ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

30 ಸಾವಿರ ವಿದ್ಯುತ್ ಚಾಲಿತ ಬಸ್‌ಗಳನ್ನಾಗಿ ಪರಿವರ್ತನೆಗೆ ನಿರ್ಧಾರ: ಹಿರಿಯೂರಿನಲ್ಲಿ ರಾಮುಲು ಭರವಸೆ

|
Google Oneindia Kannada News

ಹಿರಿಯೂರು, ಡಿಸೆಂಬರ್‌, 07: ಈಗಾಗಲೇ ರಾಜ್ಯದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಪರಿಸರ ಮಾಲಿನ್ಯವೂ ಕೂಡ ಹೆಚ್ಚುತ್ತಿದೆ. ಆದ್ದರಿದಂದ ಇದನ್ನು ಉದ್ದೇಶದಿಂದ ಸಾರಿಗೆ ಇಲಾಖೆಯ 30 ಸಾವಿರ ಬಸ್‌ಗಳನ್ನು ವಿದ್ಯುತ್ ಚಾಲಿತ ಬಸ್‌ಗಳನ್ನಾಗಿ ಪರಿವರ್ತನೆ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹಿರಿಯೂರಿನಲ್ಲಿ ಹೇಳಿದರು.

ಹಿರಿಯೂರು ನಗರದ ವೇದಾವತಿ ಕಾಲೇಜು ಬಳಿ ಮೂರು ಹೆಕ್ಟೇರ್‌ ಜಮೀನಿನಲ್ಲಿ ಆರು ಕೋಟಿ ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಹಿರಿಯೂರು ನಗರದ ಹುಳಿಯಾರು ರಸ್ತೆಯ ವೇದಾವತಿ ಕಾಲೇಜು ಬಳಿ ಹಮ್ಮಿಕೊಂಡಿದ್ದ ಕೆಎಸ್‌ಆರ್‌ಟಿಸಿ ಬಸ್ ನೂತನ ಘಟಕಕ್ಕೆ 6 ಕೋಟಿ ವೆಚ್ಚದಲ್ಲಿ ಶಂಕುಸ್ಥಾಪನೆ ನೆರವೇರಿಸಿದದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಹಾಗೂ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು 2030ರೊಳಗೆ ಸಾರಿಗೆ ಸಂಸ್ಥೆಯ 30 ಸಾವಿರ ಹಳೆಯ ಬಸ್‌ಗಳನ್ನು ವಿದ್ಯುತ್ ಚಾಲಿತ ಬಸ್‌ಗಳನ್ನಾಗಿ ಪರಿವರ್ತಿಸಲಾಗುತ್ತದೆ ಎಂದರು.

KSRTC e bus; ಶೀಘ್ರದಲ್ಲೇ ಬೆಂಗಳೂರಿನಿಂದ ಆರು ಮಾರ್ಗಗಳಲ್ಲಿ ಸಂಚಾರ, ನಿರ್ವಾಹಕರ ವೆಚ್ಚದ ವಿವರKSRTC e bus; ಶೀಘ್ರದಲ್ಲೇ ಬೆಂಗಳೂರಿನಿಂದ ಆರು ಮಾರ್ಗಗಳಲ್ಲಿ ಸಂಚಾರ, ನಿರ್ವಾಹಕರ ವೆಚ್ಚದ ವಿವರ

2023 ಜನವರಿ ಅಂತ್ಯದೊಳಗೆ 50 ವಿದ್ಯುತ್ ಚಾಲಿತ ಬಸ್‌ಗಳನ್ನು ಖರೀದಿಸಲಾಗುವುದು. ಹಾಗೆಯೇ 600 ಕೆಂಪು ಬಸ್ ಖರೀದಿಗೆ ಟೆಂಡರ್ ಕರೆಯಲಾಗಿದೆ. ಅಲ್ಲದೇ 60 ವೊಲ್ವೊ ಬಸ್ ಖರೀದಿಗೂ ಚಿಂತನೆ ನಡೆಸಿದ್ದೇವೆ. ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಯ ವೇತನ 2017ರಿಂದ ಪರಿಷ್ಕರಣೆ ಆಗಿಲ್ಲ. ಸಿಎಂ ಜೊತೆ ಮಾತನಾಡಿ ವೇತನ ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದರು.

