ಚಿತ್ರದುರ್ಗದಲ್ಲಿ ಕೊರೊನಾ ಸೋಂಕು ಗೆದ್ದ 110ರ ಅಜ್ಜಿ

ಚಿತ್ರದುರ್ಗ, ಆಗಸ್ಟ್‌ 01: ಕೊರೊನಾ ವೈರಸ್ ಎಂದರೆ ಎಲ್ಲೆಲ್ಲೂ ಆತಂಕ, ಭಯ ತುಂಬಿಕೊಂಡಿದೆ. ಈ ನಡುವೆ ಕೋಟೆನಾಡು ಚಿತ್ರದುರ್ಗದಲ್ಲಿ ಇಂದು 110 ವರ್ಷದ ಅಜ್ಜಿಯೊಬ್ಬರು ಕೊರೊನಾ ವೈರಸ್ ಅನ್ನೇ ಮಣಿಸಿದ್ದಾರೆ. ಈ ಒಂದು ಸಂಗತಿ ಸೋಂಕಿತರಲ್ಲಿ ಸಮಾಧಾನವನ್ನು, ಧೈರ್ಯವನ್ನೂ ತುಂಬಿದೆ.

ಜುಲೈ 27ರಂದು ಸಿದ್ದಮ್ಮ (110) ಎಂಬ ಅಜ್ಜಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಪೊಲೀಸ್ ಕ್ವಾಟ್ರಸ್ ನಲ್ಲಿ ವಾಸವಿದ್ದ ಇವರನ್ನು ಚಿತ್ರದುರ್ಗದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಐದು ದಿನಗಳ ನಂತರ ಈ ಶತಾಯುಷಿ ಅಜ್ಜಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. "ಆಸ್ಪತ್ರೆಯವರು ಚೆನ್ನಾಗಿ ನೋಡ್ಕೊಂಡ್ರು. ಊಟ ಚೆನ್ನಾಗಿತ್ತು" ಎಂದು ಅಜ್ಜಿ ಆಸ್ಪತ್ರೆ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

110 Year Old Woman Recovered From Coronavirus In Chitradurga

ದುರದೃಷ್ಟವಶಾತ್ ಅಜ್ಜಿ ಮನೆಯವರು ಕೂಡ ಕ್ವಾರಂಟೈನ್ ನಲ್ಲಿದ್ದು, ಅಜ್ಜಿಯನ್ನು ಕರೆದೊಯ್ಯಲು ಸಂಬಂಧಿಕರು ಹಿಂದೇಟು ಹಾಕುತ್ತಿದ್ದಾರೆ. ಇತ್ತ, ಡಿಎಆರ್ ಪೋಲಿಸ್ ಅಧಿಕಾರಿಗಳು ಕೂಡ ಸೀಲ್ ಡೌನ್ ಆಗಿರುವ ಕ್ವಾಟ್ರಸ್ ಗೆ ಬರಬೇಡಿ ಎಂದು ಹೇಳುತ್ತಿದ್ದಾರೆ. ಸದ್ಯಕ್ಕೆ ನಗರದ ಬುರುಜಿನಹಟ್ಟಿಯಲ್ಲಿರುವ ಸಂಬಂಧಿಕರಿಗೆ ಅಜ್ಜಿಯನ್ನು ಮನೆಗೆ ಕರೆದುಕೊಂಡು ಹೋಗುವಂತೆ ಅಧಿಕಾರಿಗಳು ಮನವೊಲಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+