ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿವಿ ಸಾಗರಕ್ಕೆ ಕೇಂದ್ರ ನೀರಾವರಿ ಅಧಿಕಾರಿಗಳ ಭೇಟಿ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ 11; ಮಧ್ಯ ಕರ್ನಾಟಕದ ಅತಿ ದೊಡ್ಡ ಜಲಾಶಯ ಹಾಗೂ ಬಯಲುಸೀಮೆಯ ಜನರಿಗೆ ನೀರು ಒದಗಿಸುವ ಪ್ರಮುಖ ಅಣೆಕಟ್ಟೆಯಾದ ಹಿರಿಯೂರು ಬಳಿ ಇರುವ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ರಾಷ್ಟ್ರೀಯ ಯೋಜನೆಯ ಜಲ ಆಯೋಗದ ತಂಡ ಭೇಟಿ ನೀಡಿತ್ತು.

ಈ ತಂಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವುದರಿಂದ ಅಣೆಕಟ್ಟು ವೀಕ್ಷಣೆ ಮಾಡಿತು. ಚಿತ್ರದುರ್ಗ ಜಿಲ್ಲೆಯ ಏಕೈಕ ಜಲಾಶವಾದ ವಿವಿ ಸಾಗರ ಅಣೆಕಟ್ಟು ಬರೋಬ್ಬರಿ 25 ವರ್ಷಗಳ ಬಳಿಕ ತುಂಬುವ ಆಸೆ ಚಿಗುರೊಡೆದಿದೆ.

ಭದ್ರಾ ಡ್ಯಾಂನಿಂದ ವಿವಿ ಸಾಗರಕ್ಕೆ ನೀರು ಹರಿಸಲು ಆದೇಶ ಭದ್ರಾ ಡ್ಯಾಂನಿಂದ ವಿವಿ ಸಾಗರಕ್ಕೆ ನೀರು ಹರಿಸಲು ಆದೇಶ

ಹಚ್ಚಹಸಿರಿನ ಗುಡ್ಡಗಾಡಿನ ನಡುವೆ ನಳನಳಿಸುತ್ತಿರೋ ಮಧ್ಯ ಕರ್ನಾಟಕದ ನೀರಿನ ಸೆಲೆಯೇ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯ. ಕಳೆದ 25 ವರ್ಷಗಳಿಂದ ತೀವ್ರ ಬರಗಾಲಕ್ಕೆ ತುತ್ತಾಗಿ ಬರಿದಾಗಿ ಡೆಡ್ ಸ್ಟೋರೆಜ್ ಹಂತಕ್ಕೆ ತಲುಪಿದಾಗ ತುಂಬುವ ಆಸೆ ಮೂಡಿಸಿದ್ದು ಭದ್ರಾ ಮೇಲ್ದಂಡೆ ಯೋಜನೆ ಎಂದರೆ ತಪ್ಪಾಗಲಾರದು.

ಡೆಡ್ ಸ್ಟೋರೇಜ್ ತಲುಪಿದ ವಾಣಿ ವಿಲಾಸ ಜಲಾಶಯ ನೀರಿನ ಮಟ್ಟ ಡೆಡ್ ಸ್ಟೋರೇಜ್ ತಲುಪಿದ ವಾಣಿ ವಿಲಾಸ ಜಲಾಶಯ ನೀರಿನ ಮಟ್ಟ

ಕಳೆದ ವರ್ಷ ಸುಮಾರು 105 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿ ರೈತರಲ್ಲಿ ಹೊಸ ಭರವಸೆ ಮೂಡಿತ್ತು. ಆದರೆ 130 ಅಡಿ ನೀರು ಸಂಗ್ರಹಿಸಲು ವಿಫಲವಾಯಿತು. ಇದೀಗ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಮೂಲಕ ವೇದಾವತಿ ನದಿಯ ಮೂಲಕ ಜಲಾಶಯಕ್ಕೆ ನೀರು ಹರಿಸುತ್ತಿದೆ. ಇದು ಜಿಲ್ಲೆಯ ರೈತರಲ್ಲಿ ಸಂತಸ ಮೂಡಿಸಿದೆ.

