Raghu Achar : ಪಕ್ಷಾಂತರ: ಕಾಂಗ್ರೆಸ್ ತೊರೆದ ರಘು ಆಚಾರ್‌ ಇಂದು ಜೆಡಿಎಸ್ ಸೇರ್ಪಡೆ

ಚಿತ್ರದುರ್ಗ, ಏಪ್ರಿಲ್ 14: ವಿಧಾನಸಭಾ ಚುನಾವಣೆ ಕಾವು ಏರುಗತಿಯಲ್ಲಿ ಸಾಗಿದರೆ ಇತ್ತ ಪಕ್ಷಾಂತರ ಪರ್ವ ಮುಂದುವರಿದಿದೆ. ಪಕಾಂಗ್ರೆಸ್ ಪಟ್ಟಿ ಪ್ರಕಟ ಬೆನಲ್ಲೆ ಕೋಟೆನಾಡು ಚಿತ್ರದುರ್ಗದಲ್ಲಿ ಭಾರಿ ಬಂಡಾಯ ಬಿಸಿ ಆವರಿಸಿತ್ತು. ಇದೀಗ ಅಲ್ಲಿನ ನಾಯಕರೊಬ್ಬರು ಕಾಂಗ್ರೆಸ್‌ ಬಿಟ್ಟು ಜೆಡಿಎಸ್ ಸೇರಲಿದ್ದಾರೆ.

ಚಿತ್ರದುರ್ಗದ ಮಾಜಿ ವಿಧಾನಪರಿಷತ್ ಸದಸದ್ಯರಾದ ಜಿ. ರಘು ಆಚಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೆ ಬಂಡಾಯ ಸಾರಿದ್ದದ್ದರು. ಇಂದು ಶುಕ್ರವಾರ ಏಪ್ರಿಲ್ 14ರಂದು ಅವರು ಜೆಡಿಎಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆ ಆಗಲಿದ್ದಾರೆ.

Karnataka Election 2023: Former MLC and Congress leader Raghu Achar to join JD (S) on April 14th

ಪಕ್ಷದ ಆಹ್ವಾನದ ಮೇರೆಗೆ ಆಗಮಿಸುತ್ತಿರುವ ರಘು ಆಚಾರ್ ಅವರನ್ನು ಪಕ್ಷದ ಭಾವುಟ ನೀಡಿದ್ದ ಬರಮಾಡಿಕೊಳ್ಳಲು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಜ್ಜಾಗಿದ್ದಾರೆ. ಈ ಮೂಲಕ ಕಾಂಗ್ರೆಸ್‌ಗೆ ಆಘಾತ ಉಂಟಾಗಿದೆ.

ಪಕ್ಷದ ವಿರುದ್ಧ ಬಹಿರಂಗ ಅಸಮಾಧಾನ

ಟಿಕೆಟ್ ಸಿಗದ ಬೆನ್ನಲ್ಲೆ ಬಹಿರಂಗವಾಗೇ ಅಸಮಾಧಾನ ಹೊರ ಹಾಕಿದ್ದ ಚಿತ್ರದುರ್ಗದ ರಘು ಆಚಾರ್ ಅವರ ನಿವಾಸಕ್ಕೆ ಜೆಡಿಎಸ್ ಪಕ್ಷ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಅವರು ಭೇಟಿ‌ ನೀಡಿದ್ದ ಅವರೊಂದಿಗೆ ನಡೆಸಿದ್ದರು. ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಜೆಡಿಎಸ್ ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಅವರು ರಘು ಆಚಾರ್‌ ಅವರನ್ನು ಭೇಟಿ ಮಾಡಿದ್ದರು.

ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುತ್ತೇವೆ ಎಂದು ರಘು ಆಚಾರ್ ಅವರ ಬೆನ್ನಿಗೆ ಚೂರಿ ಹಾಕಿದೆ ಎಂದರು. ಇನ್ನು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ರಘು ಆಚಾರ್ ಕಣಕ್ಕಿಳಿಯುವುದು ನಿಶ್ಚಯವಾಗಿದೆ.

