ಪರಿಶಿಷ್ಟ ಕಲ್ಯಾಣ ವರ್ಗ ಮತ್ತು ವಾಲ್ಮಿಕಿ ನಿಗಮದಲ್ಲಿ 25-30 ಕೋಟಿ ಅವ್ಯವಹಾರ ಆರೋಪ
ಚಿತ್ರದುರ್ಗ, ಜುಲೈ : ಪರಿಶಿಷ್ಟ ಕಲ್ಯಾಣ ವರ್ಗ ಮತ್ತು ವಾಲ್ಮಿಕಿ ನಿಗಮದಲ್ಲಿ ಸುಮಾರು 30 ಕೋಟಿ ಹಗರಣವಾಗಿದೆ ಎಂದು ಚಿತ್ರನಾಯಕನ ವೇದಿಕೆ ಅಧ್ಯಕ್ಷರಾದ ಪ್ರಶಾಂತ್ ಆರೋಪಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರ ಮೂರು ಕೋಟಿ ವಿಶೇಷ ಅನುದಾನ ತಾಲೂಕಿನ ಅಭಿವೃದ್ದಿಗೆ ಬಳಕೆಯಾಗಬೇಕಿತ್ತು, ಈ ವಿಶೇಷ ಅನುದಾನದಲ್ಲಿ 57ಜನರಿಗೆ ಸೌಲಭ್ಯ ಸಿಗಬೇಕಿತ್ತು. ಆದರೆ 37 ಜನರಿಗೆ ಮಾತ್ರ ಸಿಕ್ಕಿದೆ. ಅದೂ ಸೌಲಭ್ಯ ಪಡೆದುಕೊಂಡವರು ಕೂಡ ಅರ್ಹ ಫಲಾನುಭವಿಗಳಲ್ಲ, ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರೆ ಅವರ ಸಂಬಂಧಿಗಳಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಶ್ರೀರಾಮುಲು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಮೂರು ಕೋಟಿ ಅನುದಾನವನ್ನು ಕೋವಿಡ್ ಗಾಗಿ ತರಲಾಗಿತ್ತು, ಅದರ ಹಂಚಿಕೆಯಲ್ಲೂ ತಾರತಮ್ಯ ಮಾಡಿದ ಹಗರಣವಾಗಿದೆ , ಅದು ಈಗಾಗಲೇ ಪುರಾವೆಗಳು ಸಿಕ್ಕಿವೆ. ಇದರ ಬಗ್ಗೆಯೂ ತಿಳಿದ್ದಿದ್ದರು ಕೂಡ ಯಾರೂ ಚಕಾರ ಎತ್ತುತ್ತಿಲ್ಲ. ಇನ್ನು ಪರಿಶಿಷ್ಟ ವರ್ಗದ ಬಡವರಿಗೆ ಸ್ವಯಂ ಉದ್ಯೋಗ ಮಾಡಲು ಐರಾವತ ಯೋಜನೆಯಡಿಯಲ್ಲಿ 74 ವಾಹನಗಳು ಬಂದಿದ್ದು, ಕೇವಲ ಮೊಳಕಾಲ್ಮೂರಿಗೆ 70ವಾಹನಗಳನ್ನು ಹಂಚಿದ್ದಾರೆ. ಉಳಿದ ನಾಲ್ಕು ಮಾತ್ರ ಜಿಲ್ಲೆಯ ಕೆಲ ತಾಲೂಕುಗಳಿಗೆ ನೀಡಿದ್ದಾರೆ. ಆದರೆ ಅವರು ನೀಡಿರುವ ಫಲಾನುಭವಿಗಳ್ಯಾರು ಕೂಡ ಅರ್ಹರಾಗಿಲ್ಲ, ಇಲ್ಲಿಯೂ ಕೂಡ ಹಗರಣವಾಗಿದೆ. ಇದೆಲ್ಲದಕ್ಕೂ ನೇರ ಹೊಣೆಗಾರರು ಸಚಿವ ಶ್ರೀರಾಮುಲು ಮತ್ತು ಅಪರ ಅಪ್ತ ಸಾಹಾಯಕರಾದ ಪಾಪೇಶ್ ನಾಯ್ಕ್ ಮತ್ತು ಹನುಮಂತರಾಯಪ್ಪ ಎಂದು ಆರೋಪಿಸಿದರು.

ಇದಕ್ಕೆ ಸಚಿವ ಶ್ರೀರಾಮುಲು ಉತ್ತರ ನೀಡಬೇಕು, ನಮ್ಮ ಸಮೂದಾಯದ ಅಗ್ರಗಣ್ಯ ನಾಯಕ ಶ್ರೀರಾಮುಲು ನಾವು ಇದನ್ನು ಒಪ್ಪುತ್ತೇವೆ. ಆದರೆ ಅದೇ ಸಮೂದಾಯದ ಕಟ್ಟ ಕಡೆಯ ಜನರ ಹಸಿವನ್ನು ಕಿತ್ತು ತಿನ್ನುತ್ತಿದ್ದಾರೆ. ಇದನ್ನು ನಾವು ಹೇಗೆ ಸಹಿಸುವುದು ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಶ್ರೀರಾಮುಲು ಮತ್ತು ಅವರ ಪಿಎಗಳು ಉತ್ತರ ಕೊಡಬೇಕು, ಹೆಚ್ಚಿನ ತನಿಖೆ ಆಗಬೇಕು, ನಾವು ಇದರ ಮೇಲೆ ಲೋಕಾಯುಕ್ತಕ್ಕೆ ದೂರು ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ಇನ್ನು ಟಿಎಸ್ಪಿ ಅನುದಾನವನ್ನು ಮೊಳಕಾಲ್ಮೂರಿನ ಗಢಿಭಾಗದಲ್ಲಿ ಹಂಚಿಕೊಂಡಿದ್ದು, ಪಿಆರ್ ಇಡಿ ಮತ್ತು ಪಿಡಬ್ಲೂ ಡಿ ಇಲಾಖೆ ಅಡಿಯಲ್ಲಿ ಕಾಮಗಾರಿಗಳಿಗೆ ಹಣ ಬಿಡುಗಡೆ ಆಗಿದೆ. ಆದರೆ ಹಿಂದೆ ಆಗಿರುವ ಕಾಮಗಾರಿಗೆ ತೇಪೆ ಹಾಕಲಾಗಿದೆ. ಇದರಲ್ಲಿಯೂ ಕೂಡ ಬೋಗಸ್ ಆಗಿರುವುದು ಕಂಡು ಬಂದಿದೆ. ಇನ್ನು ಮೊಳಕಾಲ್ಮೂರು ಕ್ಷೇತ್ರದ ಚಳ್ಳಕೆರೆ ಭಾಗದ ಗ್ರಾಮಗಳಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಕೂಡ ಕಳಪೆಯಾಗಿದ್ದು, ಅದನ್ನು ಕೂಡ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications