ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುರುಘಾ ಶ್ರೀ ವಿರುದ್ಧ ಪಿತೂರಿ ಪ್ರಕರಣ: ಎಸ್.ಕೆ. ಬಸವರಾಜನ್ ಪತ್ನಿ ಸೌಭಾಗ್ಯ ಬಂಧನ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಚಿತ್ರದುರ್ಗ, 16: ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣದಲ್ಲಿ ಪಿತೂರಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಚಿತ್ರದುರ್ಗ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ, ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಸೌಭಾಗ್ಯ ಬಸವರಾಜನ್ ವಿರುದ್ಧ ಚಿತ್ರದುರ್ಗ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ನಿನ್ನೆ ತಡರಾತ್ರಿ ದಾವಣಗೆರೆಯಲ್ಲಿ ಸೌಭಗ್ಯ ಬಸವರಾಜನ್‌ ಅವರನ್ನು ಬಂಧಿಸಲಾಗಿದೆ. ಸದ್ಯ ಸೌಭಾಗ್ಯ ಅವರನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಇಂದು ಪೊಲೀಸರು ಸೌಭಗ್ಯ ಬಸವರಾಜನ್‌ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ನವಂಬರ್ 10ರಂದು ಬಸವರಾಜೇಂದ್ರನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದರು. ನಂತರ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಬಂಧನವಾಗಿತ್ತು. ಮೊತ್ತೊಂದೆಡೆ ಈವರೆಗೂ ನಾಪತ್ತೆಯಾಗಿದ್ದ ಸೌಭಾಗ್ಯ ಬಸವರಾಜನ್ ಅವರನ್ನು ದಾವಣಗೆರೆಯಲ್ಲಿ ಪೋಲಿಸರು ಬಂಧಿಸಿದ್ದಾರೆ.

22 ಮಕ್ಕಳು ನಾಪತ್ತೆ, ಗಂಭೀರ ಆರೋಪ
ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್‌ಜೆಎಂ) ನಡೆಸುತ್ತಿರುವ ಅನಾಥಾಶ್ರಮದಿಂದ 22 ಮಕ್ಕಳು ನಾಪತ್ತೆಯಾಗಿದ್ದಾರೆ ಎಂಬ ಗಂಭೀರ ಆರೋಪ ಇತ್ತೀಚೆಗಷ್ಟೇ ಕೇಳಿ ಬಂದಿತ್ತು. ಈ ಹಿನ್ನೆಲೆ ಕರ್ನಾಟಕ ಮಕ್ಕಳ ಹಕ್ಕುಗಳ ಆಯೋಗ, ಮಹಾನಿರ್ದೇಶಕ ಮತ್ತು ಪೊಲೀಸ್ ಮಹಾನಿರೀಕ್ಷಕ ಪ್ರವೀಣ್ ಸೂದ್, ಗವರ್ನರ್ ತಾವರ್‌ಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದವು. ಸಾಮಾಜಿಕ ಹೋರಾಟಗಾರ ಮತ್ತು ಆರ್‌ಟಿಐ ಕಾರ್ಯಕರ್ತ ಬಿ ಎಚ್ ಗೌಡ್ರು ನವೆಂಬರ್ 25 ರಂದು ದೂರು ದಾಖಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕು ಆಯೋಗ ಶುಕ್ರವಾರ ಮಠಕ್ಕೆ ನೋಟಿಸ್ ಜಾರಿ ಮಾಡಿತ್ತು. ದೂರಿನ ಪ್ರಕಾರ, ಎಸ್‌ಜೆಎಂ ಮಠದ ಪೀಠಾಧಿಪತಿ ಮತ್ತು ಏಕೈಕ ವ್ಯವಸ್ಥಾಪಕ ಟ್ರಸ್ಟಿ ಶಿವಮೂರ್ತಿ ಶರಣರು 2001ರಿಂದ ಮಠದ ಆವರಣದಲ್ಲಿ ಮಕ್ಕಳಿಗಾಗಿ ಮೂರು ಆಶ್ರಯ ಮನೆಗಳನ್ನು ನಡೆಸುತ್ತಿದ್ದಾರೆ.

