ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ; ನ.21ಕ್ಕೆ ಕಸಾಪ ಜಿಲ್ಲಾಧ್ಯಕ್ಷರ ಚುನಾವಣೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ನವೆಂಬರ್ 16; ಕನ್ನಡ ಸಾಹಿತ್ಯ ಪರಿಷತ್ತಿನ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನವೆಂಬರ್ 21ರಂದು ನಡೆಯಲಿದೆ. 6,759 ಮತದಾರರು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ಮಾಡಲಿದ್ದಾರೆ. ಈ ಹಿಂದೆ ಚುನಾವಣೆ ಮೇ 9ರಂದು ನಿಗದಿಯಾಗಿತ್ತು. ನಾಮಪತ್ರ ಪರಿಶೀಲನೆ ಸೇರಿದಂತೆ ವಿವಿಧ ಪ್ರಕ್ರಿಯೆಗಳು ಮುಕ್ತಾಯವಾಗಿತ್ತು. ಆದರೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದ ಕಾರಣ ಸರ್ಕಾರ ಚುನಾವಣೆ ಮುಂದೂಡಿತ್ತು.

ಚಿತ್ರದುರ್ಗ ಜಿಲ್ಲೆಯಲ್ಲಿ ಮತದಾನಕ್ಕಾಗಿ 9 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಚಿತ್ರದುರ್ಗ 3, ಚಳ್ಳಕೆರೆ 1, ನಾಯಕನಹಟ್ಟಿ 1, ಹೊಸದುರ್ಗ 1, ಹಿರಿಯೂರು 1, ಮೊಳಕಾಲ್ಮುರು 1 ಹಾಗೂ ಹೊಳಲ್ಕೆರೆಯಲ್ಲಿ 1 ಮತಗಟ್ಟೆ ಇರಲಿದೆ. ಚಿತ್ರದುರ್ಗ ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಒಟ್ಟು ಮೂರು ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ರೂಂ ನಂಬರ್ 1ರಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ಕ್ರಮ ಸಂಖ್ಯೆ 1 ರಿಂದ 1000 ವರೆಗಿನ ಕ್ರಮಸಂಖ್ಯೆ, ರೂಂ. ನಂಬರ್ 2ರಲ್ಲಿ 1001 ರಿಂದ 2000, ರೂಂ ನಂಬರ್ 3ರಲ್ಲಿ 2001 ರಿಂದ 2498ರ ವರೆಗಿನ ಕ್ರಮ ಸಂಖ್ಯೆಯ ಮತದಾರರು ಮತದಾನ ಮಾಡಲಿದ್ದಾರೆ.

ಕಸಾಪ ಚುನಾವಣೆ; ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿದ ಅಭ್ಯರ್ಥಿ! ಕಸಾಪ ಚುನಾವಣೆ; ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿದ ಅಭ್ಯರ್ಥಿ!

ಹೊಸದುರ್ಗ ತಾಲ್ಲೂಕು ಕಚೇರಿಯಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ಕ್ರಮ ಸಂಖ್ಯೆ 1 ರಿಂದ 443 ರವರೆಗಿನ ಮತದಾರರು, ಹಿರಿಯೂರು ಮುಖ್ಯ ರಸ್ತೆಯ ಆಸ್ಪತ್ರೆ ಪಕ್ಕದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ಕ್ರಮ ಸಂಖ್ಯೆ 1 ರಿಂದ 538 ವರೆಗಿನ ಮತದಾರರು, ಮೊಳಕಾಲ್ಮುರು ತಾಲ್ಲೂಕು ಕಚೇರಿಯಲ್ಲಿ ಕ್ರಮಸಂಖ್ಯೆ 1 ರಿಂದ 718 ವರೆಗಿನ ಮತದಾರರು ಮತದಾನ ಮಾಡಬಹುದು.

ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗೆ ದಿನಾಂಕ ನಿಗದಿ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗೆ ದಿನಾಂಕ ನಿಗದಿ

 Kannada Sahitya Parishat Chitradurga District President Election On November 21

ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ ಮತಗಟ್ಟೆಯಲ್ಲಿ ಕ್ರಮಸಂಖ್ಯೆ 1 ರಿಂದ 875 ವರೆಗಿನ ಮತದಾರರು, ನಾಯಕನಹಟ್ಟಿಯ ಸರ್ಕಾರಿ ಕ್ಲಸ್ಟರ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಕ್ರಮಸಂಖ್ಯೆ 1 ರಿಂದ 1091 ವರೆಗಿನ ಮತದಾರರು, ಹೊಳಲ್ಕೆರೆಯ ಕನ್ನಡ ಮತ್ತು ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಕ್ರಮಸಂಖ್ಯೆ 1 ರಿಂದ 596 ವರೆಗಿನ ಮತದಾರರು ಮತ ಚಲಾಯಿಸಲಿದ್ದಾರೆ.

ಪರಿಷತ್ ಚುನಾವಣೆ; ಬಿಜೆಪಿಗೆ 15 ಸೀಟು ಗುರಿ, 4 ತಂಡದಿಂದ ಯಾತ್ರೆ!ಪರಿಷತ್ ಚುನಾವಣೆ; ಬಿಜೆಪಿಗೆ 15 ಸೀಟು ಗುರಿ, 4 ತಂಡದಿಂದ ಯಾತ್ರೆ!

