ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಚಿತ್ರದುರ್ಗಕ್ಕೆ ಕಂಟಕ, ಆರಕ್ಕೇರಿದ ಸೋಂಕಿತರ ಸಂಖ್ಯೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಮೇ 09: ಕೋಟೆ ನಾಡು ಚಿತ್ರದುರ್ಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮುಂದುವರಿದಿದ್ದು, ಇಂದು ಮತ್ತೆ 3 ಮೂರು ಜನರಿಗೆ ಸೋಂಕು ಪತ್ತೆಯಾಗಿದೆ. ಚಿತ್ರದುರ್ಗದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಆರಕ್ಕೆ ಏರಿದ್ದು, ಗ್ರೀನ್ ಝೋನ್ ನಲ್ಲಿದ್ದ ಚಿತ್ರದುರ್ಗದಲ್ಲಿ ಆತಂಕ ಉಂಟಾಗಿದೆ.

ನಿನ್ನೆಯಷ್ಟೇ ಚಿತ್ರದುರ್ಗದಲ್ಲಿ ಮೂರು ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಇದೀಗ ಮತ್ತೆ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಚಿತ್ರದುರ್ಗ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಜಿಲ್ಲೆಗೆ ಈ ಕಂಟಕ ಎದುರಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

ಬೆಂಗಳೂರಿನ ಪಾದರಾಯನಪುರದಲ್ಲಿ ಮತ್ತೋರ್ವ ಗರ್ಭಿಣಿಗೆ ಕೊರೊನಾ ಸೋಂಕುಬೆಂಗಳೂರಿನ ಪಾದರಾಯನಪುರದಲ್ಲಿ ಮತ್ತೋರ್ವ ಗರ್ಭಿಣಿಗೆ ಕೊರೊನಾ ಸೋಂಕು

ರಾಜ್ಯ ಸರ್ಕಾರದ ಅನುಮತಿಯನ್ನೇ ಪಡೆಯದೆ ಹದಿನೈದು ಮಂದಿ ತಬ್ಲಿಘಿಗಳು ಅಹಮದಾಬಾದ್ ನಿಂದ ಮೇ 05ರಂದು ಖಾಸಗಿ ಬಸ್ ಮೂಲಕ ಬಂದಿದ್ದಾರೆ. ಅನುಮತಿ ಇಲ್ಲದೆ ಬಂದಿದ್ದರೂ ಜಿಲ್ಲೆಗೆ ಇವರನ್ನು ಬಿಟ್ಟುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಾರ್ಚ್ 8ರಂದು ಚಿತ್ರದುರ್ಗದಿಂದ ಅಹಮದಾಬಾದ್ ಗೆ ಹೊರಟಿದ್ದ ತಬ್ಲಿಘಿಗಳು ಧರ್ಮಭೆಯಲ್ಲಿ ಪಾಲ್ಗೊಂಡು ಅಹಮದಾಬಾದ್ ನಲ್ಲಿ ಲಾಕ್ ಆಗಿದ್ದರು.

6 Coronavirus Positive Cases In Green Zone Chitradurga

ನಂತರ ಮೇ 05ರಂದು ಚಿತ್ರದುರ್ಗಕ್ಕೆ ಬಂದಿರುವ ಆರು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಚಿತ್ರದುರ್ಗ ಡಿಎಚ್ಒ, ತಹಶೀಲ್ದಾರ್ ಸೇರಿದಂತೆ 20ಕ್ಕೂ ಹೆಚ್ಚು ಅಧಿಕಾರಿಗಳನ್ನು ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ.

English summary
Totally 6 coronavirus positive cases reported from green zone chitradurga since yesterday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X