ಚಿತ್ರದುರ್ಗ: ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಗಾಗಿ ದೀಪ ಬೆಳಗಿಸುವ ಕಾರ್ಯಕ್ರಮ

ಚಿತ್ರದುರ್ಗ, ಫೆಬ್ರವರಿ 26: ರಷ್ಯಾ ಯುದ್ಧವನ್ನು ಅಂತ್ಯಗೊಳಿಸಬೇಕು ಉಕ್ರೇನ್‌ನಲ್ಲಿ ಶಾಂತಿ ಮೊಡಬೇಕು ಎಂಬ ಆಶಯದೊಂದಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಗಾಂಧಿ ವೃತ್ತದಲ್ಲಿ ಶನಿವಾರ ದೀಪ ಬೆಳಗಿಸಲಾಯಿತು.
ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧಕ್ಕೆ ಸಂಬಂಧಿಸಿದಂತೆ ವಿಶ್ವ ಸಂಸ್ತೆ ಮತ್ತು ಭಾರತ ಮದ್ಯ ಪ್ರವೇಶಿಸಬೇಕಿದೆ. ಬಾಂಬು, ಬಂದೂಕು ಬೇಡ, ಇಲ್ಲಿ ಜನರ ಜೀವ ಮತ್ತು ಜೀವನ ಮುಖ್ಯ ಎಂಬುದನ್ನು ಸಾರಿ ಹೇಳಲಾಯಿತು.

ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ನೇತೃತ್ವದಲ್ಲಿ ದೀಪ ಬೆಳಗಿಸುವ ಮೂಲಕ ಶಾಂತಿ ಸಂದೇಶ ಸಾರಲಾಯಿತು. ಈ ವೇಳೆ ಮಂಜುನಾಥ್ ಮಾಳಿಗೆ, ಮಲ್ಲಪ್ಪನಹಳ್ಳಿ ಮಹಲಿಂಗಪ್ಪ. ಪತ್ರಕರ್ತ ಸಂಜೆವಾಣಿ ರವಿ ಶಂಕರ್, ಮೌಲ್ವಿ ಅಬ್ದುಲ್ಲಾ, ವಿಶ್ವ ಕರ್ಮ ನಾರಾಯಣ ಅಚಾರ್, ಸಂಶೋಧಕ ಟಿ.ಎನ್. ವೆಂಕಟೇಶ್, ಪ್ರಾಂಶುಪಾಲರಾದ ಚಂದ್ರಯ್ಯ, ದಲಿತ ಮುಖಂಡ ಗಾಂಧಿನಗರ ಮಹಾಂತೇಶ್, ಕಾರ್ಯಕ್ರಮದಲ್ಲಿ ಬಾಗವಹಸಿದ್ದರು.

Candle March at Chitradurga Dist Hiriyur against Russia War in Ukraine

ಯುದ್ಧ ನಿಲ್ಲಿಸುವಂತೆ ಕಸವನಹಳ್ಳಿ ರಮೇಶ್ ಒತ್ತಾಯ:
ಬುದ್ಧ, ಬಸವ, ಗಾಂಧಿ ಹುಟ್ಟಿದ ನಾಡಿನಿಂದ ಸುಮಾರು ಇಪ್ಪತ್ತು ಸಾವಿರ ಜನರು ಉಕ್ರೇನ್‌ನಲ್ಲಿ ಶಿಕ್ಷಣ, ವ್ಯಾಪಾರ, ಪ್ರವಾಸ, ಸಂಶೋದನೆ ವೃತ್ತಿ ಜೀವನ ನಡೆಸುತ್ತಿದ್ದಾರೆ. ವಿಶ್ವದ ಎಲ್ಲಾ ದೇಶಗಳಲ್ಲಿ ಎಲ್ಲಾ ಕಡೆಯ ಜನರು ನಾನಾ ಕಾರಣಗಳಿಂದ ವಾಸಿಸುತ್ತಿದ್ದಾರೆ ಎಂದು ಗಾಂಧಿವಾದಿ ಕಸವನಹಳ್ಳಿ ರಮೇಶ್ ಹೇಳಿದರು.

ಕುವೆಂಪು ಅವರ ವಿಶ್ವ ಮಾನವ ಸಂದೇಶವೂ ಇದನ್ನೇ ಸಾರಿ ಹೇಳುತ್ತದೆ. ಇದು ಕೇವಲ ಉಕ್ರೇನ್ ಮೇಲಿನ ದಾಳಿಯಲ್ಲ. ಮಾನವ ಸಂಕುಲದ ಮೇಲೆ ನಡೆದಿರುವ ದಾಳಿ ಆಗಿದೆ. ಮೊದಲನೇ ಮತ್ತು ಎರಡನೇ ಮಹಾಯುದ್ಧಗಳಿಂದ ಪಾಠ ಕಲಿಯದ ನಾಯಕರು ಕೋಟಿ ಕೋಟಿ ಜನರ ಜೀವಗಳನ್ನು ಪಣಕಿಟ್ಟು ಯುದ್ದ ಮಾಡುವುದು ನ್ಯಾಯವೇ. ತಕ್ಷಣ ಯುದ್ದವನ್ನು ನಿಲ್ಲಿಸಬೇಕು ಎಂದು ಗಾಂಧಿವಾದಿ ಕಸವನಹಳ್ಳಿ ರಮೇಶ್ ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+