3 ಲಕ್ಷ ರೂ. ಲಂಚಕ್ಕೆ ಬೇಡಿಕೆ: ಲೋಕಯುಕ್ತ ಬೆಲೆಗೆ ಬಿದ್ದ ಚಳ್ಳಕೆರೆ ನಗರಸಭೆ ಪೌರಾಯುಕ್ತೆ
ಚಿತ್ರದುರ್ಗ, ಆಗಸ್ಟ್, 05: ಮೂರು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿಯಲ್ಲಿ ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.
3 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನೆಲೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರಸಭೆಯ ಪೌರಾಯುಕ್ತೆ ಟಿ.ಲೀಲಾವತಿ ಹಾಗೂ ಬಿಲ್ ಕಲೆಕ್ಟರ್ ನಿಶಾನಿ ಕಾಂತರಾಜು ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಗರದ ನಾಗರಾಜ್ ಆಚಾರ್ ಎಂಬುವರ ಮನೆ ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಇಂದು ಹಣ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಚಿತ್ರದುರ್ಗ ಲೋಕಾಯುಕ್ತ ಎಸ್.ಪಿ. ಎನ್.ವಾಸುದೇವರಾಮ ನೇತೃತ್ವದಲ್ಲಿ ನಡೆದ ದಾಳಿ ನಡೆಸಿದ್ದು, ಈ ವೇಳೆ ಲೋಕಯುಕ್ತ ಎಸ್‌ಪಿ ಎನ್.ವಾಸುದೇವರಾಮ, ಡಿವೈಎಸ್‌ಪಿ ಮೃತ್ಯುಂಜಯ, ಪೊಲೀಸ್ ನಿರೀಕ್ಷಕರಾದ ವೈ.ಶಿಲ್ಪ, ಲೋಕಾಯುಕ್ತ ಪೊಲೀಸ್ ಸಿಬ್ಬಂದಿ ಜೆಎಂ ತಿಪ್ಪೇಸ್ವಾಮಿ, ಸಿ.ಎಚ್.ಸಿ ಶ್ರೀನಿವಾಸ್, ಆರ್.ಪುಷ್ಪ, ಜಿ ಸತೀಶ್ ಸಂತೋಷ್ ಕುಮಾರ್, ಎಂ.ರಮೇಶ್, ರಾಜೇಶ್, ಮಂಜುನಾಥ್, ಮಾರುತಿ, ಶ್ರೀಪತಿ, ಮಹಾಂತೇಶ್, ಸಾವಿತ್ರಮ್ಮ ಇದ್ದರು.

ಇದೀಗ ಲೋಕಾಯುಕ್ತ ಬೆಲೆಗೆ ಬಿದ್ದ ಲೀಲಾವತಿ ಅವರು ಮೊದಲು ಕೊರಟಗೆರೆ ಪಟ್ಟಣ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗಷ್ಟೇ ಚಳ್ಳಕೆರೆ ನಗರಸಭೆ ಪೌರಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು ಎಂದು ತಿಳಿದುಬಂದಿದೆ.












Click it and Unblock the Notifications