Bhadra Upper project: ಭದ್ರಾ ಮೇಲ್ದಂಡೆ ಯೋಜನೆ ವಿಳಂಬ ಹಿನ್ನೆಲೆ ಹಿರಿಯೂರು ನಗರ ಬಂದ್
ಚಿತ್ರದುರ್ಗ,
ಫೆಬ್ರವರಿ, 21: ಚಿತ್ರದುರ್ಗಕ್ಕೆ ಭದ್ರಾ ಮೇಲ್ದಂಡೆ ಯೋಜನೆ ವಿಳಂಬ ಹಿನ್ನಲೆ ಇಂದು (ಫೆಬ್ರವರಿ 21) ಹಿರಿಯೂರು ನಗರದಲ್ಲಿ ಬಂದ್ ಮಾಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ಹೋರಾಟ ಸಮಿತಿ ನೇತೃದಲ್ಲಿ ಬಂದ್ ಮಾಡಲಾಗಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಬೆಳಗ್ಗೆ
8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್‌ಗೆ ಕರೆ ನೀಡಲಾಗಿದೆ. ಬಂದ್‌ಗೆ ರೈತ, ಕಾರ್ಮಿಕ, ಕನ್ನಡಪರ, ವರ್ತಕರ ಸಂಘಟನೆಗಳು ಸೇರಿ ಹಲವರು ಸಾಥ್ ನೀಡಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಸಂಘಟನೆಗಳು ಬೆಳಗ್ಗೆ 8 ಗಂಟೆ ಬಳಿಕ ಬೀದಿಗಿಳಿದು ಹೋರಾಟ ಆರಂಭಿಸಿವೆ. id='are-slot-2' class='oiad oi-axt oiadv'>












Click it and Unblock the Notifications