ಹಿರಿಯೂರು: ಚಿಲ್ಲರೆ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ಕೊಡಿ ಸಾರ್‌.. ಪತ್ರ ಭಾರೀ ವೈರಲ್‌

ಹಿರಿಯೂರು, ಫೆಬ್ರವರಿ, 22: ಚಿಲ್ಲರೆ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ಕೋರಿ ಅಬಕಾರಿ ಇಲಾಖೆಗೆ ವ್ಯಕ್ತಿಯೊಬ್ಬರು ಪತ್ರ ಬರೆದ ಪ್ರಸಂಗ ನಡೆದಿದ್ದು, ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಪತ್ರ: ತಾಲೂಕಿನ ಹೊಸನಾಯಕರಹಟ್ಟಿ ಗ್ರಾಮದ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಹೆಚ್.ಸಿ. ಚಂದ್ರಶೇಖರ್ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿ ಬೇಡಿಕೆ ಇಟ್ಟಿದ್ದಾನೆ.

Hiriyur: Demand to allow liquor sale in retail shop, letter went viral

ಹೊಸನಾಯಕರಹಟ್ಟಿ ಗ್ರಾಮದ ನಿವಾಸಿಯಾದ ನಾನು ನಮ್ಮ ಮನೆಯಲ್ಲಿ ಒಂದು ಚಿಕ್ಕಕಿರಾಣಿ ಅಂಗಡಿಯನ್ನು ತೆರೆಯುತ್ತಿದ್ದು, ಈ ಚಿಲ್ಲರೆ ಅಂಗಡಿಯಲ್ಲಿ ಮಧ್ಯ ಮಾರಾಟ ಮಾಡಲು ಉತ್ಸುಕರಾಗಿದ್ದೇನೆ. ತಾವುಗಳು ದಯಮಾಡಿ ನನ್ನ ಚಿಲ್ಲರೆ ಅಂಗಡಿಯಲ್ಲಿ ಮಧ್ಯ ಮಾರಾಟ ಮಾಡಲು ಅನುಮತಿ ನೀಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಪತ್ರ ಬರೆದು ಸಹಿ ಹಾಕಿ ಮನವಿ ಮಾಡಿದ್ದಾರೆ.

ಮನವಿ ಪತ್ರ ಸ್ವೀಕರಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು: ಇನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಹೆಚ್.ಸಿ.ಚಂದ್ರಶೇಖರ್ ಅವರ ಮನವಿ ಪತ್ರವನ್ನು ಸ್ವೀಕರಿಸಿದ್ದಾರೆ. ಈತನ ಬೇಡಿಕೆಗೆ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+