ಚಿತ್ರದುರ್ಗ: ಯೋಗಭ್ಯಾಸಕ್ಕೆ ಶಾಸಕಿ ಪೂರ್ಣಿಮಾ ಕರೆ, ಕೈದಿಗಳಿಂದಲೂ ಯೋಗ

ಚಿತ್ರದುರ್ಗ, ಜೂನ್.21: ಪ್ರತಿ ನಿತ್ಯ ಯೋಗಭ್ಯಾಸ ಮಾಡುವುದರಿಂದ ಜೀವನದಲ್ಲಿ ಪ್ರತಿಯೊಬ್ಬರು ಆರೋಗ್ಯ ಹೆಚ್ಚಿಸಿಕೊಳ್ಳಬಹುದು ಎಂದು ಶಾಸಕಿ ಕೆ. ಪೂರ್ಣಿಮಾ ಹೇಳಿದರು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಿರಿಯೂರು ಶಾಖೆ ಹಮ್ಮಿಕೊಂಡಿದ್ದ ನಾಲ್ಕನೇ ಅಂತರಾಷ್ಟೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರ ಋಷಿಮುನಿಗಳು ಯೋಗಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ.

ಪ್ರತಿಯೊಬ್ಬ ಮನುಷ್ಯ ಯೋಗಾಸನ ಕಲಿತು, ಜೀವನದಲ್ಲಿ ತಮ್ಮ ಆರೋಗ್ಯದ ಕಡೆ ಗಮನಹರಿಸಲಿ. ದಿನ ಉರುಳಿದಂತೆ ಶಕ್ತಿ ಕುಂದಬಾರದು, ಬಣ್ಣ ಮಾಸಬಾರದು, ವಿದ್ಯೆ ಕಡಿಮೆಯಾಗಬಾರದು ಎಂದು ಸಂಕಲ್ಪ ಮಾಡಿದರೆ ಆತ ಯೋಗಕ್ಕೆ ಶರಣಾಗಿರುತ್ತಾನೆ ಎಂದು ಯೋಗದ ಮಹತ್ವದ ಬಗ್ಗೆ ತಿಳಿಸಿದರು.

MLA Poornima Says practicing yoga can increase the health of everyone in life.

ಸಾರ್ವಜನಿಕರಿಂದ ಯೋಗ

ಅಂತರಾಷ್ಟೀಯ ಯೋಗ ದಿನಾಚರಣೆ ಪ್ರಯುಕ್ತ ನಗರದ ನೆಹರು ಮೈದಾನದಲ್ಲಿ ಸಾರ್ವಜನಿಕರು ಪಾಲ್ಗೊಂಡು ಯೋಗಭ್ಯಾಸ ನೆಡೆಸಿದರು. ವಿವಿಧ ವಾರ್ಡ್ ಗಳಿಂದ ಬಂದಿದ್ದ ಪುರುಷರು , ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಮಂದಿ ಯೋಗ ಪ್ರದರ್ಶನ ಮಾಡಿದರು.

ರಾಜ್ಯ ಓಬಿಸಿ ಉಪಾಧ್ಯಕ್ಷ ಡಿ.ಟಿ ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಟಿ. ಚಂದ್ರಶೇಖರ್, ಯೋಗ ಶಿಕ್ಷಣ ಅಧ್ಯಕ್ಷ ಪರಮೇಶ್ವರಪ್ಪ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಿದ್ದರು.

MLA Poornima Says practicing yoga can increase the health of everyone in life.

ಜಿಲ್ಲಾ ಕಾರಾಗೃಹದಲ್ಲಿ ಯೋಗ

ಚಿತ್ರದುರ್ಗ ಹೊರವಲಯದ ಹಳೆ ಬೆಂಗಳೂರು ರಸ್ತೆಯಲ್ಲಿರುವ ಕಾರಾಗೃಹದಲ್ಲಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎಸ್ ಬಿ ವಸ್ತ್ರಮಠ ನೇತೃತ್ವದಲ್ಲಿ 153 ಖೈದಿಗಳು ಭಾಗಿಯಾಗಿ ವಿವಿಧ ಯೋಗಗಳನ್ನು ಮಾಡಿದರು. ನ್ಯಾಯಾಧೀಶರ ತಂಡ ಯೋಗದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+