Karnataka Election 2023: Former MLC and Congress leader Raghu Achar to join JD (S) on April 14th

ಇನ್ನೂ ಕಳೆದ ಸೋವಾರವಷ್ಟೇ ಜಿ.ರಘು ಆಚಾರ್‌ ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದರು. ಕೆಪಿಸಿಸಿ ಹಾಗೂ ಎಐಸಿಸಿಗೆ ರಾಜೀನಾಮೆ ಪತ್ರವನ್ನು ಫ್ಯಾಕ್ಸ್‌ ಮೂಲಕ ರವಾನಿಸಿ ರಾಜೀನಾಮೆಯನ್ನು ಖಚಿತಪಡಿಸಿದ್ದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಚಿತ್ರದುರ್ಗ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿದ್ದೆ. ಅದಕ್ಕೆ ಪಕ್ಷದ ನಾಯಕರ ಸೂಚನೆಯಂತೆ ಎಲ್ಲ ಪೂರ್ವತಯಾರಿ ಮಾಡಿಕೊಂಡಿದ್ದೆ. ಪಕ್ಷ ಸಂಘಟನೆಗೆ ನಿರಂತರವಾಗಿ ಶ್ರಮಿಸಿದ್ದೆ. ಪಕ್ಷದ ಟಿಕೆಟ್‌ ಕೈತಪ್ಪಿದ್ದರಿಂದ ಅತೀವ ಬೇಸರವಾಗಿದೆ. ನಂಬಿಸಿ ಮೋಸ ಮಾಡಿದ ಪಕ್ಷವನ್ನು ತೊರೆಯುತ್ತಿದ್ದೇನೆ ಎಂದು ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದರು.

ವಿವಾದಾತ್ಮಕ ಹೇಳಿಕೆ

ಜೆಡಿಎಸ್‌ ಸೇರುವುದು ಖಚಿತವಾಗುತ್ತಿದ್ದಂತೆ ಶಾಸಕ ಜಿ ಡಿ ದೇವೇಗೌಡ ಅವರೊಂದಿಗೆ ಇತ್ತಿಚೆಗೆ ಶಾಸಕ ಜಿ.ಟಿ.ದೇವೇಗೌಡ ಜತೆ ಹುಣಸೂರಿಗೆ ರಘು ಆಚಾರ್ ಭೇಟಿ ನೀಡಿ ಡಿ.ದೇವರಾಜ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು. ಬಳಿಕ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಕ್ಷೇತ್ರದಲ್ಲಿ ಯಾರಾದರೂ ಕಾಂಗ್ರೆಸ್‌ಗೆ ಮತ ನೀಡಿದರೆ ಓಡಿ ಸಿಬಿಡುತ್ತೇನೆ ಎಂದಿದ್ದರು. ದೇವರಾಜ ಅರಸು ಕರ್ಮ ಭೂಮಿಯಲ್ಲಿ ನಿಂತು ನಾನು ಹೇಳುತ್ತಿದ್ದೇನೆ, ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದರು. ಇದು ಭಾರಿ ಚರ್ಚೆ ಆಗಿತ್ತು.

ಹಿಂದುಳಿದ ವರ್ಗಗಳ ನಿಜವಾದ ನಾಯಕ ಡಿ.ದೇವರಾಜ ಅರಸು ಅವರು. ಅವರೊಬ್ಬ ಧೀಮಂತ ನಾಯಕ. ಹೀಗಾಗಿ ರಾಜಕೀಯ ಶುರು ಮಾಡುವಾಗ ಡಿ.ದೇವರಾಜ ಅರಸುಗೆ ಪೂಜೆ ಸಲ್ಲಿಸುತ್ತಿದ್ದೇನೆ. ಜೆಡಿಎಸ್‌ನಲ್ಲಿ ರಾಜಕೀಯ ಆರಂಭಿಸಿದ ಮೇಲೆ ಅರುಸುಅವರ ಅವರ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+