ವಿಧಾನಸೌಧದ ಪ್ರತಿ ಕಂಬಕ್ಕೆ ಬಡಿದರೆ "40%" ಅನ್ನುತ್ತದೆ: ಬಿಜೆಪಿ ವಿರುದ್ಧ ಪರಮೇಶ್ವರ ಆರೋಪ
ವಿಧಾನಸೌಧದ ಪ್ರತೀ ಕಂಬ ಬಡಿದರೂ ಲಂಚ.. ಲಂಚ ಎನ್ನುವ ಶಬ್ಧ ಬರುತ್ತದೆ ಎಂದು ಜಿ.ಪರಮೇಶ್ವರ ಬಿಜೆಪಿ ವಿರುದ್ದ ಆರೋಪ ಮಾಡಿದರು.
ಚಿತ್ರದುರ್ಗ, ಫೆಬ್ರವರಿ, 07: ವಿಧಾನಸೌಧದಲ್ಲಿರುವ ಪ್ರತಿಯೊಂದು ಕಂಬಕ್ಕೆ ಬಡಿದರೆ 40% ಅಂತ ಸೌಂಡ್ ಬರುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಚಿತ್ರದುರ್ಗದಲ್ಲಿ ಹೇಳಿದರು.
ಜಿಲ್ಲೆಯ ಹಿರಿಯೂರು ನಗರದ ನೆಹರೂ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರಜಾ ಧ್ವನಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಬಿಜೆಪಿ ಸರ್ಕಾರ 40% ಲಂಚ ಪಡೆದು ಆಡಳಿತ ನಡೆಸುತ್ತಿದೆ. ಯಾವ ಪುರುಷಾರ್ಥಕ್ಕೆ ಬಿಜೆಪಿ ಸರ್ಕಾರ ಆಡಳಿತ ಮಾಡುತ್ತಿದೆ ಎಂಬುದು ಗೊತ್ತಿಲ್ಲ ಎಂದರು.
ಸಿಎಂ ಬರೀ ಸುಳ್ಳು ಹೇಳುತ್ತಿದ್ದಾರೆ
ಎಚ್ಎಎಲ್ ಫ್ಯಾಕ್ಟರಿ ಉದ್ಘಾಟನೆಗೆ ಪ್ರಧಾನಿ ಮೋದಿ ಬಂದಿದ್ದು ಸಂತೋಷ. ಆದರೆ 2016ರಲ್ಲಿ ಪ್ರಧಾನಿ ಮೋದಿ ಫ್ಯಾಕ್ಟರಿಗೆ ಅಡಿಗಲ್ಲು ಹಾಕಿದ್ದರು. ಅಂದು ಪ್ರಧಾನಿಯವರು ಎರಡು ವರ್ಷದಲ್ಲಿ ಹೆಲಿಕಾಪ್ಟರ್ ಹಾರುತ್ತದೆ ಎಂದಿದ್ದರು. ಆದರೆ ಇದೀಗ ಎಚ್ಎಎಲ್ ಫ್ಯಾಕ್ಟರಿ ಉದ್ಘಾಟನೆಗೆ ಬಂದಿದ್ದಾರೆ. ಇದರಿಂದ ಬಿಜೆಪಿ ಸರ್ಕಾರದಿಂದ ಉದ್ಯೋಗ ನೀಡುವ ಭರವಸೆ ಹುಸಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಯಾಕಿಷ್ಟು ಸುಳ್ಳು ಹೇಳುತ್ತೀರಿ? ಎಂದು ಪ್ರಶ್ನಿಸಿದರು.

ಬಿಜೆಪಿಗೆ ಎಚ್ಚರಿಕೆ ನೀಡಿದ ಪರಮೇಶ್ವರ
ಕಾಂಗ್ರೆಸ್‌ನ ಉಚಿತ ವಿದ್ಯುಚ್ಛಕ್ತಿ ಘೋಷಣೆ ಬಗ್ಗೆ ಟೀಕಿಸುತ್ತೀರಿ, ಹೇಗೆ ಉತ್ಪಾದಿಸಬೇಕು. ಹೇಗೆ ಉಚಿತ ನೀಡಬೇಕೆಂಬುದು ಗೊತ್ತಿದೆ ಎಂದು ಪರಮೇಶ್ವರ್ ಬಿಜೆಪಿಗೆ ಎಚ್ಚರಿಕೆ ನೀಡಿದರು. ಹಾಗೆಯೇ ರಾಜ್ಯ ಬಿಜೆಪಿ ಸರ್ಕಾರ ದನಕರುಗಳು, ಕತ್ತೆಗಳನ್ನು ಖರೀದಿಸಿದಂತೆ ಜನಪ್ರತಿನಿಧಿಗಳನ್ನು ಖರೀದಿಸಿ ಸರ್ಕಾರ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾವು ಗೆದ್ದು, ಮತ್ತೇ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಪರಿಶಿಷ್ಟ ಜಾತಿ, ಪ.ವರ್ಗ ಇಟ್ಟುಕೊಂಡು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
BJPಯವರು ಜನರಿಗೆ ಮೋಸ ಮಾಡ್ತಿದ್ದಾರೆ
ಮೀಸಲಾತಿ ಹೆಚ್ಚಳ ಮಾಡುವಂತೆ ಸ್ವಾಮೀಜಿ ಧರಣಿ ಕುಳಿತ ಪ್ರಭಾವ 7% ಹೆಚ್ಚಳ ಮಾಡಿದರು. ಅದು ಬಿಲ್ ಪಾಸ್ ಆಗಿಲ್ಲ. ಹೀಗೆ ಬಿಜೆಪಿಯವರು ಜನರಿಗೆ ಮೋಸ ಮಾಡುತ್ತಿದ್ದಾರೆ. ಮೀಸಲಾತಿ ಕೊಟ್ಟ ಪಕ್ಷ ಎಂದರೆ ಅದು ಕಾಂಗ್ರೆಸ್ ಮಾತ್ರ. ನಾನು ಮಂತ್ರಿಯಾಗಿದ್ದಾಗ ಎಸ್‌ಪಿಟಿಎಲ್‌ನ ಅಡಿಯಲ್ಲಿ ಮೀಸಲಾತಿ ಇಡಲಾಗಿತ್ತು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ 88 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ ಎಂದರು.
ರಾಜ್ಯದಲ್ಲಿ ವಾಸಿಸುವ ಎಲ್ಲಾ ಜನರಿಗೆ ಯೋಜನೆಗಳನ್ನು ತಲುಪಿಸಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸತ್ಯ. ನಾವು ಜನರಿಗೆ ಕೊಡುವ ಭರವಸೆ ಈಡೇರಿಸುವುದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಅನೈತಿಕ ರಾಜಕಾರಣ ಮಾಡುತ್ತಿರುವ ಬಿಜೆಪಿಯನ್ನು ತೊಲಗಿಸಬೇಕು ಎಂದು ಆಂಜನೇಯ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications