ಚಿತ್ರದುರ್ಗ ಜಿಲ್ಲೆಯ ಈ ಪ್ರಮುಖ ರೈಲ್ವೆ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ- ಯಾವಾಗಿನಿಂದ?-ಇಲ್ಲಿದೆ ಮಾಹಿತಿ
ಚಿತ್ರದುರ್ಗ, ಮಾರ್ಚ್, 06: ಈಗಾಗಲೇ ರಾಜ್ಯದ ಹಲವೆಡೆ ಎಕ್ಸ್‌ಪ್ರೆಸ್ ರೈಲುಗಳನ್ನು ಬಿಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇನ್ನುಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಪ್ರಮುಖ ವಹಿವಾಟು ಕೇಂದ್ರ ಆಗಿರುವ ಚಿಕ್ಕಜಾಜೂರು ಜಂಕ್ಷನ್ ರೈಲ್ವೆ ನಿಲ್ದಾಣವನ್ನು ಈಗಾಗಲೇ ಅಭಿವೃದ್ದಿ ಪಡಿಸಲಾಗಿದ್ದು, ಇಲ್ಲಿ ಹಲವು ರೈಲುಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ. ಇದು ಇಂದು (ಮಾರ್ಚ್ 06) ಜಾರಿಗೆ ಬರಲಿದೆ. ಹಾಗಾದರೆ ಸಂಪೂರ್ಣ ಮಾಹಿತಿ ಇಲ್ಲಿದೆ ಗಮನಿಸಿ.
ಚಿಕ್ಕಜಾಜೂರು ಜಂಕ್ಷನ್ ರೈಲ್ವೆ ನಿಲ್ದಾಣ ಚಿತ್ರದುರ್ಗ, ಹೊಳಲ್ಕೆರೆ, ಚನ್ನಗಿರಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರಗೆ ಸಂಪರ್ಕ ಕಲ್ಪಿಸಲಿದೆ. ಆದ್ದರಿಂದ ಕೆಳಗಿನ ರೈಲುಗಳಿಗೆ ಚಿಕ್ಕಜಾಜೂರು ನಿಲ್ದಾಣದಲ್ಲಿ ಪ್ರಾಯೋಗಿಕ ಅನ್ವಯದ ಆಧಾರದ ಮೇಲೆ ಒಂದು ನಿಮಿಷ ತಾತ್ಕಾಲಿಕ ನಿಲುಗಡೆಗೆ ಅವಕಾಶ ನೀಡಲಾಗುತ್ತದೆ. ಈ ರೈಲುಗಳ ಆರಂಭದ ದಿನಾಂಕದಿಂದ ಮುಂದಿನ ಆದೇಶ ಬರುವವರೆಗೂ ಜಾರಿಯಲ್ಲಿರಲಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಮಾಹಿತಿ ನೀಡಿದ್ದಾರೆ.

ಎಕ್ಸ್‌ಪ್ರೆಸ್ ರೈಲು ನಿಲುಗಡೆ ವಿವರ
* ಮಾರ್ಚ್ 5, 2024ರಿಂದ ರೈಲು ಸಂಖ್ಯೆ 11006 ಪುದುಚೇರಿ-ದಾದರ್ ಚಾಲುಕ್ಯ ಟ್ರೈ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಚಿಕ್ಕಜಾಜೂರು ನಿಲ್ದಾಣಕ್ಕೆ ಬೆಳಗ್ಗೆ 10:39/10:40 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.
* ಮಾರ್ಚ್ 8, 2024 ರಿಂದ ರೈಲು ಸಂಖ್ಯೆ 11005 ದಾದರ್-ಪುದುಚೇರಿ ಚಾಲುಕ್ಯ ಟ್ರೈ ವೀಕ್ಲಿ ಎಕ್ಸ್ ಪ್ರೆಸ್ ರೈಲು ಚಿಕ್ಕಜಾಜೂರು ನಿಲ್ದಾಣಕ್ಕೆ ಸಂಜೆ 04:04/04:05 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.
* ಮಾರ್ಚ್ 7, 2024ರಿಂದ ರೈಲು ಸಂಖ್ಯೆ 11022 ತಿರುನೆಲ್ವೇಲಿ-ದಾದರ್ ಟ್ರೈ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಚಿಕ್ಕಜಾಜೂರು ನಿಲ್ದಾಣಕ್ಕೆ ಬೆಳಗ್ಗೆ 10:39/10:40 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.
* ಮಾರ್ಚ್ 5ರಿಂದ ರೈಲು ಸಂಖ್ಯೆ 11021 ದಾದರ್-ತಿರುನೆಲ್ವೇಲಿ ಟ್ರೈ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಚಿಕ್ಕಜಾಜೂರು ನಿಲ್ದಾಣಕ್ಕೆ ಸಂಜೆ 04:04/04:05 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.
* ಮಾರ್ಚ್ 10ರಿಂದ ರೈಲು ಸಂಖ್ಯೆ 11036 ಮೈಸೂರು-ದಾದರ್ ಶರಾವತಿ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಚಿಕ್ಕಜಾಜೂರು ನಿಲ್ದಾಣಕ್ಕೆ ಬೆಳಗ್ಗೆ 10:39/10:40 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.
* ಮಾರ್ಚ್ 7, 2024 ರಿಂದ ರೈಲು ಸಂಖ್ಯೆ 11035 ದಾದರ್-ಮೈಸೂರು ಶರಾವತಿ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಚಿಕ್ಕಜಾಜೂರು ನಿಲ್ದಾಣಕ್ಕೆ ಸಂಜೆ 04:04/04:05 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.
7. ಮಾರ್ಚ್ 6, 2024 ರಿಂದ ರೈಲು ಸಂಖ್ಯೆ 17309 ಯಶವಂತಪುರ-ವಾಸ್ಕೋ ಡ ಗಾಮಾ ಡೈಲಿ ಎಕ್ಸ್ ಪ್ರೆಸ್ ರೈಲು ಚಿಕ್ಕಜಾಜೂರು ನಿಲ್ದಾಣಕ್ಕೆ ಸಂಜೆ 06:33/06:34 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.
8. ಮಾರ್ಚ್ 6, 2024 ರಿಂದ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮಾ-ಯಶವಂತಪುರ ಡೈಲಿ ಎಕ್ಸ್ ಪ್ರೆಸ್ ರೈಲು ಚಿಕ್ಕಜಾಜೂರು ನಿಲ್ದಾಣಕ್ಕೆ ಬೆಳಿಗ್ಗೆ 08:02/08:03 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.












Click it and Unblock the Notifications