Ration: ಹೊಳಲ್ಕೆರೆ ಕೆರೆಯೊಂದರ ಪಕ್ಕದಲ್ಲಿ 50ಕ್ಕೂ ಹೆಚ್ಚು ಗೋಧಿ ಚೀಲಗಳು ಪತ್ತೆ.!
ಚಿತ್ರದುರ್ಗ, ನವೆಂಬರ್, 24: 50ಕ್ಕೂ ಹೆಚ್ಚು ಗೋಧಿ ಚೀಲಗಳನ್ನು ಕರೆಯೊಂದರ ಪಕ್ಕದಲ್ಲಿ ಬಿಸಾಡಿ ಹೋಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಅಂದಹಾಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಅವಳಿ ಜಟ್ಟಿ ರಸ್ತೆಯ ಕೆಸರುಕಟ್ಟೆ ಕೊಡಿಯ ಸೇತುವೆ ಕೆಳಭಾಗದಲ್ಲಿ ಮೂಟೆ ಮೂಟೆಯ ಚೀಲಗಳನ್ನು ಬಿಸಾಡಿ ಹೋಗಿದ್ದಾರೆ. ಪಡಿತರ ಕಾರ್ಡ್‌ದಾರರಿಗೆ ವಿತರಣೆ ಮಾಡಲು ಚೀಲಗಟ್ಟಲೇ ಗೋಧಿಯನ್ನು ತರಲಾಗಿದೆ ಎನ್ನಲಾಗುತ್ತಿದೆ. ಗೋಧಿ ಹುಳ ಹಿಡಿದಿದ್ದರಿಂದ ಗೋಡೌನ್‌ನಿಂದ ತಂದು ಬಿಸಾಡಿ ಹೋಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಇಂದು ಬೆಳಗ್ಗೆ ಸಾರ್ವಜನಿಕರ ಕಣ್ಣಿಗೆ ಬಿದ್ದಿದ್ದು ಬೆಳಕಿಗೆ ಬಂದಿದೆ. ಬಿಸಾಡಿರುವ ಗೋಧಿಯನ್ನು ಕುರಿ, ಮೇಕೆ, ಜಾನುವಾರುಗಳು ತಿಂದಿದ್ದರೆ ಅನಾಹುತ ಸಂಭವಿಸಿದ್ರೆ ಇದಕ್ಕೆ ಯಾರು ಹೊಣೆಗಾರರು ಎಂದು ರೈತರು ಪ್ರಶ್ನೆ ಮಾಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮಳೆ ಇಲ್ಲದೆ ಬೆಳೆಗಳ ಇಳುವರಿ ಕಡಿಮೆಯಾಗಿದ್ದು, ಅನ್ನಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಇಷ್ಟೊಂದು ಚೀಲದ ಗೋಧಿಯನ್ನು ಬಿಸಾಡಿರುವುದು ಅನುಮಾನ ಮೂಡಿಸಿದೆ. ಇದರ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶೀಘ್ರವೇ ಸ್ಮಾರ್ಟ್ ಕಾರ್ಡ್ ವಿತರಣೆ
ಬೆಂಗಳೂರು, ನವೆಂಬರ್, 23: ಅನ್ನಭಾಗ್ಯ ಯೋಜನೆ ಜಾರಿಯಾಗಿನಿಂದ ರೇಷನ್ ಕಾರ್ಡ್‌ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಲವಾರು ಬದಲಾವಣೆಗಳನ್ನು ತರುತ್ತಲೇ ಇದೆ. ಇದೀಗ ಪಡಿತರದಾರರಿಗೆ ಚೀಟಿ ಜೊತೆಗೆ ಶೀಘ್ರವೇ ಅನ್ನಭಾಗ್ಯದ ಸ್ಮಾರ್ಟ್ ಕಾರ್ಡ್ ಕೊಡಲಾಗುವುದು. ಬಿಪಿಎಲ್ ಹಾಗೂ ಎಪಿಎಲ್ ಚೀಟಿದಾರರಿಗೆ ಇದನ್ನು ವಿತರಣೆ ಮಾಡಲಾಗುವುದು ಎಂದು ಕೋಲಾರದಲ್ಲಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಈ ಸ್ಮಾರ್ಟ್ ಕಾರ್ಡ್ ಬಹು ಉಪಯೋಗಿ ಕಾರ್ಡ್ ಆಗಲಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ಇನ್ನು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯಡಿ 1.13 ಕೋಟಿ ಕಾರ್ಡ್‌ದಾರರಿಗೆ ಅಂದರೆ ಸುಮಾರು ₹4 ಕೋಟಿ ಜನರಿಗೆ ಹಣ ಸಂದಾಯ ಮಾಡಿದ್ದೇವೆ.
2.66 ಲಕ್ಷ ಕಾರ್ಡ್‌ದಾರರು ಪೋಸ್ಟಲ್ ಇಲಾಖೆಯಲ್ಲಿ ಖಾತೆ ತೆರೆದಿದ್ದು, ಅವರಿಗೂ ಹಣ ಸಂದಾಯ ಆಗುತ್ತಿದೆ ಎಂದರು.
