• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರದುರ್ಗದಲ್ಲಿ ಇಂದು 3 ಕೊರೊನಾ ವೈರಸ್ ಪಾಸಿಟಿವ್ ಕೇಸ್ ದೃಢ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ 1: ಕೋಟೆ ನಾಡು ಚಿತ್ರದುರ್ಗದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಮುಂದುವರಿದಿದ್ದು, ಇಂದು ಹಿರಿಯೂರು, ಮೊಳಕಾಲ್ಮೂರು, ಚಳ್ಳಕೆರೆಯಲ್ಲಿ ತಲಾ ಒಂದರಂತೆ ಇಬ್ಬರು ಮಹಿಳೆಯರು, ಓರ್ವ ಪುರುಷ ಸೇರಿದಂತೆ 3 ಕೇಸ್ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 77 ಕ್ಕೆ ಏರಿಕೆಯಾಗಿದೆ.

   Patanjali,ಕೊರೊನಾಗೆ ಪತಂಜಲಿಯ ಆಯುರ್ವೇದ ಮದ್ದು , ಕೈ ಎತ್ತಿದ ಬಾಬಾ ರಾಮ್‌ದೇವ್ | Oneindia Kannada

   ಇದುವರಿಗೂ ಜಿಲ್ಲೆಯಲ್ಲಿ 45 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿದ್ದು, 32 ಸಕ್ರೀಯ ಪ್ರಕರಣಗಳಾಗಿವೆ. ಜಿಲ್ಲೆಯಲ್ಲಿ ಮತ್ತಷ್ಟು ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಕೊರೊನಾ ಮುಕ್ತವಾಗಿದ್ದ ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಮುಂದುವರೆದಿದೆ.

   ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪಗೆ ದಲಿತ ಮುಖಂಡರ ಮುತ್ತಿಗೆ ಯತ್ನಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪಗೆ ದಲಿತ ಮುಖಂಡರ ಮುತ್ತಿಗೆ ಯತ್ನ

   ತಾಯಿ, ಮಗ ಗುಣಮುಖ:

   ಹಿರಿಯೂರಿನ ಅಜಾದ್ ನಗರದ ತಾಯಿ, ಮಗನಿಗೆ ಕೊರೊನಾ ವೈರಸ್ ಪಾಸಿಟಿವ್ ಕೇಸ್ ದೃಢಪಟ್ಟಿತ್ತು. ಅವರನ್ನು ಚಿತ್ರದುರ್ಗ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ತಾಯಿ ಮತ್ತು ಮಗ ಇಬ್ಬರೂ ಗುಣಮುಖರಾಗಿದ್ದಾರೆ.

   ಹಿರಿಯೂರು ನಗರದಲ್ಲೇ ಒಟ್ಟು 22 ಸೋಂಕಿತರು ಇದ್ದಾರೆ. ಹಿರಿಯೂರಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ರಿಂದ ರಾತ್ರಿ 8 ರ ವರೆಗೆ ಲಾಕ್ ಡೌನ್ ಮಾಡಲು ತಾಲ್ಲೂಕು ಆಡಳಿತ ಆದೇಶ ಹೊರಡಿಸಿದೆ. ಹಿರಿಯೂರಿನಲ್ಲಿ ಸಂತೆ, ಜಾತ್ರೆ, ನಾಟಕ, ಕ್ರೀಡಾಕೂಟ ಸೇರಿದಂತೆ ಇತರ ಸಮಾರಂಭಗಳನ್ನು ನಿಷೇಧಿಸಲಾಗಿದೆ.

   ವರದಕ್ಷಿಣೆ ಕಿರುಕುಳ ಆರೋಪ; ಚಳ್ಳಕೆರೆಯಲ್ಲಿ ಗೃಹಿಣಿ ಆತ್ಮಹತ್ಯೆವರದಕ್ಷಿಣೆ ಕಿರುಕುಳ ಆರೋಪ; ಚಳ್ಳಕೆರೆಯಲ್ಲಿ ಗೃಹಿಣಿ ಆತ್ಮಹತ್ಯೆ

   ಈಗಾಗಲೇ ನಗರದಲ್ಲಿ ಎಲೆಕ್ಟ್ರಾನಿಕ್ ಅಂಗಡಿಗಳು, ಕಿರಾಣಿ ಅಂಗಡಿಗಳು, ಬೆಳ್ಳಿ-ಬಂಗಾರದ ಅಂಗಡಿಗಳು, ಹೋಟೆಲ್ ಗಳು ಸೇರಿದಂತೆ ಇತರೆ ವರ್ತಕರು ಸ್ವಯಂ ಪ್ರೇರಿತರಾಗಿ ಲಾಕ್ ಡೌನ್ ಮಾಡಿಕೊಳ್ಳುತ್ತಿದ್ದಾರೆ. ಸೋಂಕಿತರ ಏರಿಯಾಗಳಾದ ವೇದಾವತಿ ನಗರ, ನೆಹರೂ ಮೈದಾನ, ಸುಣ್ಣಗಾರ್ ಸರ್ಕಲ್, ಸೇರಿದಂತೆ ಇತರೆ ಸೋಂಕಿತರ ಏರಿಯಾಗಳನ್ನು ಸೀಲ್ ಡೌನ್ ಮಾಡಲಾಗಿದೆ.

   English summary
   The number of coronavirus infections in Chitradurga continues to rise, 3 cases have been detected including two women and 1 male, total number of infected persons to 77 in the district.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X