ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೌಡಿ ಶೀಟರ್ ಗಳಿಗೆ ಖಡಕ್ ಎಚ್ಚರಿಕೆ ನೀಡಿದ ಚಿತ್ರದುರ್ಗ ಮಹಿಳಾ ಎಸ್ಪಿ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಫೆಬ್ರವರಿ 16: ರೌಡಿ ಶೀಟರ್ಗಳನ್ನು ಪರೇಡ್ ನಡೆಸಿ ಖಡಕ್ ವಾರ್ನಿಂಗ್ ನೀಡುವ ಮೂಲಕ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು ರೌಡಿಗಳ ಚಳಿ ಬಿಡಿಸಿದ್ದಾರೆ.

ಇಂದು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ಅವರಣದಲ್ಲಿ ರೌಡಿಗಳ ಪರೇಡ್ ನಡೆಸಿದ ಎಸ್ಪಿ ರಾಧಿಕಾ, MOB ಗಳಲ್ಲಿ ಪ್ರಕರಣ ದಾಖಲಾಗಿರುವ ಸುಮಾರು 150 ಕ್ಕೂ ಹೆಚ್ಚು ರೌಡಿ ಶೀಟರ್ ಗಳಿಗೆ ತಪ್ಪು ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ಹಿರಿಯೂರಿನ ಹಿರಿಯೂರಿನ "ಪೊಲೀಸ್" ದಿನಗಳನ್ನು ಮೆಲುಕು ಹಾಕಿದ ಕೃಷಿ ಸಚಿವ ಬಿ.ಸಿ.ಪಾಟೀಲ್

ಹಿರಿಯೂರು ನಗರ , ಹಿರಿಯೂರು ಗ್ರಾಮಾಂತರ, ಐಮಂಗಲ, ಅಬ್ಬಿನಹೊಳೆ, ಹೊಸದುರ್ಗ ಮತ್ತು ಶ್ರೀರಾಂಪುರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವ ರೌಡಿಶೀಟರ್ ಗಳು ಪರೇಡ್ ನಲ್ಲಿ ಭಾಗಿಯಾಗಿದ್ದರು.

Chitradurga Female SP Who Warned To Rowdy Sheeters

ಮತ್ತೆ ಪುನಃ ತಪ್ಪು ಮಾಡದಂತೆ ರೌಡಿ ಶೀಟರ್ ಗಳಿಗೆ ಖಡಕ್ ಸಂದೇಶ ಕೊಟ್ಟರು. ಒಂದು ವೇಳೆ ಮತ್ತೆ ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದರೆ ಅಂಥವರ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿರುತ್ತದೆ. ಅಂತವರನ್ನು ಕರೆತಂದು ಗಡಿಪಾರು ಮಾಡಲಾಗುವುದು ಜೊತೆಗೆ ಗೂಂಡಾ ಕಾಯ್ದೆ ಹೇರಲಾಗುವುದು ಎಂದು ಹೇಳಿದರು.

ಕೈಕಾಲು ಗಟ್ಟಿಯಾಗಿವೆ ಮೈ ಬಗ್ಗಿಸಿ ದುಡಿದುಕೊಂಡು ತಿನ್ನೀರಿ, ಮತ್ತೆ ಹಳೇ ಕೆಲಸಗಳಿಗೆ ಕೈ ಹಾಕಿ ಸಮಾಜದಲ್ಲಿ ಬೇರೆಯವರಿಗೆ ತೊಂದರೆಯನ್ನು ಕೊಡಬೇಡಿ, ನಿಮ್ಮಿಂದ ಎಷ್ಟು ಕುಟುಂಬಗಳು ಸಮಾಜದಲ್ಲಿ ಕಣ್ಣೀರು ಹಾಕುತ್ತಿದ್ದಾರೆ ನಿಮಗೆ ಗೊತ್ತಾ ಎಂದು ಪ್ರಶ್ನಿಸಿದರು.

