Get Updates
Get notified of breaking news, exclusive insights, and must-see stories!

'ಮಹಾ'ದಲ್ಲಿ ಕನ್ನಡ ಬಾವುಟ ದಹನ; ಎಂಇಎಸ್ ಕಾರ್ಯಕರ್ತರನ್ನು ಗಡಿಪಾರು ಮಾಡುವಂತೆ ಆಗ್ರಹ

ಚಿತ್ರದುರ್ಗ, ಡಿಸೆಂಬರ್ 16: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಬಾವುಟವನ್ನು ದಹನ ಮಾಡಿರುವ ಎಂಇಎಸ್ ಕಾರ್ಯಕರ್ತರು ಪುಂಡಾಟಿಕೆ ಮೆರೆದಿರುವುದನ್ನು ಖಂಡಿಸಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿ, ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ಸದ್ಯ ಚಳಿಗಾಲದ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಇಡೀ ಸರ್ಕಾರವೇ ಅಲ್ಲಿರುವಾಗ ಇದರ ಮಧ್ಯೆಯೇ ಎಂಇಎಸ್ ಕಾರ್ಯಕರ್ತರ ಈ ರೀತಿ ವರ್ತನೆ ಮಾಡಿರುವುದು ಸರಿಯಲ್ಲ. ನಮ್ಮ ನೆಲದಲ್ಲಿ ಅನ್ನ, ನೀರು, ಗಾಳಿ ಸೇವಿಸಿ ನಮಗೆ ದ್ರೋಹ ಬಗೆಯುತ್ತಿದ್ದಾರೆ. ಸರ್ಕಾರ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಎಂಇಎಸ್ ಕಾರ್ಯಕರ್ತರು ಹಾಗೂ ಶಿವಸೇನೆ ಕಾರ್ಯಕರ್ತರು ಪದೇ ಪದೇ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಲೇ ಬರುತ್ತಿದ್ದಾರೆ. ಪ್ರತಿಭಟನೆ ನೆಪ ಹೇಳಿಕೊಂಡು ಕನ್ನಡ ಬಾವುಟವನ್ನು ಸುಟ್ಟು ಹಾಕಿರುವುದು ಕನ್ನಡಿಗರ ಹಾಗೂ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ನಮ್ಮ ಕನ್ನಡದ ಶಕ್ತಿ ಏನೆಂದು ತೋರಿಸಬೇಕು. ಹಾಗಾಗಿ ಈ ಸಮಯದಲ್ಲಿ ಸರ್ಕಾರ ಮೌನ ವಹಿಸುವುದು ಸೂಕ್ತವಲ್ಲ. ಪುಂಡರಿಗೆ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದರು.

Kannada Flag Set on Fire in Maharashtra; Kannada Activists Demand To MES Activists Deportation

ಈ ಕುರಿತು ಮಾತನಾಡಿರುವ ಸಂಘಟನೆಯ ಮುಖಂಡರು, ಬೆಳಗಾವಿಯಲ್ಲಿ ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ ಗಲ್ಲಿಗೆರಿಸಿ, ಇಲ್ಲವಾದರೆ ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದರು. ಕರ್ನಾಟಕದ 224 ವಿಧಾನಸಭಾ ಕ್ಷೇತ್ರದ ಯಾವೊಬ್ಬ ಶಾಸಕರು ಕೂಡ ಇದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ, ಅವರಿಗೆ ಕನ್ನಡ ನಾಡು ನುಡಿಯ ಬಗ್ಗೆ ರಕ್ಷಣೆ ಬೇಕಿಲ್ಲ ಎಂದು ಆರೋಪಿಸಿದರು.

ಕನ್ನಡ ಬಾವುಟ ದಹನ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದರೂ ರಾಜ್ಯ ಸರ್ಕಾರದ ಗಮನಕ್ಕೆ ಬಂದಿಲ್ಲವೇ? ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.

