Vani Vilasa Sagara Dam: ಇತಿಹಾಸ ಪ್ರಸಿದ್ಧ ವಾಣಿ ವಿಲಾಸ ಸಾಗರ ಡ್ಯಾಂ ನೀರಿನ ಮಟ್ಟ ಎಷ್ಟಿದೆ ಗೊತ್ತಾ?
Vani Vilasa Sagara Dam: ಹಿರಿಯೂರಿನ ತಾಲೂಕಿನ ವಾಣಿ ವಿಲಾಸ ಸಾಗರ ಡ್ಯಾಂ ರಾಜ್ಯದ ಹಳೇ ಅಣೆಕಟ್ಟುಗಳಲ್ಲಿ ಒಂದಾಗಿದೆ. ಇದು ಇದೇ ವರ್ಷದಲ್ಲಿ ಎರಡು ಬಾರಿ ಕೋಡಿ ಬಿದ್ದು ಹೊಸ ಇತಿಹಾಸ ಬರೆದಿದೆ. ಹಾಗಾದ್ರೆ ಇಂದು (ನವೆಂಬರ್ 24) ನೀರಿನ ಮಟ್ಟ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನಲ್ಲಿರುವ ಈ ಮಾರಿಕಣಿವೆ ಜಲಾಶಯ 2025ರ ಜನವರಿಯಲ್ಲಿ ಮೊದಲ ಬಾರಿಗೆ ಭರ್ತಿ ಆಗಿತ್ತು. ಮತ್ತೆ ಇದೇ ಅಕ್ಟೋಬರ್‌ನಲ್ಲಿ ಕೋಡಿ ಬಿದ್ದಿದ್ದು, ವರ್ಷದಲ್ಲಿ ಎರಡನೇ ಬಾರಿ ಭರ್ತಿಯಾಗಿದೆ. ಮತ್ತೊಂದೆಡೆ ಇದುವರೆಗೂ ನಾಲ್ಕನೇ ಬಾರಿಗೆ ಕೋಡಿ ಬಿದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಾಣಿ ವಿಲಾಸ ಸಾಗರ ಜಲಾಶಯವನ್ನು ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. 2025ರಲ್ಲಿ ಎರಡು ಬಾರಿ ಕೋಡಿ ಬಿದ್ದು ಇತಿಹಾಸ ಬರೆದಿದೆ. ಜನವರಿಯಲ್ಲಿ ಭದ್ರ ಡ್ಯಾಂನಿಂದ ಬಿಟ್ಟ ನೀರಿನಿಂದ ಕೋಡಿ ಬಿದ್ದರೆ, ಅಕ್ಟೋಬರ್‌ನಲ್ಲಿ ಮಳೆ ನೀರಿನಿಂದ ಕೋಡಿ ಬಿದ್ದು ಇತಿಹಾಸ ನಿರ್ಮಿಸಿದೆ. ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯ 130 ಅಡಿ (30 ಟಿಎಂಸಿ) ಆಗಿದ್ದು, ಇದೀಗ ನೀರಿನ ಮಟ್ಟ 131.15 ಅಡಿ ಇದೆ.
ಯಾವ್ಯಾವಾಗ ಡ್ಯಾಂ ಭರ್ತಿ?: 1933ರಲ್ಲಿ ಜಲಾಶಯಕ್ಕೆ 135.25 ಅಡಿ ನೀರು ಸಂಗ್ರಹ ಆಗುವ ಮೂಲಕ ಮೊದಲ ಬಾರಿಗೆ ಕೋಡಿ ಬಿದ್ದು ಇತಿಹಾಸ ಸೃಷ್ಟಿಸಿತ್ತು. ಬಳಿಕ 2022ರಲ್ಲಿ 135, 2025ರ ಜನವರಿ ತಿಂಗಳಲ್ಲಿ 130 ಅಡಿ ನೀರು ಬಂದಿದ್ದು, ಈ ವೇಳೆ ಕೋಡಿ ಬಿದ್ದು ಮೂರನೇ ಬಾರಿ ದಾಖಲೆ ಸೃಷ್ಟಿಸಿತ್ತು. ಇದೀಗ ಮತ್ತೆ ಇದೇ ವರ್ಷದ ಅಕ್ಟೋಬರ್‌ನಲ್ಲಿ ಭರ್ತಿಯಾಗಿದೆ. ಈ ಮೂಲಕ ಇದೇ ವರ್ಷದಲ್ಲಿ ಎರಡು ಬಾರಿ ಕೋಡಿ ಬಿದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ.
ವರ್ಷವಾರು ನೀರಿನ ಮಟ್ಟದ ವಿವರ
* 1917 - 120.60 ಅಡಿ
* 1918 - 121.30 ಅಡಿ
* 1919 - 128.30 ಅಡಿ
* 1920 - 125.50 ಅಡಿ
* 1932 - 125.50 ಅಡಿ
* 1933 - 135.25 ಅಡಿ
* 1934 - 130.24 ಅಡಿ
* 1935 - 123.22 ಅಡಿ
* 1956 - 125 ಅಡಿ
* 1957 - 125.05 ಅಡಿ
* 1958 - 124.50 ಅಡಿ
* 2000 - 122.50 ಅಡಿ
* 2021 - 125.50 ಅಡಿ
* 2022 - 135 ಅಡಿ
* 2024 - 128.40 ಅಡಿ
* 2025 ಜನವರಿ - 130 ಅಡಿ
* 2025ರ ಅಕ್ಟೋಬರ್ - 130 ಅಡಿ
ಪ್ರಸ್ತುತ ನೀರಿನ ಮಟ್ಟ
* ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ: 30.422 ಟಿಎಂಸಿ
* ಪ್ರಸ್ತುತ ನೀರಿನ ಮಟ್ಟ: 131.೧5 ಅಡಿ
* ಒಳಹರಿವು: 0 ಕ್ಯೂಸೆಕ್
* ಹೊರಹರಿವು: 271 ಕ್ಯೂಸೆಕ್
1907ರಲ್ಲಿ ನಿರ್ಮಾಣ ಆಗಿರುವ ಈ ಡ್ಯಾಂಗೆ ಸುಮಾರು 117 ವರ್ಷಗಳ ಕಾಲ ಇತಿಹಾಸ ಇದೆ. ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ "ವೇದಾ" ನದಿ ಕಡೂರಿನ ಬಳಿ "ಅವತಿ" ಎಂಬ ನದಿಯನ್ನು ಸೇರಿ ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ. ಇದು ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಜೀವನಾಡಿ ಆಗಿದೆ. ಈ ಡ್ಯಾಂ ವಿನ್ಯಾಸ ಇಂಡಿಯಾ ಭೂಪಟದಂತೆ ಇದ್ದು, ಪ್ರವಾಸಿಗರ ಪ್ರಮುಖ ಆಕರ್ಷಣೆ ಆಗಿದೆ.












Click it and Unblock the Notifications