ಹಿಂದೂ ಧರ್ಮವೇ ಅಲ್ಲ, ಅದು ಅನೈತಿಕತೆ-ಅನಾಚಾರ: ವಿವಾದ ಹೇಳಿಕೆ ನೀಡಿದ ಸ್ವಾಮೀಜಿ
ಚಿತ್ರದುರ್ಗ, ಆಗಸ್ಟ್, 09: ಹಿಂದೂ ಧರ್ಮ ಅಂದರೆ ಅನೈತಿಕ, ಅನಾಚಾರ. ಹಿಂದೂ ಧರ್ಮವೇ ಅಲ್ಲ ಎಂದು ಸಾಣೇಹಳ್ಳಿ ತರಳಬಾಳು ಮಠದ ಪಂಡಿತರಾಧ್ಯ ಶ್ರೀಗಳು ವಿವಾದದ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದು. ಇನ್ನು ಇದೀಗ ಶ್ರೀಗಳು ನೀಡಿರುವ ಈ ವಿವಾದಾತ್ಮಕ ಹೇಳಿಕೆ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಹಾಗಾದರೆ ಇನ್ನೂ ಏನೆಲ್ಲ ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರಯಲ್ಲಿ ನಡೆದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ 30ನೇ ಸ್ಮರಣಾ ಕಾರ್ಯಕ್ರಮ ಹಾಗೂ ಚಿನ್ಮೂಲಾದ್ರಿಯ ಚಿತ್ಕಳೆ ಸ್ಮರಣೋತ್ಸವ ಸಂಪುಟ ಲೋಕಾರ್ಪಣೆ ಸಮಾರಂಭದಲ್ಲಿ ಬಸವತತ್ವ ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು. ಹಿಂದೂ ಧರ್ಮದಲ್ಲಿರುವ ವೇದ, ಪುರಾಣಗಳು, ಶಾಸ್ತ್ರಗಳು, ಲಿಂಗಾಯತ ಧರ್ಮದ ಮೂಲಗಳಲ್ಲ. ಹಾಗಾಗಿ ಹಿಂದೂ ಧರ್ಮದ ಭಾಗ ಲಿಂಗಾಯತ ಧರ್ಮ ಎನ್ನುವುದು ಸರಿಯಲ್ಲ ಎಂದರು. ಹಿಂದೂ ಎನ್ನುವುದು ಅನೈತಿಕ, ಅನಾಚಾರಗಳಿಂದ ಒಳಗೊಂಡಿದೆ.

ಇಂತಹ ಧರ್ಮವನ್ನು ಶರಣರು ನಿರಾಕರಿಸಿ ಜಾತ್ಯತೀತ ತತ್ವಗಳನ್ನು ಒಳಗೊಂಡ ಲಿಂಗಾಯತ ಧರ್ಮವನ್ನು ಒಪ್ಪಿಕೊಂಡಿದ್ದಾರೆ. ವಚನಗಳಲ್ಲಿ ಲಿಂಗಾಯತ ಧರ್ಮದ ಸಾರವನ್ನು ನಾಡಿಗೆ ಬಿತ್ತರಿಸಿ ಸಾಕ್ಷಾತ್ಕರಿಸಿದ್ದಾರೆ. ಆದ್ದರಿಂದ ಯಾವತ್ತೂ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೇ ಹೊರತು ಹಿಂದೂ ಧರ್ಮಕ್ಕೆ ಸಂಬಂಧಿಸಿಲ್ಲ ಎಂದು ಹೇಳಿದರು. ಅಹಿಂಸಾ ಜೀವನ ನಡೆಸಬೇಕು ಎಂದು ಬಸವಣ್ಣ ಹೇಳಿದ್ದರು.
