ಚಿತ್ರದುರ್ಗದಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಸಾವು
ಚಿತ್ರದುರ್ಗ, ಮೇ 17: ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಚಿತ್ರದುರ್ಗ ನಗರದಲ್ಲಿ ನಡೆದಿದೆ. ಅತಿಕ್ ಉರ್ ರೆಹಮಾನ್ (78) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಅಹಮದಾಬಾದ್ ನಿಂದ ಬಂದಿದ್ದ ತಬ್ಲಿಘಿಗಳನ್ನು ಮೇ 05 ರಂದು ಸಮುದಾಯದ ಮುಖಂಡ ಅತಿಕ್ ಉರ್ ರೆಹಮಾನ್ ಭೇಟಿ ಮಾಡಿದ್ದನು.
ಚಳ್ಳಕೆರೆಯ ಅಪ್ಪ-ಮಗಳಿಗೆ ಕೊರೊನಾ; ಎರಡು ಗ್ರಾಮಗಳು ಸೀಲ್ ಡೌನ್
ತಬ್ಲಿಘಿಗಳನ್ನು ಭೇಟಿ ಮಾಡಿದ್ದರಿಂದ ಈತನ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ವರದಿ ಬಂದಿತ್ತು. 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ಅತಿಕ್ ಉರ್ ರೆಹಮಾನ್ ಇಂದು ಮೃತಪಟ್ಟಿದ್ದಾನೆ.
ತಡ ರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಅತಿಕ್ ಉರ್ ರೆಹಮಾನ್ ಸಾವನ್ನಪ್ಪಿದ್ದಾನೆ. ಮೃತ ದೇಹ ಚಿತ್ರದುರ್ಗ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.