ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರುಕಟ್ಟೆಯಲ್ಲಿ ನೇರಳೆ ಹಣ್ಣಿನ ಹವಾ; ಇದು ಕೋವಿಡ್ ಸೋಂಕಿತರಿಗೆ ರಾಮಬಾಣ!

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ 5: ಮುಂಗಾರುಮಳೆ ಆರಂಭವಾದ ಸನ್ನಿಹದಲ್ಲಿ ಮಾವಿನ ಹಣ್ಣು, ಈಚಲು ಹಣ್ಣು, ಹಲಸಿನ ಹಣ್ಣು ಸೇರಿದಂತೆ ಮತ್ತಿತರ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದರ ಜೊತೆಗೆ ವರ್ಷಕ್ಕೊಮ್ಮೆ ಸಿಗುವ ನೇರಳೆ ಹಣ್ಣು ಸಹ ಒಂದಾಗಿದ್ದು, ಜೂನ್ ಮತ್ತು ಜುಲೈ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ.

ನೇರಳೆ ಹಣ್ಣು ಖರೀದಿಸಿ ಸವಿಯಲು ಗ್ರಾಹಕರು ಮುಗಿಬಿಳುವುದುಂಟು. ಈ ಹಣ್ಣಿನಲ್ಲಿ ವಿವಿಧ ರೀತಿಯ ಔಷಧೀಯ ಗುಣಗಳಿವೆ. ಇದರಲ್ಲಿ ಮಧುಮೇಹ ಖಾಯಿಲೆಗೆ ತುಂಬಾ ಅನುಕೂಲವೆಂದು ಹೇಳುತ್ತಾರೆ.

ಬೆಳಗಿನ ಸಮಯ ಮಾರುಕಟ್ಟೆಯಲ್ಲಿ ತಾಜಾ ಹಣ್ಣುಗಳು ಸಿಗುತ್ತವೆ. ಹಾಪ್‌ಕಾಮ್ಸ್, ದೊಡ್ಡ ದೊಡ್ಡ ಹಣ್ಣಿನ ಅಂಗಡಿ, ತಳ್ಳುವ ಗಾಡಿಗಳಲ್ಲಿ ಸೇರಿದಂತೆ ಮತ್ತಿತರರ ಕಡೆಗಳಲ್ಲಿ ನೇರಳೆ ಹಣ್ಣನ್ನು ಮಾರಾಟ ಮಾಡುವುದು ಕಾಣಬಹುದಾಗಿದೆ.

Chitradurga: Huge Demand For Jamun Fruit In Market Due To Its Health Benefits

"ಮಾರುಕಟ್ಟೆಯಲ್ಲಿ ಹೋಲ್‌ಸೇಲ್ ದರದಲ್ಲಿ ಒಂದು ಕೆಜಿ ಜಂಬು ನೇರಳೆ ಹೆಣ್ಣಿಗೆ 100 ರಿಂದ 150 ರೂಪಾಯಿ ಇರುತ್ತದೆ. ಚಿಲ್ಲರೆ ವ್ಯಾಪಾರ ಮಾರಾಟದಲ್ಲಿ 250 ಗ್ರಾಂ.ಗೆ 50 ರೂಪಾಯಿ ಅಂತೆ, ಒಂದು ಕೆಜಿಗೆ 200 ರೂಪಾಯಿಗೆ ಮಾರಾಟ ಮಾಡುತ್ತೆವೆ. ನಾಟಿ ನೇರಳೆ ಹಣ್ಣು ಕೆಜಿಗೆ 150 ರೂಪಾಯಿ ಮಾರಾಟ ಇದೆ. ನಾವು ಹಣ್ಣನ್ನು ಬಬ್ಬೂರಿನಿಂದ ಖರೀದಿಸಿ ತರುತ್ತೇವೆ,'' ಎಂದು ಚಳ್ಳಕೆರೆ ತಾಲೂಕಿನ ಸಾಣಿಕೆರೆಯ ನೇರಳೆ ಹಣ್ಣಿನ ವ್ಯಾಪಾರಿ ನೇತ್ರಾ ಹೇಳಿದರು.