ಸಿಂಧೂ ನದಿಯ ಬೈಲಲ್ಲಿ ಇರುವವರು ಕೂಡ ಎಲ್ಲರೂ ಹಿಂದುಗಳು ಎಂದರು. ನಮ್ಮದು ಸ್ವತಂತ್ರ ಲಿಂಗಾಯತ ಧರ್ಮ. ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವೇ ಅಲ್ಲ. ಮಲ್ಲಿಕಾರ್ಜುನ ಸ್ವಾಮೀಜಿ ಬಸವ ತತ್ವದ ನಿಷ್ಠರಾಗಿದ್ದರು ಎಂದು ತಿಳಿಸಿದರು.
ಮೋದಿ ಬಗ್ಗೆ ವಿವಾದಾತ್ಮಕ ಹೇಳಿಕೆ: ಈ ಹಿಂದೆ ಪೇಟ ಧರಿಸಿದ ಯುವಕನೊಬ್ಬ ಪ್ರಧಾನಿ ಮೋದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಹಾಗಾದರೆ ಆವಿಡಿಯೋದಲ್ಲಿ ಏನಿದೆ ಎನ್ನುವ ಮಾಹಿತಿ ಏನು ಹಾಗೂ ಇದಕ್ಕೆ ಪ್ರತಿಕ್ರಿಯೆಗಳು ಹೇಗೆ ವ್ಯಕ್ತವಾಗಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
"ಮುಂದಿನ ಎರಡು-ಮೂರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲಲಾಗುವುದು" ಎಂದು ಪೇಟ ಧರಿಸಿದ ಯುವಕನೊಬ್ಬನ ಹೇಳಿಕೆಯ ವೀಡಿಯೊ ದಿ ಅನಾಲೈಸರ್ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ವೈರಲ್ ಆಗಿದೆ.
ವೀಡಿಯೊದಲ್ಲಿ, ಗುಂಪಿನಲ್ಲಿ ನಿಂತಿರುವ ಪೇಟ ಧರಿಸಿದ ಯುವಕನೊಬ್ಬ ಪತ್ರಕರ್ತನಿಗೆ ಮುಂದಿನ ಎರಡು-ಮೂರು ವರ್ಷಗಳಲ್ಲಿ ಮೋದಿಜಿ ಕೊಲ್ಲಲ್ಪಟ್ಟ ಸುದ್ದಿ ಸಿಗುತ್ತದೆ ಎಂದು ಹೇಳಿದ್ದಾನೆ. ಈ ಬಗ್ಗೆ, ಮಹಿಳಾ ಪತ್ರಕರ್ತೆ ತಿರುಗಿ ನೀವು ದೊಡ್ಡ ವಿಷಯವನ್ನು ಹೇಳುತ್ತಿದ್ದೀರಿ ಎಂದು ಕೇಳುತ್ತಾರೆ. ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ ಎಂದು ಈ ಯುವಕ ಹೇಳಿರುವ ವಿಡಿಯೋ ಇದೀಗ ಭಾರೀ ಸದ್ದು ಮಾಡುತ್ತಿದೆ.
ನಾನು ದೊಡ್ಡ ವಿಷಯವನ್ನು ಹೇಳುತ್ತಿದ್ದೇನೆ. ಆದಾಗ್ಯೂ, ವೈರಲ್ ವೀಡಿಯೊದಲ್ಲಿ ಯುವಕ ಯಾವ ಸಂದರ್ಭದಲ್ಲಿ ಮಾತನಾಡುತ್ತಿದ್ದಾನೆ ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತಿಲ್ಲ. ವೀಡಿಯೊದ ಸತ್ಯಾಸತ್ಯತೆ ಏನೆಂಬುದು ತಿಳಿದುಬಂದಿಲ್ಲ. ಹಾಗಾದರೆ ಈ ವಿಡಿಯೋಗೆ ಯಾವ ರೀತಿ ಪ್ರತಿಕ್ರಿಯೆಗಳು ಬಂದಿವೆ ಎನ್ನುವ ಮಾಹಿತಿಯನ್ನು ಈ ಟ್ವಿಟರ್ ಖಾತೆಯಲ್ಲೇ ಪರಿಶೀಲಿಸಿ.












Click it and Unblock the Notifications