Muslim reservation: ಮುಸ್ಲಿಮರ 2ಬಿ ಮೀಸಲಾತಿ ರದ್ದು ಆದೇಶ ತಡೆಹಿಡಿದ ಸುಪ್ರೀಂ: ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದು ಹೀಗೆ
ಚಿಕ್ಕಮಗಳೂರು, ಏಪ್ರಿಲ್, 25: ಮುಸ್ಲಿಮರ 2ಬಿ ಮೀಸಲಾತಿ ಸರ್ಕಾರದ ರದ್ದು ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯೊಡ್ಡಿದೆ. ಇದಕ್ಕೆ ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದು, ಸುಪ್ರೀಂ ಆದೇಶಕ್ಕೆ ತಡೆ ಕೊಟ್ಟಿದೆ ಅಷ್ಟೇ, ರದ್ದು ಮಾಡಿಲ್ಲ ಎಂದರು.
ಮುಸ್ಲಿಮರ 2ಬಿ ಮೀಸಲಾತಿ ಸರ್ಕಾರದ ರದ್ದು ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯೊಡ್ಡಿದೆ ಅಷ್ಟೇ, ರದ್ದು ಮಾಡಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಿ ತಡೆಯನ್ನು ತೆರವು ಮಾಡಿಸುತ್ತೇವೆ.
— oneindiakannada (@OneindiaKannada) April 25, 2023
- ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ#supremecourt #karnataka #muslim #kseswarappa #2breservation pic.twitter.com/ynVKqpmxVz
ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಿ ತಡೆಯನ್ನು ತೆರವು ಮಾಡಿಸುತ್ತೇವೆ. ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿಯನ್ನು ಜಾಸ್ತಿ ಮಾಡಿದ್ದೇವೆ. ಸಾಮಾನ್ಯ ವ್ಯವಸ್ಥೆಯಲ್ಲಿ ಶೇಕಡಾ 10ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ಕೊಟ್ಟಿದ್ದೇವೆ. ಈ ಎಲ್ಲಾ ಅಂಶಗಳನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಿ ತಡೆಯನ್ನು ತೆರವುಗೊಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಲದೆ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿಯನ್ನು ನೀಡಬೇಕು ಎಂಬುವುದು ನಮ್ಮ ನಿಲುವಾಗಿದೆ. ಆದ್ದರಿಂದ ಕೊನೆಗೆ ನ್ಯಾಯಬದ್ಧವಾಗಿ ತೀರ್ಮಾನ ಬರಲಿದೆ ಎಂಬ ವಿಶ್ವಾಸ ಇದೆ ಎಂದರು.
ಒಟ್ಟಿನಲ್ಲಿ ಶೇಕಡಾ 4ರಷ್ಟು ಮೀಸಲಾತಿ ರದ್ದು ಮಾಡಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತಡೆಯೊಡ್ಡಿದೆ. ಇದರಿಂದ ಲಿಂಗಾಯತ, ಒಕ್ಕಲಿಗ ಮೀಸಲಾತಿ ಹೆಚ್ಚಳದ ಮೇಲೆ ಪರಿಣಾಮ ಬೀಳುವ ಸಾಧ್ಯತೆಯಿದೆ. ಆದ್ದರಿಂದ ಇದೀಗ ಎಚ್ಚೆತ್ತ ಈಶ್ವರಪ್ಪನವರು ಆದೇಶಕ್ಕೆ ತಡೆ ಕೊಟ್ಟಿದೆ ಅಷ್ಟೇ, ರದ್ದು ಮಾಡಿಲ್ಲ ಎಂದು ಹೇಳುವ ಮೂಲಕ ಜಾರಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ.












Click it and Unblock the Notifications