• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಎಂ ಪರಿಹಾರ ನಿಧಿಗೆ ಒಂದು ತಿಂಗಳ ವೇತನ ಒಪ್ಪಿಸಿದ ಚಿತ್ರದುರ್ಗದ ಸರ್ಕಾರಿ ನೌಕರ

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಮಾರ್ಚ್ 26: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹರಡುವಿಕೆ ದಿನೇ ದಿನೇ ಹೆಚ್ಚಾಗಿದ್ದು, ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ. ಇದೇ ವೇಳೆ ಕೋವಿಡ್ 19 ಪರಿಹಾರ ನಿಧಿಗೆ ದಾನಿಗಳು ಹಣ ನೀಡುವಂತೆ ಸಿಎಂ ಕೋರಿದ್ದಾರೆ.

ಈ ಮನವಿಗೆ ಸ್ಪಂದಿಸಿರುವ ಚಿತ್ರದುರ್ಗದ ಸರ್ಕಾರಿ ನೌಕರ ಒಂದು ತಿಂಗಳ ವೇತನವನ್ನು ಸರ್ಕಾರಕ್ಕೆ ನೀಡಿದ್ದಾರೆ. ನಿನ್ನೆ ರಾಜ್ಯದ ಮುಖ್ಯಮಂತ್ರಿಗಳು ಸಾರ್ವಜನಿಕರಲ್ಲಿ ಕೋವಿಡ್ 19 ಪರಿಹಾರ ನಿಧಿಗೆ ನೆರವಾಗುವಂತೆ ಮನವಿ ಮಾಡಿದ್ದರು.

ಕೊವಿಡ್19 ವಿರುದ್ಧ ಹೋರಾಡಲು ದೇಣಿಗೆ ನೀಡಿ: ಸಿಎಂ ಬಿಎಸ್ವೈ

ಕೋವಿಡ್ -19 ರಾಜ್ಯದಾದ್ಯಂತ ಹರಡಿದ್ದು ಈ ವೈರಾಣು ತಡೆಗಟ್ಟಲು ತಾವು ಸರ್ಕಾರದೊಂದಿಗೆ ಕೈಜೋಡಿಸಬೇಕೆಂದು ವಿನಂತಿಸಿದ್ದರು. ಅದರಂತೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಸಹಾಯಕ ತೋಟಗಾರಿಕೆ ನಿರ್ದೇಶಕ ಟಿ. ಮಧು ಎಂಬುವರು ತಮ್ಮ ತಿಂಗಳ ವೇತನವನ್ನು ಯಾವುದೇ ವೈಯಕ್ತಿಕ ಕಡಿತ ಮಾಡದೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವರ್ಗಾಯಿಸಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಚಿತ್ರದುರ್ಗದ ಜನತೆ ಸರ್ಕಾರಕ್ಕೆ ದೇಣಿಗೆ ಸಲ್ಲಿಸುವವರು ಆದಾಯ ತೆರಿಗೆ ಕಾಯ್ದೆ 80G (2) ರ ತೆರಿಗೆ ವಿನಾಯಿತಿ ಇದೆ. ಆದಾಯ ತೆರಿಗೆ ವಿನಾಯಿತಿ ಪಡೆಯಲು PAN NO. AAAGC1692P ಅಥವಾ GGGGG 0000G ಅನ್ನು ಬಳಸಬಹುದಾಗಿದೆ.

English summary
A government employee in chitradurga has donated his one month salary to cm covid 19 relief fund
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X