ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ ನಗರಕ್ಕೆ ಕುಡಿಯಲು ಭದ್ರಾ ನೀರು ಪೂರೈಕೆ

|
Google Oneindia Kannada News

ಚಿತ್ರದುರ್ಗ, ಸೆಪ್ಟೆಂಬರ್ 22 : ಚಿತ್ರದುರ್ಗ ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಭದ್ರಾ ಜಲಾಶಯದಿಂದ ಶಾಂತಿ ಸಾಗರಕ್ಕೆ ನೀರು ಹರಿಸಲು ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಒಪ್ಪಿಗೆ ನೀಡಿದೆ.

ಚಿತ್ರದುರ್ಗ ನಗರಸಭೆ ಅಧ್ಯಕ್ಷ ಮಂಜುನಾಥ ಗೊಪ್ಪೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಈ ಬಗ್ಗೆ ಮನವಿ ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಅವರನ್ನು ಭೇಟಿ ಮಾಡಿ ಜಲಾಶಯಕ್ಕೆ ನೀರು ಹರಿಸಲು ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದ್ದರು.

ಎಲ್ಲಾ ಯೋಜನೆ ಪೂರ್ಣಗೊಳ್ಳಲು 1 ಲಕ್ಷ ಕೋಟಿ ಬೇಕು: ಎಂಬಿ ಪಾಟೀಲ್ಎಲ್ಲಾ ಯೋಜನೆ ಪೂರ್ಣಗೊಳ್ಳಲು 1 ಲಕ್ಷ ಕೋಟಿ ಬೇಕು: ಎಂಬಿ ಪಾಟೀಲ್

 Chitradurga city to get drinking water from Bhadra dam

ಚಿತ್ರದುರ್ಗ ಜಿಲ್ಲಾಧಿಕಾರಿಗಳು ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಚ್ಚುಕಟ್ಟು ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ನಗರದ ನೀರಿನ ಸಮಸ್ಯೆ ಪರಿಗಣಿಸಿ ಶಾಂತಿ ಸಾಗರಕ್ಕೆ ನೀರು ಹರಿಸಲು ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಒಪ್ಪಿಗೆ ನೀಡಿದೆ.

ದ್ವೀಪ ಗ್ರಾಮ ನೀಲಕಂಠರಾಯನ ಗಡ್ಡಿಗೆ ಜಿಲ್ಲಾಧಿಕಾರಿ ಭೇಟಿದ್ವೀಪ ಗ್ರಾಮ ನೀಲಕಂಠರಾಯನ ಗಡ್ಡಿಗೆ ಜಿಲ್ಲಾಧಿಕಾರಿ ಭೇಟಿ

'ಶನಿವಾರದಿಂದ ಶಾಂತಿ ಸಾಗರಕ್ಕೆ ನೀರು ಹರಿಸುತ್ತೇವೆ. ಭದ್ರಾ ಜಲಾಶಯ ಭರ್ತಿಯಾಗಲು ಇನ್ನೂ 20 ಅಡಿ ನೀರು ಬೇಕಿದೆ. ಆದರೆ, ಕುಡಿಯುವ ನೀರಿನ ಸಮಸ್ಯೆ ಪರಿಗಣಿಸಿ ನೀರು ಹರಿಸಲು ಒಪ್ಪಿಗೆ ಕೊಟ್ಟಿದ್ದೇವೆ' ಎಂದು ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಸುರೇಶ್ ತಿಳಿಸಿದ್ದಾರೆ.

ನೀರಿನ ಕನಸು ನನಸು, ಅಂತಿಮ ಹಂತದಲ್ಲಿ ಚಿಮ್ಮಲಗಿ ನೀರಾವರಿ ಯೋಜನೆನೀರಿನ ಕನಸು ನನಸು, ಅಂತಿಮ ಹಂತದಲ್ಲಿ ಚಿಮ್ಮಲಗಿ ನೀರಾವರಿ ಯೋಜನೆ

ಶನಿವಾರ ಜಲಾಶಯಕ್ಕೆ ನೀರು ಬಂದರೂ ಜಾಕ್‌ ವೆಲ್‌ಗೆ ನೀರು ಸಿಗುವಂತಾಗಲು ಒಂದೆರಡು ದಿನ ಬೇಕಾಗುತ್ತದೆ. ಹೊಸ ನೀರು ಹರಿದುಬರುವುದರಿಂದ ನೀರು ತಿಳಿಯಾಗಲು ಕನಿಷ್ಠ ನಾಲ್ಕು ದಿನ ಬೇಕು. ಅಷ್ಟರಲ್ಲಿ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ನಗರಕ್ಕೆ ನೀರು ಪೂರೈಕೆ ಮಾಡಲು ನಗರಸಭೆ ಸಿದ್ಧತೆ ನಡೆಸಿದೆ.

ಕರ್ನಾಟಕ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ, ಎದೆ ಮಟ್ಟ !ಕರ್ನಾಟಕ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ, ಎದೆ ಮಟ್ಟ !

English summary
The Bhadra Command Area Development Authority has decided to release water to Shanthi Sagar lake to provide drinking water to Chitradurga city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X