Murugha mutt seer: ಮುರುಘಾ ಶ್ರೀಗಳ ವಿರುದ್ಧ ಮತ್ತೊಂದು ಗಂಭೀರ ಆರೋಪ-ಏನದು?
ಚಿತ್ರದುರ್ಗ, ಡಿಸೆಂಬರ್, 02: ನಗರದ ಹೊರವಲಯದಲ್ಲಿ ಬಸವೇಶ್ವರ ಕಂಚಿನ ಪುತ್ಥಳಿ ನಿರ್ಮಾಣವಾಗುತ್ತಿದ್ದು, ಈ ಕಾಮಗಾರಿಯಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಬಾರೀ ಅವ್ಯವಹಾರ ನಡೆಸಿದ್ದಾರೆ ಎಂದು ಮಾಜಿ ಸಚಿವ ಹೆಚ್.ಏಕಾಂತಯ್ಯ ಗಂಭೀರವಾಗಿ ಆರೋಪಿಸಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ನಗರದ ಮುರುಘಾ ಮಠದ ಹಿಂಭಾಗದ ಬೆಟ್ಟದಲ್ಲಿ ಬಸವೇಶ್ವರ ಪುತ್ಥಳಿ ನಿರ್ಮಾಣ ಮಾಡಲು ಕಾಮಗಾರಿ ನಡೆಯುತ್ತಿದೆ. ಕಂಚಿನ ಪುತ್ಥಳಿ ನಿರ್ಮಾಣಕ್ಕೆ 280.20 ಕೋಟಿ ರೂಪಾಯಿ ವೆಚ್ಚದಲ್ಲಿ ಆಡಳಿತಾತ್ಮಕ ಮಂಜೂರಾತಿಯನ್ನು ಸರ್ಕಾರ ನೀಡಿದೆ. ಆದರೆ ಇದರಲ್ಲಿ ಅನುದಾನ ದುರ್ಬಳಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬಸವ ಪುತ್ಥಳಿ ನಿರ್ಮಾಣಕ್ಕೆ ನಿಯಮ ಬಾಹಿರ ಕೋಟಿಗಟ್ಟಲೇ ಹಣ ಖರ್ಚು ಮಾಡಿರುವುದು ದುರಾದೃಷ್ಟಕರ. ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 35 ಕೋಟಿ ಹಣ ಮಂಜೂರು ಮಾಡಿದೆ ಎಂದಿದ್ದಾರೆ. ಅದರಲ್ಲಿ ಈಗಾಗಲೇ 24.50 ಕೋಟಿ ಹಣ ವೆಚ್ಚ ಮಾಡಿರೋದು ಗಮನಕ್ಕೆ ಬಂದಿದೆ. ಟೆಂಡರ್ ಕರೆಯದೇ 4 ಕೋಟಿಗೂ ಅಧಿಕ ಮೌಲ್ಯದ ಸಾಮಗ್ರಿಗಳನ್ನು ಖರೀದಿ ಮಾಡಲಾಗಿದೆ. ಮತ್ತೊಂದು ಕಡೆ ಗುತ್ತಿಗೆದಾರರಿಗೆ ನಿಮಯಬಾಗಿರವಾಗಿ 6 ಕೋಟಿಗೂ ಅಧಿಕ ಹಣ ಪಾವತಿ ಮಾಡಿದ್ದಾರೆ.
66.7 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯನ್ನು ಜಂಪನ್ ಕನ್ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಟ್ ಕಂಪನಿಯೊಂದಿಗೆ ಮುರುಘಾ ಶರಣರು ಒಪ್ಪಂದ ಮಾಡಿಕೊಂಡಿದ್ದಾರೆ. ಇದರಿಂದ ಬ್ಯಾಂಕ್ ಅನುಮೋದನೆ ಪಡೆಯದೇ ಇರುವುದು ಮಠದ ಹಿತಾಸಕ್ತಿಗೆ ಧಕ್ಕೆ ಎಂದಿದ್ದಾರೆ.
ಟೆಂಟರ್ ಪ್ರಕಾರ 24 ತಿಂಗಳಲ್ಲಿ ಕಾಮಗಾರಿ ಮುಕ್ತಾಯವಾಗಬೇಕಿತ್ತು. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ. ಬ್ಯಾಂಕಿನ ಅನುಮೋದನೆ ಇಲ್ಲದೇ 6 ಕೋಟಿ ರೂಪಾಯಿ ಹಣ ಗುತ್ತಿಗೆದಾರರಿಗೆ ನೀಡಿದ್ದು, ಕಾನೂನು ಬಾಹಿರವಾಗಿದ್ದು, ಬೆಕ್ಕಿನ ಆಹಾರ, ಕಾರು ಟೈರ್, ವಿಮಾನ ಟಿಕೆಟ್, ಹೋಟಲ್ ಉದ್ದೇಶಕ್ಕೆ 22,58, 595 ರೂಪಾಯಿ ಹಣ ನೀಡಿದ್ದಾರೆ ಎಂದು ಆರೋಪಿಸಿದರು.
ಬಸವ ಪುತ್ಥಳಿ ನಿರ್ಮಾಣ ಎಂದು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಮುರುಘಾ ಶ್ರೀಗಳು ನಂಬಿಕೆ ದ್ರೋಹ, ಅನುದಾನ ದುರ್ಬಳಕೆ, ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ ಎಂದಿದ್ದಾರೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಮಾಜಿ ಸಚಿವ ಎಚ್. ಏಕಾಂತಯ್ಯ ದೂರು ನೀಡಿದ್ದಾರೆ.












Click it and Unblock the Notifications