ಚಿತ್ರದುರ್ಗದಲ್ಲಿ ಮಾಜಿ ಸಿಎಂ ಮನೆ ಮಾರಾಟಕ್ಕಿದೆ.!

ಚಿತ್ರದುರ್ಗ, ನವೆಂಬರ್‌, 10: ಕರ್ನಾಟಕ ಏಕೀಕರಣದ ಮುಂಚೂಣಿ ನಾಯಕರು ಹಾಗೂ ನಾಲ್ಕು ಬಾರಿ ಸಿಎಂ ಆಗಿದ್ದ ಚಿತ್ರದುರ್ಗದ ದಿವಂಗತ ಎಸ್.ನಿಜಲಿಂಗಪ್ಪ ಅವರ ನಿವಾಸ ಮಾರಾಟಕ್ಕಿದೆ. ಹಾಗಾದರೆ ದರ ಎಷ್ಟು ಹಾಗೂ ಬಂಗಲೆಯ ಸುತ್ತಮುತ್ತ ಏನೆಲ್ಲ ಸೌಲಭ್ಯಗಳಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಸೈಟ್‌ ಅಳತೆಯ ವಿವರ: ಕೋಟೆ ನಾಡು ಚಿತ್ರದುರ್ಗ ನಗರದ ವಾರ್ಡ್ ನಂಬರ್.32 ವಿ.ಪಿ ಬಡಾವಣೆಯಲ್ಲಿರುವ ಡಿ.ಸಿ ಬಂಗಲೆಯ ಸಮೀಪವಿರುವ 117 X 130 ಅಡಿ ಅಳತೆಯ ಸೈಟಿನಲ್ಲಿ ಇರುವ ನಿವಾಸವನ್ನು ಮಾರಾಟಕ್ಕೆ ಇಲಾಗಿದೆ.

Former CM S Nijalingappa s House for will be Sale in Chitradurga

ರಾಜ್ಯಕ್ಕೆ ಎಸ್.ನಿಜಲಿಂಗಪ್ಪ ಕೊಡುಗೆಗಳೇನು?: ಆಧುನಿಕ ಕರ್ನಾಟಕದ ಶಿಲ್ಪಿಗಳಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಕೂಡ ಒಬ್ಬರಾಗಿದ್ದಾರೆ. ನವ ಕರ್ನಾಟಕದ ನಿರ್ಮಾತೃ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅವರು ಬೃಹತ್ ನೀರಾವರಿ ಯೋಜನೆಗಳು, ಹಲವು ಕೈಗಾರಿಕೆಗಳು ಸೇರಿದಂತೆ ಕರ್ನಾಟಕವನ್ನು ಕಟ್ಟುವ ಮಹತ್ವ ಕಾರ್ಯಗಳ ಮೂಲಕ ರಾಜ್ಯದ ಅಭಿವೃದ್ಧಿ ಹಾಗೂ ಜನತೆಗೆ ದೊಡ್ಡ ಕೊಡುಗೆ ನೀಡಿದ್ದರು.

ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಲ್ಲದೆ, ಕರ್ನಾಟಕದ ಏಕೀಕರಣದ ಹೋರಾಟದ ಮುಂಚೂಣಿ ನಾಯಕರಾಗಿದ್ದರು. ನಾಡಿಗಾಗಿ ಬದುಕನ್ನೇ ಮುಡಿಪಾಗಿಟ್ಟ ಹಿರಿಯ ಮುತ್ಸದ್ದಿ ಬಾಳಿ ಬದುಕಿದ ಮನೆಯನ್ನು ಸ್ಮಾರಕ ಮಾಡಬೇಕೆಂಬ ಅವರ ಕುಟುಂಬ ಸದಸ್ಯರು ಹಾಗೂ ಹಿತೈಷಿಗಳು ಪ್ರಯತ್ನಗಳಿಗೆ ಸರ್ಕಾರದ ಕಡೆಯಿಂದ ಸರಿಯಾದ ಸ್ಪಂದನೆ ಸಿಕ್ಕಿರಲಿಲ್ಲ. ಇದೀಗ ಈ ಪ್ರಯತ್ನ ಫಲಿಸದೆ ಇರುವುದರಿಂದ ಕುಟುಂಬದ ಸದಸ್ಯರು ಮನೆಯನ್ನ ಮಾರಾಟಕ್ಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮನೆಯ ಮೌಲ್ಯದ ವಿವರ: ಮನೆಯ ಪೋಟೋ ಹಾಗೂ ಮಾರಾಟದ ಜಾಹೀರಾತು ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಬಂಗಲೆ ಬಳಿ ಇರುವ ಪಾರಂಪರಿಕ ಕಟ್ಟಡವಾದ ಮಾಜಿ ಮುಖ್ಯಮಂತ್ರಿ ಹಾಗೂ ಎಐಸಿಐ ಅಧ್ಯಕ್ಷ ಲಿಂಗಪ್ಪನ ಅವರ ಮನೆ ಮಾರಾಟಕ್ಕಿದೆ. ಈ ಮನೆಯ ಮೌಲ್ಯ ಈಗ 10,00,00,000 ಕೋಟಿ ರೂಪಾಯಿ ಎಂಬ ಜಾಹೀರಾತು ಇದಾಗಿದೆ.

ಇನ್ನು ಈ ಮನೆಯನ್ನು ಕೊಂಡು ಅದನ್ನು ಸ್ಮಾರಕವನ್ನಾಗಿಸಲು ಸರ್ಕಾರ ಕೂಡ ಮೊದಲು ಮುಂದಾಗಿತ್ತು. ಅದಕ್ಕಾಗಿ ನಾಲ್ಕು ಸಭೆಗಳನ್ನು ನಡೆಸಲಾಗಿತ್ತು. ಆದರೆ, ಆ ಸಭೆಗಳ ನಂತರ ಸರ್ಕಾರ ಯಾಕೋ ಹಿಂದೇಟು ಹಾಕಿದಂತೆ ಕಂಡುಬಂದಿದೆ. ಆದ್ದರಿಂದ ನಿಜಲಿಂಗಪ್ಪನವರು ಬದುಕಿದ್ದಾಗ ಮಾಡಿರುವ ವಿಲ್ ಪತ್ರ ಇದಾಗಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+