ರಾಜ್ಯಾದ್ಯಂತ ಎಲೆಕ್ಟ್ರಿಕ್‌ ಬಸ್ ಬಿಡುವ ಆಸೆಯಿದೆ

ರಾಜ್ಯಾದ್ಯಂತ ಎಲೆಕ್ಟ್ರಿಕ್‌ ಬಸ್ ಬಿಡುವ ಆಸೆಯಿದೆ

ಬಿಎಂಟಿಸಿಗೆ ಎಲೆಕ್ಟ್ರಿಕ್‌ ಬಸ್ ಖರೀದಿ ಮಾಡಿದ್ದು, ರಾಜ್ಯದಲ್ಲಿ ಮುಂದೆ ಪರಿಸರ ಸಮತೋಲನಕ್ಕೆ ರಾಜ್ಯಾದ್ಯಂತ ಓಡಾಡಿಸಬೇಕು ಎನ್ನುವ ಕನಸಿದೆ. ಇನ್ನು ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಕೊಡಲಾಗಿದೆ ಇದರ ಜೊತೆಗೆ ಕೆಎಸ್‌ಆರ್‌ಟಿಸಿಯಲ್ಲಿ ಮುಂದಿನ ದಿನಗಳಲ್ಲಿ ಸಾಕಷ್ಟು ಬದಲಾವಣೆ ಮಾಡುಲಾಗುತ್ತದೆ ಎಂದು ಹೇಳಿದರು. ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳದಲ್ಲಿ ತಂಗಿ ಪೂರ್ಣಿಮಾ ಶ್ರೀನಿವಾಸ್ ಅವರ ಪಾತ್ರ ಬಹಳಷ್ಟಿದೆ. ಮುಂಬರುವ ಚುನಾವಣೆಯಲ್ಲಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಬಹುಮತಗಳಿಂದ ಆಯ್ಕೆ ಮಾಡಬೇಕು ಎಂದು ಜನರಿಗೆ ಮನವಿ ಮಾಡಿದರು.

ಪೂರ್ಣಿಮಾ ಅವರನ್ನು ಹೊಗಳಿದ ರಾಮುಲು

ಪೂರ್ಣಿಮಾ ಅವರನ್ನು ಹೊಗಳಿದ ರಾಮುಲು

ಈ ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಕಾಲಿಟ್ಟ ಗಳಿಗೆ ಚೆನ್ನಾಗಿದೆ. ಅವರ ಕಾಲ್ಗುಣದಿಂದ ವಾಣಿ ವಿಲಾಸ ಸಾಗರ ಜಾಲಾಶಯ ತುಂಬಿ ಕೋಡಿ ಬಿದ್ದಿದೆ. ಹಾಗೂ ಭದ್ರಾದಿಂದ ವಾಣಿ ವಿಲಾಸ ಜಲಾಶಯಕ್ಕೆ ಐದು ಟಿಎಂಸಿ ನೀರು ಹರಿಸಲು ಸರ್ಕಾರದಿಂದ ಆದೇಶ ಮಾಡಿಸಿದ್ದಾರೆ. ಇನ್ನು ವಾಣಿ ವಿಲಾಸ ಸಾಗರ ತುಂಬಿದ ಹಿನ್ನೆಲೆಯಲ್ಲಿ ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮೂರು ಕ್ಷೇತ್ರದಲ್ಲಿ ಸುಮಾರು 4 ಲಕ್ಷ ಬೋರ್ ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಹೆಚ್ವಿದೆ ಎಂದು ತಿಳಿಸಿದರು.

