• search
 • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನ್ನ ಕೊಟ್ಟ ನಮ್ಮ ದೇವರು ಮರಳಿ ಬರಲಿ: ಚಮೀನ್

By ಚಿಕ್ಕಮಗಳೂರು ಪ್ರತಿನಿಧಿ
|
   ಅನ್ನ ಕೊಟ್ಟ ನಮ್ಮ ದೇವರು ಮರಳಿ ಬರಲಿ: ಚಮೀನ್ | Oneindia Kannada

   ಚಿಕ್ಕಮಗಳೂರು, ಜುಲೈ 30: ಕಾಫಿ ಡೇ ಸ್ಥಾಪಕ ಸಿದ್ಧಾರ್ಥ ಅವರು ನಿಗೂಢವಾಗಿ ನಾಪತ್ತೆಯಾಗಿದ್ದು, ನೇತ್ರಾವತಿ ಸೇತುವೆ ಬಳಿ ತೀವ್ರ ಶೋಧ ಕಾರ್ಯ ಮುಂದುವರೆದಿದೆ. ಈ ನಡುವೆ ಗಣ್ಯರು ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಇಡೀ ಮಂಗಳೂರು, ಮೂಡಿಗೆರೆಯಲ್ಲಿ ಆತಂಕದ ಛಾಯೆ ಆವರಿಸಿದೆ.

   ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ ಸಿದ್ಧಾರ್ಥ ಅವರು ಮರಳಿ ಬರಲಿ ಎಂದು ಎಲ್ಲರೂ ಬೇಡಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ, "ನಮಗೆಲ್ಲ ಅನ್ನಕೊಟ್ಟ ದೇವರಿಗೆ ಯಾವುದೇ ರೀತಿಯ ತೊಂದರೆಯಾಗದಿರಲಿ" ಎಂದು ಗದ್ಗದಿತರಾದರು ಚಿಕ್ಕಮಗಳೂರಿನ ಅಮಾಲ್ಗಮೇಟೆಡ್ ಬೀನ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಚಮೀನ್. ಸುಮಾರು ಹತ್ತೆನ್ನರಡು ವರ್ಷಗಳಿಂದ ಸಿದ್ಧಾರ್ಥ ಅವರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಇವರು.

   CCD Owner VG Siddhartha Missing LIVE: 'ಮಾದರಿ ಉದ್ಯಮಿ'ಯ ಹಠಾತ್ ನಾಪತ್ತೆ: ಕ್ಷಣ-ಕ್ಷಣದ ಮಾಹಿತಿCCD Owner VG Siddhartha Missing LIVE: 'ಮಾದರಿ ಉದ್ಯಮಿ'ಯ ಹಠಾತ್ ನಾಪತ್ತೆ: ಕ್ಷಣ-ಕ್ಷಣದ ಮಾಹಿತಿ

   "ಅವರಿಗೆ ಏನೂ ಆಗದೇ ವಾಪಸ್ ಬರಬೇಕು. ಅವರಿಗೆ ಏನೇ ತೊಂದರೆ ಇದ್ದರೂ ನಾವಿದ್ದೇವೆ. ನಾವು ಕಾಫಿ ಡೇ ಕಾರ್ಮಿಕರೆಲ್ಲ ಅವರಿಗಾಗಿ ಸಂಬಳ ಬಿಡುತ್ತೇವೆ" ಎಂದು ದುಃಖದಿಂದ ಮಾತನಾಡಿದರು.

   ಕಾಫಿ ಡೇನಲ್ಲಿ ನಾಲ್ಕು ವರ್ಷ, ಅಮಾಲ್ಗಮೇಟೆಡ್ ಬೀನ್ ಕಂಪನಿಯಲ್ಲಿ ಏಳೆಂಟು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ ಚಮೀನ್. ಅವರ ಹೆಂಡತಿ ಕೂಡ ಸಿದ್ಧಾರ್ಥ ಅವರ ಮಾಲೀಕತ್ವದ ಅಂಬರ್ ವ್ಯಾಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

    ಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಮೂಡಿಗೆರೆಯಾದ್ಯಂತ ಸೂತಕದ ಛಾಯೆ ಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಮೂಡಿಗೆರೆಯಾದ್ಯಂತ ಸೂತಕದ ಛಾಯೆ

   "ನಮ್ಮಿಬ್ಬರಿಗೂ ಅವರೇ ಅನ್ನ ಕೊಟ್ಟವರು. ಅವರಿಗೆ ಏನೂ ಆಗದಂತೆ ದೇವರು ನೋಡಿಕೊಳ್ಳಬೇಕು" ಎಂದು ಪ್ರಾರ್ಥಿಸುತ್ತಿದ್ದಾರೆ ಅವರು.

   English summary
   Coffee Day founder Siddhartha is mysteriously missing and an intensive search is underway at the Netravati Bridge. Siddhartha has provided employment to thousands. Chameen, who works at the Amalgamated Bean Company in Chikmagalur is praying that Siddhartha to come back.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X