ಭದ್ರಾ ಡ್ಯಾಂ ಬುಡದಲ್ಲಿ ಕೋಟಿ ಕೋಟಿ ಲೂಟಿ; ಯಾರದ್ದೋ ಧನದಾಹಕ್ಕೆ 'ಡ್ಯಾಂ'ಗೆ ಹಾನಿಯ ಭೀತಿಭದ್ರಾ ಡ್ಯಾಂ ಬುಡದಲ್ಲಿ ಕೋಟಿ ಕೋಟಿ ಲೂಟಿ; ಯಾರದ್ದೋ ಧನದಾಹಕ್ಕೆ 'ಡ್ಯಾಂ'ಗೆ ಹಾನಿಯ ಭೀತಿ

ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ

ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ

ಇನ್ನು ಸರ್ಕಾರ ಅವಧಿಗೂ ಮೊದಲೇ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿಸುವುದಕ್ಕೆ ಪ್ರಮುಖ ಕಾರಣ ಕರ್ನಾಟಕದ ಏಕೈಕ ರಾಷ್ಟ್ರೀಯ ಯೋಜನೆ ಎಂಬ ಪುರಸ್ಕಾರ ಪಡೆಯಲು ಭದ್ರಾ ಮೇಲ್ದಂಡೆ ಯೋಜನೆ ಸನ್ನಿಹಿತವಾಗಿದೆ. ಇದೀಗ ಕೇಂದ್ರದ ನೀರಾವರಿ ಇಲಾಖೆ ಅಧಿಕಾರಿಗಳು ವಾಣಿವಿಲಾಸ ಜಲಾಶಯ ಸೇರಿದಂತೆ ವೇದಾವತಿ ನದಿ ಪಾತ್ರ, ಚಿಕ್ಕಮಗಳೂರಿನಿಂದ ಹಿಡಿದು ಚಿತ್ರದುರ್ಗ ಜಿಲ್ಲೆಯವರೆಗೂ ನಡೆದಿರುವ ಮೇಲ್ದಂಡೆ ಕಾಮಗಾರಿಯನ್ನು ವೀಕ್ಷಣೆ ಮಾಡಿದ್ದಾರೆ. ಅಧಿಕಾರಿಗಳಿಂದಲೂ ಸೂಕ್ತ ಸ್ಪಂದನೆ ವ್ಯಕ್ತವಾಗಿದೆ. ಕೇಂದ್ರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ.

ಆತ್ಮೀಯವಾಗಿ ಸ್ವಾಗತಿಸಿದ ರೈತರು

ಆತ್ಮೀಯವಾಗಿ ಸ್ವಾಗತಿಸಿದ ರೈತರು

ಹಿರಿಯೂರಿನ ವಿವಿ ಸಾಗರ ಜಲಾಶಯಕ್ಕೆ ಭೇಟಿ ನೀಡಿದ ಕೇಂದ್ರ ಜಲ ಆಯೋಗದ ಆಯುಕ್ತರಾದ ಎ. ಎಸ್‌. ಗೋಯಲ್ ದಂಪತಿಯನ್ನು ಹಿರಿಯೂರು ರೈತರ ತಂಡ ಆತ್ಮೀಯವಾಗಿ ಸ್ವಾಗತಿಸಿದರು. ಕೇಂದ್ರ ತಂಡಕ್ಕೆ ವಿವಿ ಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರರ ಸಮಿತಿಯಿಂದ ಮನವಿ ಸಲ್ಲಿಸಿ, ಚಿತ್ರದುರ್ಗ, ತುಮಕೂರು ಸೇರಿದಂತೆ ಮಧ್ಯಕರ್ನಾಟಕದ ಬಯಲು ಸೀಮೆ ಭಾಗದಲ್ಲಿ ತೀವ್ರ ವಾದ ಬದಗಾಲವಿದ್ದು, ನೂರು ವರ್ಷಗಳಲ್ಲಿ 75 ವರ್ಷ ಬರಗಾಲ ಅನುಭವಿಸಿ, ಕುಡಿಯುವ ನೀರು ವಿಷಪೂರಿತವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ಹೆಚ್ಚಿನ ನೀರು ಲಭಿಸಿದಲ್ಲಿ ಕುಡಿಯುವ ನೀರಿಗೆ ಸಹಕಾರಿಯಾಗಲಿದೆ ಎಂದು ತಿಳಿಸಲಾಯಿತು.

