Murugha Shree : ಮುರುಘಾ ಶರಣರ ನ್ಯಾಯಾಂಗ ಬಂಧನ ಅ.10 ವರೆಗೆ ವಿಸ್ತರಣೆ: ಕೋರ್ಟ್ ಆದೇಶ
ಚಿತ್ರದುರ್ಗ, ಸೆಪ್ಟೆಂಬರ್ 27 : ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿರುವ ಮುರುಘಾ ಶರಣರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 10 ರವರೆಗೆ ವಿಸ್ತರಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಮಂಗಳವಾರ(ಸೆ.27) ಮುರುಘಾ ಶ್ರೀಗಳ ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆ ಅವರನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಚಿತ್ರದುರ್ಗದ 2ನೇ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಅಕ್ಟೋಬರ್ 10ರವರೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.
ಆರೋಪಿ ನಂಬರ್ 2 ಲೇಡಿ ವಾರ್ಡನ್ಗೂ ರಶ್ಮಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ನೀಡಿದೆ. ಮುರುಘಾ ಶ್ರೀಗಳಿಗೆ ನ್ಯಾಯಾಂಗ ಬಂಧನ ವಿಸ್ತರಣೆ ಹಿನ್ನೆಲೆ ಪೊಲೀಸರು ಚಿತ್ರದುರ್ಗದ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ.

ಇನ್ನೂ ಕಳೆದ ಶುಕ್ರವಾರ ಮುರುಘಾ ಶರಣರ ಜಾಮೀನು ಅರ್ಜಿ ಕೂಡ ತಿರಸ್ಕರಿಸಲಾಗಿತ್ತು. ಬಂಧಿತ ಆರೋಪಿ ಪ್ರಭಾವಿಯಾಗಿರುವ ಕಾರಣ ಸಾಕ್ಷ್ಯ ನಾಶಪಡಿಸಬಹುದು ಎಂದು ಸರಕಾರಿ ವಕೀಲೆ ನಾಗವೇಣಿ ತಕರಾರು ಸಲ್ಲಿಸಿದ್ದರಿಂದ ಕೋರ್ಟ್ ಜಾಮೀನನ್ನು ನಿರಾಕರಿಸಿತ್ತು.












Click it and Unblock the Notifications