘಟನೆಯಲ್ಲಿ ಹಲವರು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಬಸ್ ಚಾಲಕ ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹಿರಿಯೂರು ತಾಲ್ಲೂಕಿನ ಗೋರ್ಲತ್ತು ಕ್ರಾಸ್ ಬಳಿ ಖಾಸಗಿ ಬಸ್ ಹಾಗೂ ಕಂಟೇನರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಈ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಇನ್ನೂ ಈ ವೇಳೆ ಗಂಭೀರವಾಗಿ ಗಾಯಗೊಂಡು ಕೆಎಂಸಿ-ಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸ್ ಚಾಲಕ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಹಾವೇರಿ ಮೂಲದ ಮೊಹಮ್ಮದ್ ರಫೀಕ್ ಹುಲಗೂರ (45) ಮೃತಪಟ್ಟವರು.
ಹಾವೇರಿ ಜಿಲ್ಲೆ ಶಿಗ್ಗಾಂವಿ ನಿವಾಸಿಯಾಗಿದ್ದ ರಫೀಕ್ ಅವರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಬಹು ಅಂಗಾಂಗ ವೈಫಲ್ಯದಿಂದಾಗಿ ಚಿಕಿತ್ಸೆ ಫಲಕಾರಿ ಆಗದೆ ಅವರು ಶುಕ್ರವಾರ (ಡಿಸೆಂಬರ್ 26) ಬೆಳಗ್ಗೆ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಿರಿಯೂರು ತಲ್ಲೂಕಿನ ಗೊರ್ಲತ್ತು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್ ಹೊತ್ತಿ ಉರಿದಿತ್ತು.
ವೈದ್ಯರು ಹೇಳಿದ್ದೇನು?: ಆಪರೇಷನ್ ಬಳಿಕ ಅವರ ಜೀವಕ್ಕೆ ಯಾವುದೇ ಗ್ಯಾರಂಟಿ ನೀಡಲು ಸಾಧ್ಯ ಇಲ್ಲ ಎಂದು ವೈದ್ಯರು ಕುಟುಂಬಕ್ಕೆ ತಿಳಿಸಿದ್ದರು. ರಫೀಕ್ ಅವರ ಪತ್ನಿ ನೀಡಿರುವ ಮಾಹಿತಿ ಪ್ರಕಾರ, ಅಪಘಾತದಲ್ಲಿ ಅವರ ಹೊಟ್ಟೆಯ ಭಾಗಕ್ಕೆ ತೀವ್ರ ಪೆಟ್ಟುಬಿದ್ದಿತ್ತು. ಇದರಿಮದ ಹೊಟ್ಟೆಯ ಒಳಗಿರುವ ಕೆಲವು ಭಾಗಗಳಿಗೆ ಹಾನಿ ಆಗಿದೆ. ವೈದ್ಯರು ಆಪರೇಷನ್‌ಗೆ ಮುನ್ನವೇ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದರು. ಆದರೂ ಆಪರೇಷನ್‌ಗೆ ನಾವು ಅನುಮತಿ ನೀಡಿದ್ದೇವು ಎಂದು ಹೇಳಿದ್ದಾರೆ.
ಆಪರೇಷನ್ ಆದ ಬಳಿಕ ವಾರ್ಡ್‌ಗೆ ಸ್ಥಳಾಂತರಿಸಿದರು. ಮರುದಿನ ಅಂದರೆ, ಶುಕ್ರವಾರ ಬೆಳಗ್ಗೆ 6:30ರ ಸುಮಾರಿಗೆ ವೈದ್ಯರು ರಫೀಕ್ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಇದೀಗ ಮೊಹಮ್ಮದ್ ರಫೀಕ್ ನಿಧನದಿಂದ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಖಾಸಗಿ ಕಂಪನಿ ಉದ್ಯೋಗಿ ಸಾವು: ಮತ್ತೊಂದೆಡೆ, ಈ ದುರಂತದಲ್ಲಿ ಪ್ರಾಣಪಾಯದಿಂದ ಪಾರಾದ ಗಗನಶ್ರೀ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಘಟನೆಯ ಭೀಕರತೆಯನ್ನ ಹಂಚಿಕೊಂಡಿದ್ದಾರೆ.
ಬದ್‌ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದ ಮೇಲಿನ ಸೀಟ್‌ನಲ್ಲಿ ಮಲಗಿದ್ದ ನಾನು, ರಕ್ಷಿತಾ ಜಿಗಿದು ಹೊರಗಡೆ ಬಂದೆವು. ಆದರೆ, ರಶ್ಮಿ ಒಳಗಡೆ ಸಿಲುಕಿಕೊಂಡಿದ್ದರು. ನಾವಿದ್ದ ಸೀಟ್‌ನ ಹತ್ತಿರ ಮೂರನೇ ಸೀಟ್ ಸಮೀಪಕ್ಕೆ ಬೆಂಕಿ ಆವರಿಸಿತ್ತು. ಆಗ ತಕ್ಷಣವೇ ನಾನು, ರಕ್ಷಿತಾ ಜಿಗಿದು ಹೊರಗಡೆ ಹಾರಿದೆವು. ರಶ್ಮಿ ಕೂಡ ಹಾರಿ ಹೊರಗಡೆ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದವು. ಅಷ್ಟರಲ್ಲಿ ಆಗಲೇ ಬೆಂಕಿಯ ಜ್ವಾಲೆಯೂ ಬಸ್ ಪೂರ್ತಿ ಆವರಿಸಿಬಿಟ್ಟಿತ್ತು ಎಂದು ಹೇಳಿದರು. ಒಟ್ಟಿನಲ್ಲಿ ಗಗನಶ್ರೀ, ರಕ್ಷಿತಾ ಪ್ರಾಣಾಪಯದಿಂದ ಪಾರಾಗಿದ್ದು,ರಶ್ಮಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಮೂವರು ಬೆಂಗಳೂರಿನ ಡ್ಯೆಲೈಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ರಜೆ ಹಿನ್ನೆಲೆ ಇವರು ಗೋಕರ್ಣಕ್ಕೆ ತೆರಳುತ್ತಿದ್ದರು. ಈ ವೇಳೆ ದುರಂತ ಸಂಭವಿಸಿದೆ.












Click it and Unblock the Notifications