• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಷ್ಟ್ರೀಯ ಪಕ್ಷಗಳು ಗೌಡರ ಮನೆಗೆ; ಕೇಂದ್ರ ಸಚಿವರ ತಿರುಗೇಟು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಸೆಪ್ಟೆಂಬರ್ 17; "ದೇವೇಗೌಡರ ಮನೆಗೆ ಹೋಗುವಂತೆ ಮಾಡುವ ಬಗ್ಗೆ ಮತದಾರರು ತೀರ್ಮಾನ ಮಾಡಲಿದ್ದಾರೆ" ಎಂದು ಚಿತ್ರದುರ್ಗದ ಬಿಜೆಪಿ ಸಂಸದ ಮತ್ತು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಎಚ್. ಡಿ. ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿದರು.

ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಗುರುವಾರ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾತನಾಡಿ, "ರಾಜ್ಯ ರಾಜಕೀಯದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಅನಿವಾರ್ಯವಾಗಲಿದೆ. 2023ರ ವಿಧಾನಸಭೆ ಚುನಾವಣೆ ಬಳಿಕ ಎರಡೂ ಪಕ್ಷಗಳು ತಮ್ಮ ಮನೆ ಬಾಗಿಲಿಗೆ ಬರುವುದು ನಿಶ್ಚಿತ" ಎಂದು ಹೇಳಿದ್ದರು.

ಕಾವೇರಿ ನೀರು ಹಂಚಿಕೆ; ರಾಜ್ಯ ಸರ್ಕಾರ ಬೆಂಬಲಿಸಿದ ದೇವೇಗೌಡ! ಕಾವೇರಿ ನೀರು ಹಂಚಿಕೆ; ರಾಜ್ಯ ಸರ್ಕಾರ ಬೆಂಬಲಿಸಿದ ದೇವೇಗೌಡ!

ಶುಕ್ರವಾರ ಸಚಿವ ಎ. ನಾರಾಯಣಸ್ವಾಮಿ ಚಿತ್ರದುರ್ಗ ನಗರದ ಮದ್ಯ ಮತ್ತು ಮಾದಕ ವಸ್ತು ವ್ಯಸನಿಗಳ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ್ದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಮದ್ಯ ಮತ್ತು ಮಾದಕ ವ್ಯಸನಿಗಳ ಪುನರ್ವಸತಿ ಇಲಾಖೆಯು ನನ್ನ ವ್ಯಾಪ್ತಿಗೆ ಬರುವುದರಿಂದ ನಾನು ಪರಿಶೀಲನೆ ನಡೆಸಿದ್ದೇನೆ" ಎಂದರು.

ಪ್ರಧಾನಿ ಮೋದಿಗೆ ಪತ್ರ ಬರೆದು ರೈತರ ಸಮಸ್ಯೆ ಬಿಚ್ಚಿಟ್ಟ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡಪ್ರಧಾನಿ ಮೋದಿಗೆ ಪತ್ರ ಬರೆದು ರೈತರ ಸಮಸ್ಯೆ ಬಿಚ್ಚಿಟ್ಟ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ

"ಡ್ರಗ್ಸ್ ಮೂಲಕ ನಮ್ಮ ದೇಶದ ಆರ್ಥಿಕ ವ್ಯವಸ್ಥೆಯನ್ನು ಹದಗೆಡುವಂತೆ ಮಾಡಲು ಹುನ್ನಾರ ನಡೆಯುತ್ತಿದೆ. ಇಂತಹ ಹುನ್ನಾರವನ್ನು ತಡೆಯಲು ಪೊಲೀಸ್ ಇಲಾಖೆ ಸಹಯೊಂದಿಗೆ ಚರ್ಚಿಸಲಿದ್ದೇವೆ" ಎಂದು ಸಚಿವರು ಹೇಳಿದರು.

ದೇವೇಗೌಡರು ಗರಂ; ಜೆಡಿಎಸ್‌ ಶಾಸಕ ಪಕ್ಷದಿಂದ ಉಚ್ಛಾಟನೆ? ದೇವೇಗೌಡರು ಗರಂ; ಜೆಡಿಎಸ್‌ ಶಾಸಕ ಪಕ್ಷದಿಂದ ಉಚ್ಛಾಟನೆ?

"ಬಿಜೆಪಿ ಹಾಗೂ ಸಂಘ ಡೋಂಗಿ ರಾಜಕಾರಣ ಮಾಡುವುದಿಲ್ಲ. ಹಿಂದುತ್ವದ ಹೆಸರಲ್ಲಿ ಇಷ್ಟು ದಿನ ಯಾರು ಡೋಂಗಿತನ ಮಾಡಿದರು?. ಯಾರು ಜಮ್ಮು-ಕಾಶ್ಮೀರವನ್ನು ಒಲೈಸಿದರು?, ಯಾರು ಅಲ್ಪಸಂಖ್ಯಾತರನ್ನು ಒಲೈಸಿದರು? ಎಂಬುದನ್ನು ಮೊದಲು ಕಾಂಗ್ರೆಸ್‌ ಹೇಳಬೇಕು" ಎಂದು ಸಚಿವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.

ಮಾತು ಬಾರದ ಮಹಿಳೆ ಮೇಲೆ ಅತ್ಯಾಚಾರ; ಮೂಕ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ‌ ನಡೆದಿದೆ. ಸಂತ್ರಸ್ತ ಮಹಿಳೆ ದಾವಣಗೆರೆಯ ತನ್ನ ಅಣ್ಣನ ಮನೆಗೆ ಹೋಗಿ ರಾತ್ರಿ ಕೊನೆಯ ಬಸ್‌ನಲ್ಲಿ ತುಪ್ಪದ ಹಳ್ಳಿ ಲಂಬಾಣಿ ಹಟ್ಟಿಗೆ ವಾಪಸ್ ಆಗುತ್ತಿದ್ದಳು.

ಅದೇ ಬಸ್‌ನಲ್ಲಿ ಕಡೂರಿನಿಂದ ತುಪ್ಪದ ಹಳ್ಳಿ ಗೇಟ್‌ಗೆ ಬಂದಿದ್ದ ಆರೋಪಿ ಮಹಿಳೆ ಒಬ್ಬಳೇ ಇರುವುದನ್ನು ಕಂಡು ಅವಳನ್ನು ಹಿಂಬಾಲಿಸಿಕೊಂಡು ಹೋಗಿ ರಸ್ತೆ ಪಕ್ಕದ ಅಡಿಕೆ ತೋಟಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿ ಮಹಿಳೆಗೆ ಕಚ್ಚಿ ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯನ್ನು ಚಿತ್ರದುರ್ಗದ ಲಕ್ಷ್ಮೀ ಸಾಗರ ಗ್ರಾಮದವನು ಎಂದು ಗುರುತಿಸಲಾಗಿದೆ. ಹೊಳಲ್ಕೆರೆ ಪೋಲಿಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ಜಿ. ರಾಧಿಕಾ ಭೇಟಿ‌ ನೀಡಿದರು.

   ಶಿವನನ್ನು ಲಿಂಗದ ರೂಪದಲ್ಲಿ ಯಾಕೆ ಪೂಜಿಸ್ತಾರೆ ಗೊತ್ತಾ?ಲಿಂಗದ ಶಕ್ತಿ ಎಂಥದ್ದು? | Oneindia Kannada
   English summary
   National party's seek JD(S) support after 2023 assembly polls said H. D. Deve Gowda. Union minister A. Narayanaswamy said people will decide on it.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X