ಕೊರೊನಾ ಭಾರತ ಬಿಟ್ಟು ತೊಲಗು; ಟಿಕ್ ಟಾಕ್ ವಿಡಿಯೋ ವೈರಲ್
ಚಿತ್ರದುರ್ಗ, ಮಾರ್ಚ್ 17: ಮಹಾಮಾರಿ ಕೊರೊನಾ ವೈರಸ್ ದೇಶಾದ್ಯಂತ ಜನರನ್ನು ಆತಂಕಕ್ಕೀಡು ಮಾಡಿದೆ. ಈಗಾಗಲೇ ರಾಜ್ಯದಲ್ಲಿ 11 ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಂಡಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.
ಇದು ರಾಜ್ಯದ ಜನರನ್ನು ಭಯಬೀತರಾಗುವಂತೆ ಮಾಡಿದೆ. ಆದರೆ ಇತ್ತ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಯುವಕನೋರ್ವ "ಕೊರೊನಾ ವೈರಸ್ ಭಾರತ ಬಿಟ್ಟು ತೊಲಗು' ಎಂದು ಬಾಳೆಹಣ್ಣಿನ ಮೇಲೆ ಬರೆದು, ಅದೇ ಬಾಳೆ ಹಣ್ಣನ್ನು ತೇರಿಗೆ ಎಸೆಯುವ ಮೂಲಕ ದೇವರ ಮೊರೆ ಹೋಗಿದ್ದಾನೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಎನ್.ಜಿ ಹಳ್ಳಿಯಲ್ಲಿ ಶನಿವಾರ ನಡೆದ ಶ್ರೀ ಮುತ್ತಿನ ಕುಮಾರಿ ದೇವಿ ಜಾತ್ರೆಯಲ್ಲಿ ರಥಕ್ಕೆ ಬಾಳೆ ಹಣ್ಣು ಎಸೆಯುವ ಮೂಲಕ ಪ್ರಾರ್ಥಿಸಿದ್ದಾನೆ. ಇದೇ ಗ್ರಾಮದ ನಿವಾಸಿ ಪ್ರದೀಪ್ ಎಂಬುವರಿಂದ ತೇರಿಗೆ ಬಾಳೆ ಹಣ್ಣು ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.













Click it and Unblock the Notifications