ಔಷಧಿಯ ರೂಪ ಹೊಂದಿದೆ
ನೇರಳೆ ಹಣ್ಣು ಔಷಧೀಯ ಗುಣ ಹೊಂದಿದ್ದು, ಇದರಲ್ಲಿ ಕಬ್ಬಿಣಾಂಶ ಹೆಚ್ಚು ಹೊಂದಿರುತ್ತದೆ. ಆ್ಯಂಟಿ ಆಕ್ಸಿಡೆನ್ಸ್ ಗುಣ ಇರುವುದರಿಂದ ಮನುಷ್ಯನ ಮಧುಮೇಹಿಗೆ ತುಂಬಾ ಅನುಕೂಲಕರವಾಗಿದೆ. ಇದು ಮಾನವನ ದೇಹದಲ್ಲಿ ರಕ್ತ ಶುದ್ಧೀಕರಣ ಮಾಡುವ ಶಕ್ತಿಯನ್ನು ಹೊಂದಿದೆ. ಇದರ ಜೊತೆಗೆ ಮಹಿಳೆಯರ ಸೌಂದರ್ಯ ಹೆಚ್ಚಿಸಬಲ್ಲ ಶಕ್ತಿಯನ್ನು ಹೊಂದಿದೆ.

Chitradurga: Huge Demand For Jamun Fruit In Market Due To Its Health Benefits

ಮಹಿಳೆಯರಿಗೆ ಸೌಂದರ್ಯ ಹೆಚ್ಚಿಸಬಲ್ಲ ಶಕ್ತಿ
ವಿಶೇಷವಾಗಿ ಮಹಿಳೆಯರ ಮುಖದ ಮೇಲೆ ಬರುವ ಮೊಡವೆಗಳಿಗೆ ನೇರಳೆ ಹಣ್ಣಿನ ರಸದೊಂದಿಗೆ, ಹಾಲು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಮೊಡವೆಗಳು ನಿವಾರಣೆಯಾಗುತ್ತದೆ ಎನ್ನಬಹುದು. ಇದೇ ವೇಳೆ ನೇರಳೆ ಹಣ್ಣಿನಿಂದ ಜ್ಯೂಸ್ ಮಾಡಿ ಕುಡಿಯಬಹುದು.

Chitradurga: Huge Demand For Jamun Fruit In Market Due To Its Health Benefits

Recommended Video

T 20 ವಿಶ್ವ ಕಪ್ ಒಮನ್ ನಲ್ಲಿ ಆದ್ರೆ ಆಟಗಾರರಿಗೆ ತೊಂದ್ರೆ ತಪ್ಪಿದ್ದಲ್ಲ!! | Oneindia Kannada

"ನೇರಳೆ ಹಣ್ಣಿನಲ್ಲಿ ವಿಟಮಿನ್ 'ಸಿ' ಹೇರಳವಾಗಿರುತ್ತದೆ. ವಿಟಮಿನ್ ಬಿ- 12 ಇದು ಕೂಡ ಇರುತ್ತದೆ. ಡಯಾಬಿಟಟೀಸ್, ರಕ್ತದೊತ್ತಡ (ಬಿಪಿ), ಕೋವಿಡ್ ಸೋಂಕಿತರು ಸಹ ಈ ಹಣ್ಣು ಸೇವಿಸುವುದರಿಂದ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ನೇರಳೆ ಬೀಜದಲ್ಲಿ ಕ್ಯಾಲ್ಸಿಯಂ ಇರುತ್ತದೆ. ನೇರಳೆ ಬೀಜದ ಪುಡಿಯನ್ನು ಉಪಯೋಗಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಈ ಹಣ್ಣು ತಿನ್ನುವುದರಿಂದ ರಕ್ತ ಶುದ್ಧೀಕರಣ ಮಾಡುವ ಶಕ್ತಿಯನ್ನು ಹೊಂದಿದೆ. ಮಾನವನ ಆರೋಗ್ಯಕ್ಕೆ ಉತ್ತಮವಾದ ಹಣ್ಣಾಗಿದೆ,'' ಎಂದು ಹಿರಿಯೂರು ತಾಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

English summary
Huge Demand For Jamun Fruit: Sales of Jamun fruit increases in Chitradurga market due to its health benefits. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X