ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Karnataka assembly election 2023: ಗೆಲ್ಲುವಂತಹ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಲಾಗುತ್ತದೆ: ಗಾಲಿ ಜನರ್ದನ ರೆಡ್ಡಿ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಫೆಬ್ರವರಿ, 05: 2023ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವಂತಹ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಲಾಗುತ್ತದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಚಿತ್ರದುರ್ಗದಲ್ಲಿ ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನಗೆ ಹಿರಿಯೂರಿನಲ್ಲಿ ಭವ್ಯ ಸ್ವಾಗತ ದೊರೆತಿದೆ. ಪಕ್ಷ ಘೋಷಣೆ ಆದ ದಿನದಿಂದ ನನಗೆ ಬಹುತೇಕ ಜನರು ಪ್ರೀತಿ ತೋರಿಸಿದ್ದಾರೆ ಎಂದರು. ಇಲ್ಲಿನ ಸ್ಥಳೀಯ ಅಭ್ಯರ್ಥಿ ಮಹೇಶ್ ನೇತೃತ್ವದಲ್ಲಿ ಉತ್ತಮ ಬಹಿರಂಗ ಸಮಾವೇಶ ನಡೆದಿದೆ. ನನ್ನ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಎಲ್ಲಿಯೂ ಕೂಡ ಯಾರನ್ನು ಸಹ ಕಾಯುತ್ತಾ ಕುಳಿತಿಲ್ಲ ಎಂದು ತಿಳಿಸಿದರು.

ಉದ್ಯಮ ಮುಂದುವರಿಸಿದ್ದರೆ ಅಂಬಾನಿ, ಅದಾನಿ ಸಾಲಿನಲ್ಲಿರುತ್ತಿದೆ-ಜನಾರ್ದನ ರೆಡ್ಡಿಉದ್ಯಮ ಮುಂದುವರಿಸಿದ್ದರೆ ಅಂಬಾನಿ, ಅದಾನಿ ಸಾಲಿನಲ್ಲಿರುತ್ತಿದೆ-ಜನಾರ್ದನ ರೆಡ್ಡಿ

ಜನರು ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ

ಆ ಭಗವಂತನ ಆಶಿರ್ವಾದದಿಂದ ಜನರು ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಬರುತ್ತಿದ್ದಾರೆ. ಸುಮಾರು 25 ರಿಂದ 30 ಕ್ಷೇತ್ರಗಳಲ್ಲಿ ಇದೇ ಮಾದರಿಯಲ್ಲಿ ಸಭೆ ನಡೆಯುತ್ತಿವೆ. ಹಿಂದೂ- ಮುಸ್ಲಿಂ ಭೇಧ ಭಾವ ಮರೆತು ಜನರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ನಾವು ಯಾರ ಮುಲಾಜಿಲ್ಲದೇ, ಯಾರನ್ನೂ ಕರೆದಿಲ್ಲ. ಲಕ್ಷಾಂತರ ಜನ ನನ್ನೊಟ್ಟಿಗೆ ಬರುತ್ತಿದ್ದಾರೆ. ಗೆಲ್ಲುವ ಕ್ಷೇತ್ರದಲ್ಲಿ ನನ್ನ ಅಭ್ಯರ್ಥಿಯನ್ನು ಹಾಕುತ್ತೇನೆ ಎಂದರು.

Candidates contest in winning constituency: G. Janardhana Reddy

ಶ್ರೀರಾಮಲು ಸ್ಪರ್ಧೆ ಬಗ್ಗೆ ರೆಡ್ಡಿ ಹೇಳಿದ್ದೇನು?

ಇನ್ನು ಶ್ರೀರಾಮಲು ಅವರು ಮೊಳಕಲ್ಮೂರು ಕ್ಷೇತ್ರ ಬಿಟ್ಟು ಬಳ್ಳಾರಿಯಲ್ಲಿ ಸ್ಪರ್ಧಿಸಲಿದ್ದಾರೆ. ಅವರ ವಿರುದ್ಧ ಅಭ್ಯರ್ಥಿ ಹಾಕುತ್ತಿರುವ ಎಂಬ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೆಡ್ಡಿಯವರು ರಾಮುಲು- ನನ್ನ ಸ್ನೇಹ ಬೇರೆ. ಅವರು ನನ್ನ ಜೊತೆಗೆ ಬರಬೇಕು ಎಂಬ ಅಪೇಕ್ಷೆ ಇಲ್ಲ. ಇನ್ನೂ 3-4 ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ನಾನು ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಗೆಲ್ಲುವಂತಹ 40 ಕ್ಷೇತ್ರಗಳಲ್ಲಿ ಹಾಕಲಿದ್ದೇವೆ. ನಾನು ಗಂಗಾವತಿ ಕ್ಷೇತ್ರದಿಂದ ಮಾತ್ರ ಸ್ಪರ್ಧೆ ಮಾಡುತ್ತೇನೆ. ನನ್ನ ಪತ್ನಿಯವರು ಬಳ್ಳಾರಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಜನಾರ್ದನ ರೆಡ್ಡಿ ಹೇಳಿದರು.

English summary
Karnataka assembly election 2023: Candidates contest in winning constituency says G. Janardhana Reddy in Chitradurga, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X