ಹಿರಿಯೂರು ಕ್ಷೇತ್ರ ತುಂಬಾ ಅಭಿವೃದ್ಧಿ ಆಗಿದೆ

ಹಿರಿಯೂರು ಕ್ಷೇತ್ರ ತುಂಬಾ ಅಭಿವೃದ್ಧಿ ಆಗಿದೆ

ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್‌ ಅವರು ಹಠವಾದಿ, ಕ್ಷೇತ್ರಕ್ಕೆ ಇಂತಹ ಯೋಜನೆ ಬೇಕು ಅಂದರೆ ಹಠಬಿಡದೆ ಆ ಯೋಜನೆಯನ್ನು ತರುತ್ತಾರೆ. ಜಿಲ್ಲೆಯಲ್ಲಿ ಏಕೈಕ ಮಹಿಳಾ ಶಾಸಕಿ ಎಂದರೆ ಪೂರ್ಣಿಮಾ ಮಾತ್ರ ಎಂದು ತಿಳಿಸಿದರು. ದಶಕಗಳ ಹೋರಾಟದ ಬಳಿಕ ತಾಲೂಕಿನ ಧರ್ಮಪುರ ಕೆರೆಗೆ ನೀರು ಹರಿಸುತ್ತಿದ್ದಾರೆ. ಇನ್ನು ತಾಲೂಕಿನಲ್ಲಿ 11 ಸಾವಿರ ಮನೆಗಳನ್ನು ಕೊಟ್ಟಿದ್ದಾರೆ. ನಾಲ್ಕುವರೆ ವರ್ಷಗಳಲ್ಲಿ ಹಿರಿಯೂರು ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಹೊಂದಿದೆ‌ ಎಂದರು.

ಬೆಂಗಳೂರು-ಮೈಸೂರು ನಡುವೆ ಬಸ್ ಸಂಚಾರ

ಬೆಂಗಳೂರು-ಮೈಸೂರು ನಡುವೆ ಬಸ್ ಸಂಚಾರ

ಅಲ್ಲದೇ ಬೆಂಗಳೂರು-ಮೈಸೂರು ನಡುವೆ ಡಿಸೆಂಬರ್‌ 15ರಿಂದ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ. ಇದೇ ರೀತಿ ಮುಂದಿನ ದಿನಗಳಲ್ಲಿ ಬೆಂಗಳೂರು ನಗರದಿಂದ ದಾವಣಗೆರೆ, ಶಿವಮೊಗ್ಗ, ಚಿಕ್ಕ ಮಗಳೂರು ಸೇರಿದಂತೆ ಕೆಲ ಜಿಲ್ಲೆಗಳಿಗೆ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಎಲೆಕ್ಟ್ರಿಕ್‌ ಬಸ್‌ಗಳಲ್ಲಿ ಟ್ರ್ಯಾಕಿಂಗ್ ಘಟಕಗಳು, ಸಿಸಿಟಿವಿ ಮತ್ತು ಪ್ರಾಯಣಿಕರ ಸುರಕ್ಷತೆಗಾಗಿ ಹೆಚ್ಚುವರಿ ಕ್ರಮಗಳನ್ನು ಅಳವಡಿಸಲಾಗಿದೆ. ಕೆಎಸ್‌ಆರ್‌ಟಿಸಿ ಖರೀದಿಸುತ್ತಿರುವ ಎಲೆಕ್ಟ್ರಿಕ್‌-ಬಸ್ 12 ಮೀಟರ್ ಉದ್ದವಿರಲಿದ್ದು, ಸಂಪೂರ್ಣ ಹವಾ ನಿಯಂತ್ರಿತವಾಗಿರುತ್ತದೆ. ಹಾಗೂ ಈ ಬಸ್‌ಗಳಲ್ಲಿ 43 ಸೀಟುಗಳು ಇರಲಿವೆ. ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ ಬಸ್‌ಗಳು 250ರಿಂದ 300 ಕಿಲೋ ಮೀಟರ್‌ವರೆಗೂ ಸಂಚಾರ ಮಾಡಲಿವೆ ಎನ್ನುವ ಮಾಹಿತಿ ಲಭ್ಯವಾಗಿತ್ತು.

English summary
Transport Department Minister B Sri Ramulu promise in Hiriyur of Chitradurga taluk, 30 Thousand buses to be converted into electric buses in Karnataka State, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X