ದಾಖಲೆಗಳು; ಮತದಾರರು ಮತದಾನ ಮಾಡುವಾಗ ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಭಾವಚಿತ್ರದ ಗುರುತಿನ ಚೀಟಿ ಅಥವಾ 22 ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಹಾಜರಪಡಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಕುಟುಂಬದ ಮುಖ್ಯಸ್ಥರ ಹೆಸರಿನಲ್ಲಿ ನೀಡಲಾಗಿರುವ 22 ದಾಖಲೆಗಳ ಪೈಕಿ ಯಾವುದಾದರೊಂದು ದಾಖಲೆಯನ್ನು ಆ ಕುಟುಂಬದ ಇನ್ನಿತರ ಸದಸ್ಯರ ಗುರುತಿಗಾಗಿ ಬಳಸಬಹುದು. ಇವುಗಳಲ್ಲಿ ಪಾಸ್‍ಪೋರ್ಟ್, ಡ್ರೈವಿಂಗ್ ಲೈಸನ್ಸ್, ಆದಾಯ ತೆರಿಗೆ ಗುರುತಿನ ಚೀಟಿ, ಬ್ಯಾಂಕ್ ಪಾಸ್‍ಬುಕ್, ಪಡಿತರ ಚೀಟಿ, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆ ಒಳಗೊಂಡಿದೆ.

ಕಸಾಪ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರ ಚುನಾವಣೆ ನವೆಂಬರ್ 21ರಂದು ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ನಡಯಲಿದ್ದು, ಮತದಾನದ ನಂತರ ಅದೇ ದಿನ ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆಯಾಗಲಿದೆ.

ಕಣದಲ್ಲಿರುವ ಅಭ್ಯರ್ಥಿಗಳು: ಜಿಲ್ಲಾ ಅಧ್ಯಕ್ಷರ ಚುನಾವಣಾ ಕಣದಲ್ಲಿ ನ. ಕೆಂಚವೀರಪ್ಪ, ಜೆ. ತಿಪ್ಪೇಸ್ವಾಮಿ ಕೊರ್ಲಕುಂಟೆ, ರಾ. ಸು. ತಿಮ್ಮಯ್ಯ ಗೌಡಿಹಳ್ಳಿ, ಡಾ. ದೊಡ್ಡಮಲ್ಲಯ್ಯ, ಪತ್ರಕರ್ತ ಮಾಲತೇಶ್ ಅರಸ್ ಹರ್ತಿಕೋಟೆ, ಡಿ. ಓ. ಮುರಾರ್ಜಿ, ಕೆ. ಎಂ. ಶಿವಸ್ವಾಮಿ ನಾಯಕನಹಟ್ಟಿ, ಆರ್. ಶೇಷಣ್ಣಕುಮಾರ್ ಹಾಗೂ ಚಿಕ್ಕಪ್ಪನಹಳ್ಳಿ ಷಣ್ಮುಖ ಸೇರಿದಂತೆ ಒಟ್ಟು 9 ಅಭ್ಯರ್ಥಿಗಳಿದ್ದಾರೆ.

ಚುನಾವಣೆಯ ಜಿಲ್ಲಾ ಚುನಾವಣಾಧಿಕಾರಿಗಳಾಗಿ ಜಿಲ್ಲಾ ಕೇಂದ್ರದ ಚಿತ್ರದುರ್ಗ ತಾಲ್ಲೂಕು ತಹಶೀಲ್ದಾರ್ ನೇಮಕ ಮಾಡಲಾಗಿದೆ. ಚುನಾವಣೆಗಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಚಿತ್ರದುರ್ಗ ಜಿಲ್ಲಾಧ್ಯಕ್ಷರ ಮತಪತ್ರಗಳ ಮುದ್ರಣ, ಕೇಂದ್ರ ಚುನಾವಣಾಧಿಕಾರಿಗಳಿಂದ ಚುನಾವಣಾ ಸಾಮಗ್ರಿಗಳ ಸ್ವೀಕಾರ, ಮತದಾನ ಪ್ರಕ್ರಿಯೆಗೆ ಅಗತ್ಯ ವ್ಯವಸ್ಥೆ, ಮತ ಎಣಿಕೆಗೆ ಒಂದು ಮತಗಟ್ಟೆ ಪಿಆರ್‍ಓ, ಎಪಿಆರ್‍ಓ-1, ಮತಗಟ್ಟೆ ಅಧಿಕಾರಿ-3, ಡಿ ಗ್ರೂಪ್-1 ಸೇರಿದಂತೆ ಒಂದು ಮತಗಟ್ಟೆಗೆ 6 ಜನ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ.

Recommended Video

ರಾವಣನ ಬಳಿ ವಿಮಾನ ಇತ್ತಾ? ಇಲ್ವಾ‌? ಸಂಶೋಧನೆಗಾಗಿ ಭಾರತಕ್ಕೆ ಕರೆ ಕೊಟ್ಟ ಶ್ರೀಲಂಕಾ | Oneindia Kannada

ಚುನಾವಣಾ ಫಲಿತಾಂಶ ಪ್ರಕಟಣೆ, ಜಿಲ್ಲಾಧ್ಯಕ್ಷರ ಆಯ್ಕೆ ಬಗ್ಗೆ ಘೋಷಿಸುವ ಕುರಿತು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣಾಧಿಕಾರಿಯಾದ ಚಿತ್ರದುರ್ಗ ತಾಲ್ಲೂಕು ತಹಶೀಲ್ದಾರ್ ಸತ್ಯನಾರಾಯಣ ತಿಳಿಸಿದ್ದಾರೆ.

English summary
To elect Kannada sahitya parishat Chitradurga district president election will be held on November 21. Election result also announced same day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X