ರೈತರ ಬದುಕು ಹಸನಾಗಲಿದೆ

ರೈತರ ಬದುಕು ಹಸನಾಗಲಿದೆ

ನೀರು ಹರಿದರೆ ಕೇಂದ್ರ ಸರ್ಕಾರದ ಡಿಆರ್‌ಡಿಓ, ಐಎಎಸ್ಸಿ, ವಿಆರ್ಸಿ, ಇತರೆ ಸಂಸ್ಥೆಗಳಿಗೆ ಸೇರಿದ 8 ಸಾವಿರ ಎಕರೆ ವಿಸ್ತೀರ್ಣದ ಸಂಸ್ಥೆಗಳಿಗೆ ನೀರು ಸರಬರಾಜು ಸೇರಿದಂತೆ ಅಂತರ್ಜಾಲ ಮತ್ತಷ್ಟು ವಿಷಪೂರಿತ ಆಗುವುದನ್ನು ತಡೆಯಬಹುದು. ಈ ಯೋಜನೆಗೆ ರಾಷ್ಟ್ರೀಯ ಯೋಜನೆ ಎಂದು ಮಾನ್ಯತೆ ಪಡದರೆ ವೇಗ ಯೋಜನೆ ಕಾಮಗಾರಿ ಸಂಪೂರ್ಣಗೊಳಿಸಿ ಎಲ್ಲರಿಗೂ ನೀರು ದೊರಕಿಸಿದರೆ ಬದುಕು ಹಸನಾಗಿಸಬಹು ಎಂದು ಕೇಂದ್ರ ಸಮಿತಿಗೆ ಪತ್ರದ ಮೂಲಕ ಓದಿ ಹೇಳಲಾಯಿತು.

Recommended Video

Rockline Venkatesh ವಜ್ರಮುನಿ ಹೆಸರು ಬಳಸುವ ಅವಶ್ಯಕತೆ ಇಲ್ಲಾ!! : Srikanta Swamy| Oneindia Kannada
ಜಲಾಶಯಕ್ಕೆ ನೀರು

ಜಲಾಶಯಕ್ಕೆ ನೀರು

ಒಂದು ಕಡೆ ಅವಧಿಗೂ ಮುನ್ನವೇ ಜಲಾಶಯಕ್ಕೆ ನೀರು ಹರಿದ ಸಂತೋಷ, ಮತ್ತೊಂದು ಕಡೆ ಕೇಂದ್ರದ ನೀರಾವರಿ ಇಲಾಖೆ ಅಧಿಕಾರಿಗಳು ರಾಷ್ಟ್ರೀಯ ಯೋಜನೆ ಘೋಷಣೆ ಮಾಡುವುದಕ್ಕೆ ಸೂಕ್ತವಾಗಿ ಸ್ಪಂದಿಸಿರುವುದು ಕೋಟೆ ನಾಡಿಗೆ ರೈತರಿಗೆ ಡಬಲ್ ಧಮಾಕ. ಎಲ್ಲವೂ ಅಂದುಕೊಂಡಂತೆ ಆದರೆ ನಮ್ಮ ಹೆಮ್ಮೆಯ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಪುರಸ್ಕಾರ ಪಡೆದ ನಾಡಿನ ಮೊಟ್ಟಮೊದಲ ಯೋಜನೆ ಎಂಬ ಖ್ಯಾತಿಗೆ ಕಾರಣ ಆಗಲಿದೆ.

English summary
Central team visited Vanivilas Sagar dam Hiriyur taluk of Chitradurga and inspected Upper Bhadra project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X