ಒನ್ಇಂಡಿಯಾ ಇಂಪ್ಯಾಕ್ಟ್: ನಜೀರ್ ಸಾಬ್ ಕಾಲೋನಿಗೆ ತಹಶೀಲ್ದಾರ, ಕಂದಾಯ ಅಧಿಕಾರಿ ಭೇಟಿ

ಚಿತ್ರದುರ್ಗ,

ಫೆಬ್ರವರಿ
17:
ಕೋಟೆನಾಡು
ಚಿತ್ರದುರ್ಗ
ಜಿಲ್ಲೆಯ
ಹಿರಿಯೂರು
ತಾಲ್ಲೂಕಿನ
ಹುಳಿಯಾರು
ರಸ್ತೆಯ
ಚಳಮಡು
ಗ್ರಾಮದ,
ಬೂತನಹಟ್ಟಿ
ಸಮೀಪದ
ಅರಣ್ಯ
ಪ್ರದೇಶದಲ್ಲಿ
ವಾಸಿಸುತ್ತಿರುವ
"ನಜೀರ್
ಸಾಬ್
ಕಾಲೋನಿಗೆ'
ಹಿರಿಯೂರು
ತಹಶೀಲ್ದಾರ್
ಜಿ.ಎಚ್.
ಸತ್ಯನಾರಾಯಣ
ಹಾಗೂ
ಕಂದಾಯ
ಅಧಿಕಾರಿ
ಶರಣಪ್ಪ
ಭೇಟಿ
ನೀಡಿ,
ಕಾಲೋನಿಯ
ಕುಟುಂಬಗಳ
ಸಮಸ್ಯೆ
ಆಲಿಸಿದ್ದಾರೆ.

id="toptextpromo">
id='are-slot-1'
class='oiad
oi-axt
oiadv'>

"ಎರಡು

ಗ್ರಾ.ಪಂ
ನಡುವೆ
ಅಡ್ಡ
ಕತ್ತರಿಯಲ್ಲಿ
ಸಿಲುಕಿದ
ನತದೃಷ್ಟ
ಗ್ರಾಮ'
ಎಂಬ
ಶಿರ್ಷಿಕೆ
ಅಡಿಯಲ್ಲಿ
ಒನ್ಇಂಡಿಯಾ
ವರದಿ
ಬಿತ್ತರಿಸಿತ್ತು.
ಗ್ರಾಮದ
ಕುಟುಂಬಗಳು
ಅರಣ್ಯ
ಪ್ರದೇಶದಲ್ಲಿ
ಸುಮಾರು
30-40
ವರ್ಷಗಳಿಂದ
ವಾಸವಾಗಿದ್ದರು.

id='are-slot-2'
class='oiad
oi-axt
oiadv'>

ಅರಣ್ಯ ಪ್ರದೇಶ ಒತ್ತುವರಿ

ಅರಣ್ಯ ಪ್ರದೇಶ ಒತ್ತುವರಿ

ಇವರಿಗೆ ಬೀದಿ ದೀಪ, ರಸ್ತೆ, ಮನೆ ಸೌಲಭ್ಯ,‌ ಶಾಲೆ, ವಾಹನ ಸೌಕರ್ಯ ಹಾಗೂ ಅಕ್ಷರ ಜ್ಞಾನವಿಲ್ಲದೆ, ಇತರೆ ಯಾವುದೇ ಸೌಲಭ್ಯಗಳು ಇಲ್ಲದ ಕಾರಣ ನರಕಯಾತನೆಯಲ್ಲಿ ತೊಡಗಿದ್ದರು. 124 ಸರ್ವೆ ನಂಬರ್ ನಲ್ಲಿ ಬರುವ 404 ಎಕರೆ 36 ಗುಂಟೆ ಅರಣ್ಯ ಪ್ರದೇಶಕ್ಕೆ ವಲಸೆ ಹೋಗಿ ಅಲ್ಲಿಯೇ ಇದ್ದು, ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದರು.

