• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರದುರ್ಗ; ಅತ್ಯಾಚಾರಕ್ಕೊಳಗಾಗಿದ್ದ ಯುವತಿಗೆ ಕೊರೊನಾ ವೈರಸ್

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಜೂನ್ 11: ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಯುವತಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಸದ್ಯ ಸಂತ್ರಸ್ತೆ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

   DK Shivakumar finally gets good news from BS Yediyurappa | Oneindia Kannada

   ಸಂತ್ರಸ್ತೆಯು ಚಿತ್ರದುರ್ಗ ತಾಲೂಕು ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ಯುವತಿಯಾಗಿದ್ದು, ಮಹಾರಾಷ್ಟ್ರಕ್ಕೆ ಹೋಗಿ ಬಂದಿದ್ದ ಚಾಲಕನ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ.

   ಅಪ್ರಾಪ್ತೆ ಮದುವೆ ತಡೆಯಲು ಹೋದ ಶಿವಮೊಗ್ಗ ಪೊಲೀಸರಿಗೀಗ ಕ್ವಾರಂಟೈನ್

   ಇದೀಗ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಭರಮಸಾಗರ ಪೊಲೀಸ್ ಠಾಣೆಯ 9 ಮಂದಿ ಪೊಲೀಸರು, ಗ್ರಾಮಾಂತರ ಠಾಣೆಯ ಓರ್ವ ಪೊಲೀಸ್, ಮಹಿಳಾ ಠಾಣೆಯ ಇಬ್ಬರು ಮಹಿಳಾ ಪೊಲೀಸರು, ಜಿಲ್ಲಾಸ್ಪತ್ರೆಯ ಇಬ್ಬರು ವೈದ್ಯರು ಹಾಗೂ ಓರ್ವ ನ್ಯಾಯಾಧೀಶರಿಗೆ ಕ್ವಾರೆಂಟೈನ್ ಸಂಕಷ್ಟ ಎದುರಾಗಿದೆ. ಗರ್ಭಿಣಿ ಯುವತಿಯಿಂದ ಮತ್ತಷ್ಟು ಜನರಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.

   ಕೊರೊನಾ ಮುಕ್ತವಾಗಿದ್ದ ಜಿಲ್ಲೆಯಲ್ಲಿ ಮತ್ತೆ ಪ್ರಕರಣ: ಕೊರೊನಾ ಮುಕ್ತವಾಗಿದ್ದ ಚಿತ್ರದುರ್ಗದಲ್ಲಿ ಇಂದು ಮತ್ತೆ ನಾಲ್ಕು ಮಂದಿಗೆ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ. ಓರ್ವ ಯುವತಿ, ಐಮಂಗಲ ಪೊಲೀಸ್ ತರಬೇತಿ ಶಾಲೆಯ ಟ್ರೈನಿಗೂ ಕೊರೊನಾ ವೈರಸ್ ವಕ್ಕರಿಸಿದೆ. ಕೋಲಾರ ಜಿಲ್ಲೆ ಕೆಜಿಎಫ್ ನಿವಾಸಿ 26 ವರ್ಷದ ಯುವಕ ಹಾಗೂ ಚಳ್ಳಕೆರೆ ಕೋವಿಡ್ ಕೇರ್ ಸೆಂಟರ್ ಕರ್ತವ್ಯದಲ್ಲಿದ್ದ ಇಬ್ಬರು ಸೇರಿದಂತೆ ಮೂವರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

   ಚಿತ್ರದುರ್ಗದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 43ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯಲ್ಲಿದ್ದ 40 ಸೋಂಕಿತರ ಪೈಕಿ 39 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

   English summary
   Rape victim of chitradurga has been tested coronavirus positive and is currently taking treatment at KC General Hospital of Bengaluru
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X