ಮುರುಘಾ ಮಠದ ನೂತನ ಆಡಳಿತಾಧಿಕಾರಿಯಾಗಿ ನಿವೃತ್ತ ನ್ಯಾಯಾಧೀಶ ವಸ್ತ್ರಮಠ್ ಅಧಿಕಾರ ಸ್ವೀಕಾರ
ಚಿತ್ರದುರ್ಗ, ಸೆಪ್ಟೆಂಬರ್ 3 : ಮುರುಘಾ ಮಠದ ನೂತನ ಆಡಳಿತ ಅಧಿಕಾರಿಯಾಗಿ ನಿವೃತ್ತ ನ್ಯಾಯಮೂರ್ತಿ ಎಸ್.ಬಿ. ವಸ್ತ್ರಮಠ ಶನಿವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಈ ಹಿಂದೆ ಮಾಜಿ ಶಾಸಕ ಎಸ್.ಕೆ. ಬಸವರಾಜನ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ವಸತಿ ನಿಲಯದ ವಾರ್ಡನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಎಸ್ ಕೆ ಬಸವರಾಜನ್‌ರನ್ನು ಆಡಳಿತ ಅಧಿಕಾರಿಯಿಂದ ತೆಗೆದು ಹಾಕಿದ್ದರು. ಇವರ ತೆರವಾದ ಸ್ಥಾನಕ್ಕೆ ವಸ್ತ್ರಮಠ್‌ರನ್ನು ಆಯ್ಕೆ ಮಾಡಿದ್ದಾರೆ. ಮುರುಘಾ ಶ್ರೀಗಳ ಬಂಧನವಾದ ಎರಡು ದಿನಗಳ ನಂತರ ನಿವೃತ್ತ ನ್ಯಾಯಮೂರ್ತಿ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಹಿಂದೆ ಮುರುಘಾ ಶರಣರು ಎಸ್.ಬಿ. ವಸ್ತ್ರಮಠದ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಬಂಧನವಾದ ಬಳಿಕ ಅಧಿಕಾರ ವಹಿಸಿಕೊಂಡಿದ್ದಾರೆ.
ಇದೀಗ ಮಠದ ಆಡಳಿತ ಮತ್ತು ಸಂಪೂರ್ಣ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಇವರು ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.

ಇನ್ನು ಮುರುಘಾ ಶರಣರ ಮೇಲೆ ಆರೋಪ ಮಾಡಿರುವ ಅಪ್ರಾಪ್ತ ಬಾಲಕಿಯರು ಜುಲೈ ತಿಂಗಳಲ್ಲಿ ಹಾಸ್ಟಲ್ ಬಿಟ್ಟು ಹೋಗಿದ್ದರು. ಬೆಂಗಳೂರಿನ ಪೊಲೀಸ್ ಸ್ಟೇಷನ್‌ನಲ್ಲಿದ್ದ ಅವರನ್ನು ಇದೇ ಎಸ್‌ಕೆ ಬಸವರಾಜು ಮತ್ತು ಅವರ ಪತ್ನಿ ಸೌಭಾಗ್ಯ ಬಸವರಾಜು ಬಿಡಿಸಿಕೊಂಡು ಬಂದಿದ್ದರು. ಆದರೆ ಈ ಮಾಹಿತಿಯನ್ನು ಪೋಷಕರಿಗೆ ಅಥವಾ ಮಠಕ್ಕೆ ನೀಡದೆ ಎರಡು ದಿನ ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದ ಆರೋಪವೂ ಅವರ ಮೇಲಿದೆ.
ಇದಲ್ಲದೆ ಮುರುಘಾ ಶರಣರ ಮೇಲಿನ ಈ ಆರೋಪಕ್ಕೆ ಕುಮ್ಮಕ್ಕು ನೀಡಿರುವುದು ಬಸವರಾಜನ್ ಎಂದೂ ಈಗಾಗಲೆ ಮುರುಘಾ ಮಠದ ಭಕ್ತರು ಹಲವು ಕಡೆ ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಅವರನ್ನು ಮಠದ ಆಡಳಿತ ಮಂಡಳಿಯಿಂದ ತೆಗೆದುಹಾಕಲಾಗಿದೆ.
ವಾರ್ಡನ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ
ಇನ್ನು ಎಸ್‌ಕೆ ಬಸವರಾಜನ್‌ರ ಮೇಲೆ ಬಾಲಕಿಯರ ಹಾಸ್ಟಲ್ ವಾರ್ಡನ್ ಮೇಲೆ ಅತ್ಯಾಚಾರಕ್ಕೆ ಯತ್ನ ಹಾಗೂ ಅವರ ಪತ್ನಿ ಸೌಭಾಗ್ಯ ಮೇಲೆ ಬ್ಲಾಕ್‌ಮೇಲ್ ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ಈ ದಂಪತಿ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.












Click it and Unblock the Notifications