ಕಾಂಗ್ರೆಸ್ ಮೃದು ಹಿಂದುತ್ವ ಪಾಲಿಸಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

Posted By: Nayana
Subscribe to Oneindia Kannada

ಚಿತ್ರದುರ್ಗ, ಡಿಸೆಂಬರ್ 27 : ಕಾಂಗ್ರೆಸ್ ಮೃದು ಹಿಂದುತ್ವ ಪಾಲಿಸುವುದಿಲ್ಲ. ನಾನು ಹಿಂದು, ಜಾತ್ಯಾತೀತ ಬದ್ಧತೆ ಇದೆ. ಮಹಾದಾಯಿ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಅಗತ್ಯ ನಮಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಯಡಿಯೂರಪ್ಪಗೆ ಏನೂ ಗೊತ್ತಿಲ್ಲ, ಆತನ ಸಲಹೆ ನಮಗೆ ಬೇಕಿಲ್ಲ: ಸಿ.ಎಂ

ಹೊಳಲ್ಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ವಿಚಾರದಲ್ಲಿ ಯಡಿಯೂರಪ್ಪ ರೈತರಿಗೆ ಸುಳ್ಳು ಹೇಳಿದ್ದಾರೆ. ಯಡಿಯೂರಪ್ಪ ನಾಟಕ ಆಡುತ್ತಾ ರೈತರಿಗೆ ಮೋಸ ಮಾಡುತ್ತಿದ್ದಾರೆ, ಬಿಎಸ್ ಯಡಿಯೂರಪ್ಪ ಮಾತಿಗೆ ತಪ್ಪಿದ್ದಾರೆ. ಬಿಜೆಪಿ ವಿರುದ್ಧ ಮಹಾದಾಯಿ ಹೋರಾಟಗಾರರ ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ನಮ್ಮ ಕೈಲಾದ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

Siddaramaiah

ಅನಂತ್ ಕುಮಾರ್ ಹೆಗಡೆ ಯಕಶ್ಚಿತ್ ರಾಜಕಾರಣಿ. ಆರ್ ಎಸ್ ಎಸ್ ಕಂಡರೆ ನಮಗೆ ಭಯ ಇಲ್ಲ ಅರ್ ಎಸ್ ಎಸ್ ಕಿಡಿ ಹಚ್ಚುತ್ತದೆ ಎಚ್ಚರವಿರಿ ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ. ಚುನಾವಣಾ ಸಂದರ್ಭದಲ್ಲಿ ಹೊರ ರಾಜ್ಯದಿಂದ ಬರುವ ಆರ್ ಎಸ್ ಎಸ್ ನವರು ಬೆಂಕಿಹಚ್ಚುವ ಕೆಲಸ ಮಾಡುತ್ತಾರೆ, ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಎಚ್ಚರ ವಹಿಸುವಂತೆ ಸೂಚನೆ ನೀಡಿದ್ದೇನೆ. ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗೆ ಪತ್ರಬರೆದು ಮಾತುಕತೆಗೆ ಆಹ್ವಾನಿಸಿದ್ದೇನೆ ಎಂದು ಮಾಹಿತಿ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief minister Siddaramaiah clarified that Congress is not following soft Hindutva in the state. Talking to the reporters he said that RSS and other Hindu organisations are trying to divide the society in the state as congress is meant for secularism in society.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