ಚಿತ್ರದುರ್ಗ: ವೈದ್ಯನಿಗೆ ₹1,27,00,000 ವಂಚಿಸಿದ ಆರೋಪಿಗಳನ್ನು ಬಗ್ಗುಬಡಿದ ಪೊಲೀಸರು
ಚಿತ್ರದುರ್ಗ, ಸೆಪ್ಟೆಂಬರ್, 08: ಸೈಬರ್ ವಂಚಕರು ಸಾಮಾನ್ಯ ಜನರಿಂದ ಹಣ ದೋಚುತ್ತಿರುವ ಘಟನೆಗಳು ಹೆಚ್ಚಾಗುತ್ತಲಿವೆ. ಅಲ್ಲದೆ, ಹಲವು ಸೈಬರ್ ಕಳ್ಳರನ್ನು ಪೊಲೀಸರು ಸದೇ ಬಡಿದ ಘಟನೆಗಳು ನಡೆದಿವೆ. ಇನ್ನು ಇದೀಗ ಸೈಬರ್ ವಂಚಕರಿಂದ 1 ಕೋಟಿ 27 ಲಕ್ಷ ರೂಪಾಯಿ ಹಣ ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಚಿತ್ರದುರ್ಗ ಸೈಬರ್ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ವೈದ್ಯರಾದ ಶ್ರೀನಿವಾಸ್ ಶೆಟ್ಟಿಯವರಿಗೆ ಕಳೆದ ಆಗಸ್ಟ್ 25ರಂದು ಸೈಬರ್ ವಂಚಕರು ಕರೆ ಮಾಡಿ ನಾವೂ TRAI & ಮುಂಬೈ ಪೊಲೀಸರು ಎಂದು ಹೇಳಿ ಅವರ ಖಾತೆಯಿಂದ ಖಾತೆಗೆ 1 ಕೋಟಿ 27 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡಿದ್ದರು. ಈ ಕುರಿತು ನಗರದ CEN ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ದೂರಿನ ಮೇರೆಗೆ ಪೊಲೀಸ್ ಅಧೀಕ್ಷಕರಾದ ರಂಜಿತ್ ಬಂಡಾರು ಐ.ಪಿ.ಎಸ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಕುಮಾರಸ್ವಾಮಿ ಎಸ್.ಜೆ. ಇವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರು ಸಿಇಎನ್ ಪೊಲೀಸ್ ಠಾಣೆರವರಾದ ಉಮೇಶ್ ಈಶ್ವರ್ ನಾಯ್ಕ್ ಅವರ ನಾಯಕತ್ವದಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ವೆಂಕಟೇಶ್ ಎನ್., D.S.B ಬ್ರಾಂಚ್ ಪಿಎಸ್‌ಐ ಸತೀಶ್ ನಾಯ್ಕ್, ಸಿಬ್ಬಂದಿಗಳಾದ ಕೆಂಚಪ್ಪ, ಗಗನ್ ದೀಪ್ ಅವರೊಂದಿಗೆ ಪ್ರಕರಣವನ್ನು ಬೆನ್ನತ್ತಿದ್ದರು.
ಸೆಪ್ಟೆಂಬರ್ 5ರಂದು ಬಂಧನ: ಅಸ್ಸಾಂನ ಶಿವಸಾಗರ್ ಜಿಲ್ಲೆಯ ಭಾನ್ ಮುಖ್ ಪತ್ತರ್ ಗ್ರಾಮಕ್ಕೆ ಹೋಗಿ ಆರೋಪಿ ಪಬನ್ ಕುಮಾರ್ ಬೋರ್ ಪಾತ್ರಾರವರನ್ನು ಸೆಪ್ಟೆಂಬರ್ 5ರಂದು ಬಂಧಿಸಿದ್ದು, ಅವನಿಂದ ಮಾಹಿತಿ ಪಡೆದು ಇನ್ನೊಬ್ಬ ಆರೋಪಿ ಜಾಕೀರ್ ಆಲಂ ಬೋರಾನನ್ನು ಸೆಪ್ಟೆಂಬರ್ 07ರಂದು ವಿಚಾರಣೆಗೆ ಒಳಪಡಿಸಿದ್ದರು. ಇನ್ನು ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ತಿಳಿದುಬಂದಿದ್ದು, ಬಂಧಿಸಿ ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
16,89,000 ರೂಪಾಯಿ ಫ್ರೀಜ್: ಈ ಪ್ರಕರಣದಲ್ಲಿ ಇದುವರೆಗೆ ವಿವಿಧ ಖಾತೆಗಳಲ್ಲಿ 16,89,000 ರೂಪಾಯಿ ಫ್ರೀಜ್ ಮಾಡಿಸಿದ್ದು, ಮತ್ತಷ್ಟು ಹಣವನ್ನು ಫ್ರೀಜ್ ಮಾಡಿಸಿ ದೂರುದಾರರಿಗೆ ಹಿಂದಿರುಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಕರಣ ವರದಿಯಾದ ಕೇವಲ 15 ದಿನಗಳಲ್ಲಿ ಪ್ರಕರಣವನ್ನು ಭೇಧಿಸಿದ ಸಿಇಎನ್ ಠಾಣೆಯ ಎಲ್ಲಾ ಅಧಿಕಾರಿ ಮತ್ತು ತಾಂತ್ರಿಕ ವಿಶ್ಲೇಷಣೆ ನಡೆಸಿದ ಸಿಬ್ಬಂದಿಯರಿಗೆ ಪೊಲೀಸ್ ಅಧೀಕ್ಷಕರು ಶಾಘಿಸಿರುತ್ತಾರೆ.












Click it and Unblock the Notifications