• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರದುರ್ಗದಲ್ಲಿ ಮತ್ತೆ 7 ಕೊರೊನಾ ವೈರಸ್ ಪ್ರಕರಣ ದೃಢ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜೂನ್ 28: ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಕೊರೊನಾ ವೈರಸ್ ರಣಕೇಕೆ ಹಾಕಿದ್ದು, ಜಿಲ್ಲೆಯಲ್ಲಿ ಶನಿವಾರ ಮಹಾರಾಷ್ಟ್ರದ ಓರ್ವ ವ್ಯಕ್ತಿ ಸೇರಿದಂತೆ 7 ಜನರಿಗೆ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ.

ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 37 ಮಂದಿಯ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗಿತ್ತು. ಹಿರಿಯೂರು ನಗರದ 58 ವರ್ಷದ ಮಹಿಳೆ, 28 ವರ್ಷದ ಯುವಕ, 21 ವರ್ಷದ ಯುವಕ, 21 ವರ್ಷದ ಯುವಕ, 19 ವರ್ಷದ ಯುವಕ, 96 ವರ್ಷದ ವೃದ್ದೆ, 38 ವರ್ಷದ ಪುರುಷ ಸೇರಿ 7 ಜನರಿಗೆ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ಚಿತ್ರದುರ್ಗದಲ್ಲಿ ಎಷ್ಟು ಸಕ್ರಿಯ ಪ್ರಕರಣಗಳಿವೆ; ಸೀಲ್ ಡೌನ್ ಆದ ಪ್ರದೇಶಗಳು ಯಾವುವು?ಚಿತ್ರದುರ್ಗದಲ್ಲಿ ಎಷ್ಟು ಸಕ್ರಿಯ ಪ್ರಕರಣಗಳಿವೆ; ಸೀಲ್ ಡೌನ್ ಆದ ಪ್ರದೇಶಗಳು ಯಾವುವು?

7 ಜನರಲ್ಲಿ ಓರ್ವ ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿ ಹಿರಿಯೂರು ತಾಲ್ಲೂಕಿನ ಗುಯಿಲಾಳು ಟೋಲ್ ಸಿಬ್ಬಂದಿ ಎನ್ನಲಾಗಿದೆ. ಇವರ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಿ ಹೋಮ್ ಕ್ವಾರಂಟೈನ್ ಮಾಡಲಾಗಿದೆ.

ಎರಡು ದಿನಗಳ ಹಿಂದೆ ಹಿರಿಯೂರು ನಗರದ 65 ವರ್ಷದ ಕಿರಾಣಿ ಅಂಗಡಿ ಮಾಲೀಕನಿಗೆ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ 6 ಜನರಿಗೆ ಶನಿವಾರ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ.

ಬೆಂಗಳೂರಿಗೆ ಹೋಗಿ ಬಂದಿದ್ದ 65 ವರ್ಷದ ವೃದ್ಧನಿಂದ ಮಹಾಮಾರಿ ಕೊರೊನಾ ವೈರಸ್ ಸೋಂಕು ಸಮುದಾಯಕ್ಕೆ ಹರಡಲು ಆರಂಭಿಸಿದೆ.

ಚಿತ್ರದುರ್ಗದಲ್ಲಿ ಆಯುರ್ವೇದ ವೈದ್ಯನಿಗೆ ಕೊರೊನಾ ವೈರಸ್ಚಿತ್ರದುರ್ಗದಲ್ಲಿ ಆಯುರ್ವೇದ ವೈದ್ಯನಿಗೆ ಕೊರೊನಾ ವೈರಸ್

ಶುಕ್ರವಾರ ಚಳ್ಳಕೆರೆ ನಗರದ 26 ವರ್ಷದ ಯುವಕನಿಗೆ ಮತ್ತು ಹೊಳಲ್ಕೆರೆ ಪಟ್ಟಣದ 25 ವರ್ಷದ ಯುವಕನಿಗೆ ಕೊರೊನಾ ವೈರಸ್ ಪಾಸಿಟಿವ್ ಕೇಸ್ ದೃಢಪಟ್ಟಿತ್ತು. ಜಿಲ್ಲೆಯಲ್ಲಿ ಒಟ್ಟು 57 ಕೊರೊನಾ ವೈರಸ್ ಪ್ರಕರಣಗಳಾಗಿವೆ.

ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 43 ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 14 ಸಕ್ರೀಯ ಪ್ರಕರಣಗಳಿವೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು, ಜಿಲ್ಲೆಯ ಜನತೆ ಆತಂಕದಲ್ಲಿದ್ದಾರೆ.

English summary
Coronavirus confirmed positive for 7 people, including a man from Maharashtra, on Saturday in Chitradurga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X