ಚಿತ್ರದುರ್ಗಕ್ಕೆ ನೂತನ ಎಸ್ಪಿ; ಓಬವ್ವನ ಮಣ್ಣಲ್ಲಿ ಮಹಿಳಾ ಅಧಿಕಾರಿಗಳ ಆಡಳಿತಚಿತ್ರದುರ್ಗಕ್ಕೆ ನೂತನ ಎಸ್ಪಿ; ಓಬವ್ವನ ಮಣ್ಣಲ್ಲಿ ಮಹಿಳಾ ಅಧಿಕಾರಿಗಳ ಆಡಳಿತ

ಇನ್ನು ರೌಡಿಶೀಟರ್ ಗಳು ಮಾಡಿದ ತಪ್ಪನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ತಪ್ಪೊಪ್ಪಿಕೊಂಡರು. ಇನ್ನು ಮುಂದೆ ನಾವು ಮಾಡಿದ್ದು ತಪ್ಪಾಗಿದೆ, ಮುಂದೆ ಯಾವುದೇ ರೀತಿಯಲ್ಲಿ ತಪ್ಪು ಮಾಡುವುದಿಲ್ಲ ಎಂದು ಕೆಲವು ರೌಡಿಶೀಟರ್ ಗಳು ಕೈಮುಗಿದು ಕೇಳಿಕೊಂಡರು.

Chitradurga Female SP Who Warned To Rowdy Sheeters

ಮತ್ತೊಬ್ಬ ರೌಡಿಶೀಟರ್ ನಾನು ಆತ್ಮಸಾಕ್ಷಿಯಾಗಿ ತಪ್ಪು ಮಾಡುವುದಿಲ್ಲ ಬಿ.ಎಡ್. ಎಂ.ಎ. ಓದಿದೀನಿ ಎಂದು ಮುಂದೆ ಬಂದಾಗ ಆತನ ಗ್ರಹಚಾರ ಬಿಡಿಸಿದರು. ಎಂ.ಎ. ಬಿಎಡ್ ಮಾಡಿಕೊಂಡಿರುವ ನೀನು ಹೇಗಿರಬೇಕು, ಮತ್ತೊಬ್ಬರಿಗೆ ಮಾದರಿಯಾಗಿರಬೇಕು ಅದನ್ನು ಬಿಟ್ಟು ನನ್ನ ಮುಂದೆ ಬಂದು MOB ಪೆರೇಡ್ ನಲ್ಲಿ ನಿಂತುಕೊಳ್ಳುವುದಲ್ಲ, ನಿನಗೆ ನಾಚಿಕೆ ಆಗುವುದಿಲ್ಲವಾ? ಆತ್ಮ ಸಾಕ್ಷಿಗೆ ಹೋಗ್ಬಿಟ್ಟೆ ಎಂದು ಆತನ ಗ್ರಹಚಾರ ಬಿಡಿಸಿದರು.

ನೀವು ಒಳ್ಳೆಯ ದಾರಿಯಲ್ಲಿ ಹೋದರೆ ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂದು ಸಲಹೆ ಕೊಟ್ಟರು. ನೀವು ಕೆಟ್ಟ ದಾರಿಯಲ್ಲಿ ಹೋದರೆ ನಾವು ಹೇಗೆ ನಿಮಗೆ ಪಾಠ ಕಲಿಸಬೇಕೆಂದು ತೋರಿಸುತ್ತೇವೆ ಎಂದರು. ಡಿವೈಎಸ್ಪಿ ರಮೇಶ್, ವೃತ್ತ ನಿರೀಕ್ಷಕ ಚನ್ನೇಗೌಡ, ಪಿಎಸ್ಐ ಗಳಾದ ಶಿವಕುಮಾರ್ ,ಚಂದ್ರಶೇಖರ್, ಅನುಸೂಯಮ್ಮ ಮತ್ತಿತರಿದ್ದರು.

English summary
Chidadurga SP G.Radhika on the parade of rowdy sheeters and Warning in Hiriyuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X