ಮತದಾನದ ಹಕ್ಕು ಉಡುವಳ್ಳಿ ಗ್ರಾ.ಪಂ

ಮತದಾನದ ಹಕ್ಕು ಉಡುವಳ್ಳಿ ಗ್ರಾ.ಪಂ

ಪ್ರಸ್ತುತ ಇವರ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಇತರೆ ದಾಖಲೆಗಳು ಗೌಡನಹಳ್ಳಿ ಗ್ರಾಮ ಪಂಚಾಯಿತಿ ವಿಳಾಸಕ್ಕೆ ಸೇರಿದ್ದವು. ಆದರೆ ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡುವ ಮತದಾನದ ಹಕ್ಕು ಉಡುವಳ್ಳಿ ಗ್ರಾ.ಪಂ ಗೆ ಬೂತನಹಟ್ಪಿ ಸೇರಿದೆ. ಇದರಿಂದ

ನಮಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾನ ಕಾರ್ಡ್ ಎಲ್ಲವೂ ಇದೆ ಪಡಿತರ ಪದಾರ್ಥಗಳು ಬಿಟ್ಟರೆ ಬೇರೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ.

2001ರಲ್ಲಿ ಈ ಜಾಗ ಅರಣ್ಯ ಇಲಾಖೆ ವ್ಯಾಪ್ತಿಗೆ

2001ರಲ್ಲಿ ಈ ಜಾಗ ಅರಣ್ಯ ಇಲಾಖೆ ವ್ಯಾಪ್ತಿಗೆ

ನಾವು ವಾಸಿಸುವ ಜಾಗಕ್ಕೆ ಮತ್ತು ಜಮೀನಿಗಳಿಗೆ ಕಂದಾಯ ಕಟ್ಟಿಕೊಂಡು ಬಂದಿದ್ದೆವೆ ಜೊತೆಗೆ ಅಂದಿನಿಂದ ಇಂದಿನವರೆಗೂ ಜಮೀನಿನಲ್ಲಿ ಉಳಿಮೆ ಮಾಡಿಕೊಂಡು ಬರುತ್ತಿದ್ದೆವೆ ಆದರೂ ಸಾಗುವಳಿ ಚೀಟಿ ಕೊಟ್ಟಿಲ್ಲ ಜೊತೆಗೆ ಇದುವರಿಗೂ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಹಾಗೂ "ಹುಲ್ಬಂದಿ ಖರಾಬ್' ಆಗಿತ್ತು. ನಂತರ 2001ರಲ್ಲಿ ಈ ಜಾಗವನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದರು. 1978-1980 ರಿಂದ ಸುಮಾರು 30 ಕುಟುಂಬಗಳು ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಬೀದಿ ದೀಪ, ರಸ್ತೆ, ಮನೆ ಸೌಲಭ್ಯ, ‌ಶಾಲೆ, ವಾಹನ ಸೌಕರ್ಯ ಇತರೆ ಯಾವುದೇ ಸೌಲಭ್ಯಗಳು ಇಲ್ಲದೆ ನರಕಯಾತನೆಯಲ್ಲಿ ತೊಡಗಿದ್ದರು. ಒನ್ಇಂಡಿಯಾ ವಿಸ್ತೃತ ವರದಿ ಮಾಡಿತ್ತು.

Recommended Video

    ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಗೆ ಗಲ್ಲುಶಿಕ್ಷೆ! | Oneindia Kannada
    ಶಾಸಕಿ ಮೆಚ್ಚುಗೆ

    ಶಾಸಕಿ ಮೆಚ್ಚುಗೆ

    ಇಂದು ಕಾಲೋನಿಗೆ ತಹಶೀಲ್ದಾರ್ ಜಿ.ಎಚ್ ಸತ್ಯನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಇವರೆಲ್ಲರೂ ಒಂದು ಕಡೆಯಿಂದ ಅಲ್ಲಿಗೆ ಹೋಗಿ ವಾಸಿಸುತ್ತಾರೆ. ಅವರ ದಾಖಲೆಗಳನ್ನು ಪರಿಶೀಲನೆ ನಡೆಸಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಬೆಸ್ಕಾಂ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಇದೊಂದು ಒಳ್ಳೆಯ ವರದಿಯಾಗಿದೆ. ತಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದ್ದಾರೆ. ಅಲ್ಲಿನ ನಿವಾಸಿಗಳ ತೊಂದರೆಯನ್ನು ಬಗೆಹರಿಸಲು ಸಾಧ್ಯವಾದ ಮಟ್ಟಿಗೆ ಪ್ರಯತ್ನ ಮಾಡುವೆ ಎಂದು ಒನ್ಇಂಡಿಯಾಗೆ ಪ್ರತಿಕ್ರಿಯೆ ನೀಡಿದ್ದಾರೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+