Conspiracy case against murugha shree: Saubhagya Basavarajan arrested

ಹೋರಾಟಗಾರನ ದೂರಿನಲ್ಲಿ ಏನಿದೆ?
ಮುರುಘಾ ಮಠದ ಆವರಣದಲ್ಲಿ ಶ್ರೀ ಬಸವೇಶ್ವರ ಅನಾಥ ಮಕ್ಕಳ ಆಶ್ರಯಧಾಮ, ಅಕ್ಕಮಹಾದೇವಿ ವಸತಿ ನಿಲಯ ಮತ್ತು ಎಸ್‌ಜೆಎಂ ವಿದ್ಯಾಪೀಠ ಎಂಬ ಮೂರು ಆಶ್ರಯಧಾಮಗಳು ನಡೆಯುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪಡೆದ ದಾಖಲೆಗಳನ್ನು ತಿಳಿಸಿ ಹೋರಾಟಗಾರ ಗೌಡ್ರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸರ್ಕಾರದ ಅನುದಾನ ಪಡೆಯಲು ಮಠವು 2011ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವಿವರ ಸಲ್ಲಿಸಿದೆ. ಇದರ ಪ್ರಕಾರ ಅನಾಥಾಶ್ರಮದಲ್ಲಿ 11 ಮಂದಿ ಅನಾಥರು ಮತ್ತು 14 ಒಂಟಿ ಪೋಷಕರ ಮಕ್ಕಳಿದ್ದಾರೆ. ಮಠದವರು ನಡೆಸುತ್ತಿದ್ದ ಹಾಸ್ಟೆಲ್‌ನಲ್ಲಿ ಏಳು ಮಂದಿ ಅನಾಥರು, 13 ಒಂಟಿ ಪೋಷಕರ ಮಕ್ಕಳು ಮತ್ತು ಐದು ಬಡ ಕುಟುಂಬದ ಮಕ್ಕಳು ಇದ್ದರು.

Conspiracy case against murugha shree: Saubhagya Basavarajan arrested

ಇನ್ನು ದಾಖಲೆಯ ಪ್ರಕಾರ, ಎಸ್‌ಜೆಎಂ ವಿದ್ಯಾಪೀಠದಲ್ಲಿ ನಾಲ್ವರು ಅನಾಥರು, 16 ಒಂಟಿ ಪೋಷಕರ ಮಕ್ಕಳು ಮತ್ತು ಐದು ಬಡ ಕುಟುಂಬಗಳ ವಿದ್ಯಾರ್ಥಿಗಳು ಇದ್ದರು. ಶ್ರೀ ಬಸವೇಶ್ವರ ಅನಾಥ ಮಕ್ಕಳ ಆಶ್ರಯಧಾಮ, ಅಕ್ಕಮಹಾದೇವಿ ವಸತಿ ನಿಲಯ ಮತ್ತು ಎಸ್‌ಜೆಎಂ ವಿದ್ಯಾಪೀಠ ಎಂಬ ಮೂರು ಆಶ್ರಯಧಾಮಗಳಲ್ಲಿ ಒಟ್ಟು 75 ಮಕ್ಕಳಿದ್ದು, ಅದರಲ್ಲಿ 22 ಮಂದಿ ಅನಾಥರು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿರುವ ಪಟ್ಟಿಯಿಂದ ತಿಳಿದುಬಂದಿದೆ.

ಮಠಕ್ಕೆ ಅನುದಾನ ನಿಲ್ಲಿಸಿದ್ದ ರಾಜ್ಯ ಸರ್ಕಾರ
ಎಸ್‌ಜೆಎಂ ಮಠವು 2011 ರ ಮೊದಲು ರಾಜ್ಯ ಸರ್ಕಾರದ ಸಹಾಯವನ್ನು ಪಡೆಯುತ್ತಿತ್ತು. ನಂತರ ಮಠವೇ ಮಕ್ಕಳನ್ನು ಬೆಳೆಸುತ್ತದೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ಸಹಾಯವನ್ನು ನಿಲ್ಲಿಸುವಂತೆ 2012 ರಲ್ಲಿ ಮಠಾಧೀಶರು ಇಲಾಖೆಗೆ ಪತ್ರ ಬರೆದಿದ್ದರು. ಆದ್ದರಿಮದ ರಾಜ್ಯ ಸರ್ಕಾರವು ಮಠಕ್ಕೆ ಅನುದಾನವನ್ನು ನಿಲ್ಲಿಸಿತ್ತು.

English summary
Conspiracy case against murugha shree: Former MLA S K Basavarajan wife Saubhagya basavarajan arrested by Dvanagere police, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X