ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗದ ಪೊಲೀಸರಿಗೆ ಕಂಟಕವಾದ ಕೊರೊನಾ ಸೋಂಕು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ 28: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಪೊಲೀಸರನ್ನು ಕೊರೊನಾ ಸೋಂಕು ಬಿಟ್ಟು ಬಿಡದೆ ಕಾಡುತ್ತಿದೆ. ಇಂದು ಕೂಡ ಚಿತ್ರದುರ್ಗ ನಗರದ DAR ಕ್ವಾಟ್ರಸ್ ನಲ್ಲಿ ವಾಸವಿದ್ದ ಪೇದೆಯ ಕುಟುಂಬದ ನಾಲ್ವರಿಗೆ ಕೊರೊನಾ ಸೋಂಕು ತಗುಲಿದೆ.

Recommended Video

Japan ಇಲ್ಲಿನ ಪ್ರತಿ ಮನೆಗೂ ಮಾಸ್ಕ್ ಜೊತೆ ದುಡ್ಡು ಕೊಟ್ರು | Oneindia Kannada

ಕಳೆದೆರಡು ದಿನದ ಹಿಂದೆ ವೈಯರ್ ಲೆಸ್ ಪಿಎಸ್ಐಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆತನ ಸಂಪರ್ಕ ಹೊಂದಿದ್ದ ಪೇದೆಯ 110 ವರ್ಷದ ಅಜ್ಜಿ, 07 ತಿಂಗಳ ಅಣ್ಣನ ಮಗು, ಅತ್ತಿಗೆ ಮತ್ತು ತಾಯಿಗೆ ಸೋಂಕು ಧೃಡಪಟ್ಟಿದೆ. ಹೀಗಾಗಿ ಒಂದು ವಾರದ ಹಿಂದೆ ಡಿಎಆರ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಸೀಲ್ ಡೌನ್ ಆಗಿದ್ದ ಡಿಎಆರ್ ಕ್ವಾಟ್ರಸ್ ನಲ್ಲಿ ಸೀಲ್ ಡೌನ್ ಮುಂದುವರೆಸಲಾಗಿದೆ.

ಚಿತ್ರದುರ್ಗದ ರೈತ ಮಹಿಳೆಗೆ ನೀರಾವರಿ ಸೌಲಭ್ಯದ ಆಶ್ವಾಸನೆ ಕೊಟ್ಟ ಸಿಎಂಚಿತ್ರದುರ್ಗದ ರೈತ ಮಹಿಳೆಗೆ ನೀರಾವರಿ ಸೌಲಭ್ಯದ ಆಶ್ವಾಸನೆ ಕೊಟ್ಟ ಸಿಎಂ

ಚಿತ್ರದುರ್ಗದ ಕೋಟೆ ಠಾಣೆಯಲ್ಲಿ ಕೂಡ ಓರ್ವ ಪೊಲೀಸ್ ಪೇದೆಗೆ ಕೊರೊನಾ ಸೋಂಕು ಧೃಡಪಟ್ಟಿದ್ದು, ಮೊಳಕಾಲ್ಮೂರು ಠಾಣೆಯ ಇಬ್ಬರು ಪೊಲೀಸರಿಗೂ ಕೊರೊನಾ ದೃಢಪಟ್ಟಿದೆ.

Coronavirus Infection Positive For Police In Chitradurga

ಮಗ ಮಾಡಿದ ತಪ್ಪಿಗೆ, ತಂದೆಗೆ ಥಳಿಸಿದ ಹಿರಿಯೂರು ಗ್ರಾಮಾಂತರ ಪಿಎಸ್ಐ ಮಗ ಮಾಡಿದ ತಪ್ಪಿಗೆ, ತಂದೆಗೆ ಥಳಿಸಿದ ಹಿರಿಯೂರು ಗ್ರಾಮಾಂತರ ಪಿಎಸ್ಐ

ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿನ ಪ್ರಕರಣಗಳು 564 ಕ್ಕೆ ಏರಿದ್ದು, ಇಂದು ಮತ್ತಷ್ಟು ಪಾಸಿಟಿವ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದುವರೆಗೆ ಕೊರೊನಾ ವೈರಸ್ ಮಹಾಮಾರಿಗ 10 ಜನರನ್ನು ಬಲಿ ಪಡದಿದೆ. 151 ಜನರು ಗುಣಮುಖರಾಗಿದ್ದಾರೆ. 303 ಸಕ್ರಿಯ ಕೊರೊನಾ ಪ್ರಕರಣಗಳಿರುವ ಹಿನ್ನೆಲೆಯಲ್ಲಿ 132 ಕಂಟೈನ್ಮೆಂಟ್ ಝೋನ್ ಗಳನ್ನು ನಿರ್ಮಾಣ ಮಾಡಲಾಗಿದೆ.

English summary
Today also, Coronavirus infects four family members of Police Constable family who lived in the DAR Quattrus in Chitradurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X