Kannada Flag Set on Fire in Maharashtra; Kannada Activists Demand To MES Activists Deportation

ಅನುಮತಿಯಿಲ್ಲದೆ ಹೋರಾಟ ಮಾಡುವ ಎಂಇಎಸ್ ಹಾಗೂ ಶಿವಸೇನೆ ಪುಂಡರನ್ನು ಕೇಳಲು ಹೋದ ಪೋಲಿಸರನ್ನು ಅವಾಚ್ಯ ಶಬ್ದಗಳಾಡಿದವರನ್ನು ಬಿಟ್ಟು, ಕನ್ನಡ ಭಾಷೆಗೆ ಕನ್ನಡ ಧ್ವಜವನ್ನು ಸುಟ್ಟುಹಾಕಿದ ಮರಾಠಿಗರಿಗೆ ಕೇವಲ ಮಸಿ ಬಳಿದ ಕನ್ನಡಿಗರನ್ನು ಬಂಧಿಸಿರುವುದನ್ನು ಯಾವ ನ್ಯಾಯ ಎಂದು ಗೃಹ ಸಚಿವರನ್ನು ಪ್ರಶ್ನೆ ಮಾಡಿದರು.

ಸರ್ಕಾರ ಕೂಡಲೇ ಅವರನ್ನು ಬಂಧಿಸಬೇಕು ಇಲ್ಲವಾದರೆ ಕರ್ನಾಟಕದ ಏಳೂವರೆ ಕೋಟಿ ಕನ್ನಡಿಗರು ಹುಲಿಗಳಾಗಿ ಬೆಳಗಾವಿಗೆ ನುಗ್ಗಿ ಎಂಇಎಸ್ ಪುಂಡರನ್ನು ಬೇಟೆಯಾಡಬೇಕಾಗುತ್ತದೆ, ಇದು ಕನ್ನಡಿಗರ ಆಕ್ರೋಶದ ನುಡಿಗಳು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Kannada Flag Set on Fire in Maharashtra; Kannada Activists Demand To MES Activists Deportation

ಕನ್ನಡ ಧ್ವಜವನ್ನು ಸುಟ್ಟು, ಕನ್ನಡ ತಾಯಿಗೆ ಅವಮಾನ ಮಾಡಿದ ಪುಂಡರನ್ನು ಬಂಧಿಸದೆ ಬಿಟ್ಟು, ಕೇವಲ ಎಂಇಎಸ್ ಓರ್ವ ಕಾರ್ಯಕರ್ತನಿಗೆ ಮಸಿ ಬಳಿದವನನ್ನು ಬಂಧಿಸಿರುವುದನ್ನು ಸರಿಯಲ್ಲ. ಬಂಧಿಸಿರುವ ಸ್ವಾಭಿಮಾನಿ ಕನ್ನಡಿಗರನ್ನು ಈ ಕೂಡಲೇ ಬಿಡುಗಡೆಗೊಳಿಸಬೇಕು, ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಹಿರಿಯೂರು ನಗರದ ರಂಜಿತಾ ಹೋಟೆಲ್‌ನಿಂದ ಪ್ರತಿಭಟನೆ ಮೆರವಣಿಗೆ ಹೋರಟು, ಆಸ್ಪತ್ರೆ ಮುಂಭಾಗದಿಂದ ಗಾಂಧಿ ವೃತ್ತದಲ್ಲಿ ಸೇರಿದ ಕನ್ನಡಪರ ಸಂಘಟನೆಗಳು ಎಂಇಎಸ್ ಕಾರ್ಯಕರ್ತರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಕನ್ನಡ ಪರ ಸಂಘಟನೆಗಳಾದ ಕರ್ನಾಟಕ ರಕ್ಷಣಾ ವೇದಿಕೆ, ನಾರಾಯಣ ಗೌಡ ಬಣದ ಕಾರ್ಯಕರ್ತರು, ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು, ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು, ದಲಿತಪರ ಸಂಘಟನೆಗಳ ಕಾರ್ಯಕರ್ತರು, ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+