ಚಂದ್ರಗ್ರಹಣ ಎಫೆಕ್ಟ್; ಎಮ್ಮೆಗಳಿಗೂ ಹಿಡಿದ ಗ್ರಹಣ!
ಚಿತ್ರದುರ್ಗ, ಜೂನ್ 05: ಇಂದು ನಾವು ಸ್ಟ್ರಾಬೆರಿ ಚಂದ್ರಗ್ರಹಣದ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಲಿದ್ದೇವೆ. 2020ರ ಜನವರಿ ತಿಂಗಳಲ್ಲಿ ಮೊದಲ ಚಂದ್ರಗ್ರಹಣ ಕಂಡನಂತರ ಇದೇ ವರ್ಷದಲ್ಲಿ ಎರಡನೆಯ ಚಂದ್ರ ಗ್ರಹಣ ಸಂಭವಿಸಲಿದೆ.
Recommended Video
ಆದರೆ ಈ ಚಂದ್ರಗ್ರಹಣದ ಎಫೆಕ್ಟ್ ಪ್ರಾಣಿಗಳ ಮೇಲೂ ಆಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಸ್ಕಲ್ ಗೊಲ್ಲರಹಟ್ಟಿ ಗ್ರಾಮದಲ್ಲಿ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಎಮ್ಮೆಯ ಮೇಲೆ ಸುಣ್ಣದಿಂದ ಚಂದ್ರ ಮತ್ತು ಸೂರ್ಯನ ಚಿತ್ರವನ್ನು ಬರೆಯಲಾಗಿದೆ.
ಸೂರ್ಯ ಗ್ರಹಣ ಹಾಗೂ ಚಂದ್ರಗ್ರಹಣದ ಸಮಯದಲ್ಲಿ ನೆರಳು ಮನುಷ್ಯನ ಮೇಲೆ ಬೀಳದಂತೆ ಮಕ್ಕಳು, ಬಾಣಂತಿಯರು ಹೊರಗಡೆ ಬರದಂತೆ ಮನೆಯೊಳಗೆ ಇರುವುದು ಹಿರಿಯರ ನಂಬಿಕೆ. ಆದರೆ ಬಯಲಲ್ಲೇ ಇರುವ ಜಾನುವಾರುಗಳಿಗೂ ಸೂರ್ಯ ಹಾಗೂ ಚಂದ್ರಗ್ರಹಣದ ಪರಿಣಾಮ ಆಗಬಾರದು ಎಂದು ಹೀಗೆ ಮಾಡುತ್ತಾರೆ. ಅದರಲ್ಲೂ ಗರ್ಭ ಧರಿಸಿದ ಎಮ್ಮೆ, ಹಸುಗಳಿಗೆ ಸೂರ್ಯ ಮತ್ತು ಚಂದ್ರ ಗ್ರಹಣದ ಪರಿಣಾಮ ಬೀಳಬಾರದು ಎಂದು ಅವುಗಳ ಮೇಲೆ ಸುಣ್ಣದಿಂದ ಚಂದ್ರ ಮತ್ತು ಸೂರ್ಯ ಚಿತ್ರ ಬಿಡಿಸುತ್ತಾರೆ.

ಇದು ಒಂದು ಮೂಢನಂಬಿಕೆ ಎನ್ನಲಾದರೂ, ಹಳ್ಳಿಗಳಲ್ಲಿ ಈ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಂದು ಕೂಡ ಜಾನುವಾರುಗಳ ಮೇಲೆ ಚಿತ್ರ ಬರೆಯಲಾಗಿದೆ ಎಂದು ತಿಳಿಸಿದರು ಗ್ರಾಮದ ಹಿರಿಯ ಮ್ಯಾಕ್ಲೂರಹಳ್ಳಿ ನಾಗೇಂದ್ರಪ್ಪ.












Click it and Unblock the Notifications