ಶೇಕಡಾ 90ರಷ್ಟು ಅಧಿಕ ಕಾರ್ಡ್‌ದಾರರಿಗೆ ಈಗಾಗಲೇ ಹಣ ತಲುಪಿದೆ. ಇನ್ನೂ 7 ಲಕ್ಷ ಕಾರ್ಡ್‌ದಾರರು ಬ್ಯಾಂಕ್ ಖಾತೆ ತೆರೆಯದಿರುವುದು ಸೇರಿದಂತೆ ವಿವಿಧ ಸಮಸ್ಯೆಯಿದೆ. ಅಂತಹವರಿಗೆ ಹಣ ಸಂದಾಯ ಆಗಿಲ್ಲ. ಅವರಿಗೂ ಹಣ ಸಂದಾಯ ಮಾಡಲು ಇಲಾಖೆ ಅಧಿಕಾರಿಗಳೇ ಖುದ್ದಾಗಿ ಕಾರ್ಡ್‌ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಈ ಮೂಲಕ ಶೇಕಡಾ 100 ಸಾಧನೆ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.
ವಿದ್ಯುತ್ ಯೋಜನೆಗಳ ಫಲಾನುಭವಿಗಳ ಬಾಕಿ ಮನ್ನಾಗೆ ನಿರ್ಧಾರ
3 ವಿದ್ಯುತ್ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಹೆಚ್ಚಿನ ಸಬ್ಸಿಡಿ ದರದಲ್ಲಿ ವಿದ್ಯುತ್ ನೀಡಲಾಗುತ್ತಿದ್ದು. ಇದೀಗ 3 ವಿದ್ಯುತ್ ಯೋಜನೆಗಳ ಫಲಾನುಭವಿಗಳ 389 ಕೋಟಿ ರೂಪಾಯಿ ಬಾಕಿ ಮನ್ನಾ ಮಾಡಲು ರಾಜ್ಯದ ಸರ್ಕಾರ ನಿರ್ಧಾರ ಮಾಡಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಮಾಹಿತಿ ನೀಡಿದ್ದಾರೆ. ಹಾಗಾದರೆ ಈ ಮೂರು ಯೋಜನೆಗಳು ಯಾವುವು, ಯಾರೆಲ್ಲ ವಿದ್ಯುತ್ ಬಿಲ್ ಬಾಕಿ ಮನ್ನಾ ಆಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್ ಅವರು, "ಕುಟೀರ ಭಾಗ್ಯ", "ಭಾಗ್ಯಜ್ಯೋತಿ" ಮತ್ತು "ಅಮೃತ ಜ್ಯೋತಿ" ಯೋಜನೆ ಫಲಾನುಭವಿಗಳಿಗೆ ಉಚಿತವಾಗಿ ಅಥವಾ ಹೆಚ್ಚಿನ ಸಬ್ಸಿಡಿ ದರದಲ್ಲಿ ವಿದ್ಯುತ್ ಪಡೆಯುತ್ತಿದ್ದ ಫಲಾನುಭವಿಗಳ 389 ಕೋಟಿ ರೂಪಾಯಿಗಳ ಬಾಕಿ ಮನ್ನಾ ಮಾಡಲು ರಾಜ್ಯದ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು ಎಂದು ಕನ್ನಡ ಪ್ರಭ ವರದಿ ಮಾಡಿದೆ.
ಹಾಗೆಯೇ ಇದು ಈಗಾಗಲೇ ಈ ಮೂರು ಯೋಜನೆಗಳನ್ನು ತನ್ನ ಮಹತ್ವಾಕಾಂಕ್ಷೆಯ "ಗೃಹ ಜ್ಯೋತಿ" ಯೋಜನೆಯೊಂದಿಗೆ ವಿಲೀನಗೊಳಿಸಲಾಗಿದ್ದು, ವಸತಿ ವಿದ್ಯುತ್ ಸಂಪರ್ಕಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುತ್ತದೆ ಎಂದರು.
ಈ ಹಿಂದೆ 'ಕುಟೀರ ಭಾಗ್ಯ' ಮತ್ತು 'ಭಾಗ್ಯ ಜ್ಯೋತಿ' ಫಲಾನುಭವಿಗಳು 40 ಹಾಗೂ 'ಅಮೃತ ಜ್ಯೋತಿ' ಫಲಾನುಭವಿಗಳು 75 ಯೂನಿಟ್ ವಿದ್ಯುತ್ ಪಡೆಯುತ್ತಿದ್ದರು. 40 ಯೂನಿಟ್ ಪಡೆದವರಿಗೆ ಈಗ 50 ಯೂನಿಟ್ ಜೊತೆಗೆ 10 ಯೂನಿಟ್ ಮತ್ತು 75 ಯೂನಿಟ್ ಪಡೆಯುವವರಿಗೆ ಶೇಕಡಾ 10ರಷ್ಟು ಹೆಚ್ಚುವರಿಯಾಗಿ ನೀಡಲಾಗುವುದು ಎಂದು ತಿಳಿಸಿದರು.
"ಕುಟೀರ ಭಾಗ್ಯ", "ಭಾಗ್ಯಜ್ಯೋತಿ" ಹಾಗೂ "ಅಮೃತ ಜ್ಯೋತಿ" ಯೋಜನೆಗಳ ಫಲಾನುಭವಿಗಳ 389 ಕೋಟಿ ರೂಪಾಯಿಗಳ ಹಣ ಬಾಕಿ ಇತ್ತು. ನಾನು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೇನೆ. ಮತ್ತು ಅದನ್ನು ಮನ್ನಾ ಮಾಡಲು ನಿರ್ಧಾರ ಮಾಡಿದ್ದೇವೆ. ಸೋಲಾರ್ ಸಬ್‌ಸ್ಟೇಷನ್‌ಗಳಿಗೆ ಸರ್ಕಾರ ಟೆಂಡರ್ ಕರೆದಿದ್ದು, 750 ಮೆಗಾ ವ್ಯಾಟ್ ಉತ್ಪಾದಿಸುವ 7 ಬಿಡ್‌ದಾರರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂದು ತಿಳಿಸಿದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications