ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದುರಂತ: ವಿದ್ಯುತ್ ಶಾಕ್‌ನಿಂದ ಬಾಲಕ ಸಾವು
ಚಿಕ್ಕಮಗಳೂರು, ಜೂನ್ 15: ವಿದ್ಯುತ್ ಅವಘಡದಿಂದ 7ನೇ ತರಗತಿ ಬಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ಆಕಾಶ್ (13) ಮೃತ ದುರ್ದೈವಿ
ಕಡೂರು ತಾಲೂಕಿನ ಕುಪ್ಪಾಳು ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಆವರಣದಲ್ಲಿ ನೇರಳೆ ಮರವಿದ್ದು, ನೇರಳೆ ಹಣ್ಣು ಕೀಳಲು ಮೂವರು ವಿದ್ಯಾರ್ಥಿಗಳು ಮರ ಹತ್ತಿದ್ದರು. ಈ ವೇಳೆ ಮರದಿಂದ ಏಕಾಏಕಿ ಜಾರಿದ್ದ ಆಕಾಶ್ ಬೀಳುವಾಗ ಆಧಾರಕ್ಕೆತಿಳಿಯದೇ ವಿದ್ಯುತ್ ತಂತಿ ಹಿಡಿದುಕೊಂಡಿದ್ದಾನೆ.

ಈ ವೇಳೆ ವಿದ್ಯುತ್ ಪ್ರವಹಿಸಿದ್ದು, ಶಾಕ್ ಹೊಡೆದು ಆಕಾಶ್ ಕೆಳಗೆ ಬಿದ್ದಿದ್ದಾನೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ದುರಾದೃಷ್ಟವಶಾತ್ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಆಕಾಶ್ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಂಕ್ ಉದ್ಯೋಗಿಗೇ 17 ಲಕ್ಷ ರೂ ವಂಚಿಸಿದ ಖತರ್ನಾಕ್ ಸೈಬರ್ ವಂಚಕರು
ಚಿಕ್ಕಮಗಳೂರು : ಮುಂಬೈ ಕಾರ್ಗರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೆಂದು ಹೇಳಿಕೊಂಡು ಬ್ಯಾಂಕ್ ಉದ್ಯೋಗಿ ಒಬ್ಬರಿಗೆ ಬರೋಬ್ಬರಿ 17 ಲಕ್ಷ ವಂಚಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ.
ಕೊಪ್ಪದ ಖಾಸಗಿ ಬ್ಯಾಂಕ್ ಉದ್ಯೋಗಿ ಒಬ್ಬರಿಗೆ ಇದೇ ತಿಂಗಳು 01-06-2024 ರಂದು ಅಪರಿಚಿತ ವ್ಯಕ್ತಿಯೊಬ್ಬ ಮುಂಬೈನ ಕಾರ್ಗರ್ ಪೊಲೀಸ್ ಠಾಣೆಯ ಪೊಲೀಸ್ ಎಂದು ಪರಿಚಯ ಮಾಡಿಕೊಂಡಿದ್ದಾರೆ. ನಿಮ್ಮ ಮೊಬೈಲ್ ನಂಬರ್ ನಿಂದ ಬೇರೆಯವರಿಗೆ ಹರಾಸ್ಕೆಂಟ್ ಫೋನ್ ಕರೆ ಮಾಡಿ ತೊಂದರೆ ಮಾಡುತ್ತಿದ್ದು, ಹಾಗೂ ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣದಲ್ಲಿ ಆಶ್ಲೀಲವಾದ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದು, ಈ ವಿಚಾರವಾಗಿ ಕಾರ್ಗರ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದ್ದು, ಮತ್ತು ಮುಂಬೈನ ಕೆನರಾ ಬ್ಯಾಂಕ್ ನಿಂದ ಕಾರ್ಗರ್ ಪೊಲೀಸ್ ಠಾಣೆಯಲ್ಲಿ ನಿಮ್ಮ ಹೆಸರಿನಲ್ಲಿ money landring ಬಗ್ಗೆ ಕೇಸ್ ಆಗಿದೆ ಎಂದು ನಂಬಿಸಿದ್ದಾರೆ.
ನಂತರ ಅರೆಸ್ಟ್ ವಿಚಾರವಾಗಿ skype ಆಪ್ ಅನ್ನು ಡೌನ್ ಲೋಡ್ ಮಾಡಿ ವಿಡಿಯೋ ಕಾಲ್ ಮಾಡಿ ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆ ತೋರಿಸಿವಂತೆ ತಿಳಿಸುತ್ತಾರೆ. ಹಾಗೆಯೇ ಬ್ಯಾಂಕ್ ಉದ್ಯೋಗಿ skype ಆಪ್ ಅನ್ನ ಓಪನ್ ಮಾಡಿ ಅವರು ನೀಡಿರುವ ಯೂಸರ್ ಐಡಿಗೆ ಕರೆ ಮಾಡಿದ್ದಾರೆ. ವಿಚಾರಣೆ ನೆಪದಲ್ಲಿ ವಾಟ್ಸಾಪ್ ಗೆ ಕರೆ ಮಾಡಿ ಆಧಾರ್ ಕಾರ್ಡ್ ಕಳುಹಿಸುವಂತೆ ತಿಳಿಸಿದ್ದಾರೆ. ಹಾಗೆಯೇ ಸುಪ್ರೀಂ ಕೊರ್ಟ್ ನಿಂದ ಅರೆಸ್ಟ್ ವಾರೆಂಟ್ ಆಗಿದೆ ಎಂದು skype ಆಪ್ ಮೂಲಕ ಕೆಲವು ದಾಖಲೆಗಳನ್ನು ಕಳುಹಿಸಿ ಹೆದರಿಸಿದ್ದಾರೆ.
ಜೊತೆಗೆ ಅರೆಸ್ಟ್ ನಿಂದ ತಪ್ಪಿಸಿಕೊಳ್ಳಲು ಕೇಸ್ ಅನ್ನು ಖುಲಾಸೆಗೊಳಿಸಲು ಹಣ ಹಾಕುವಂತೆ ತಿಳಿಸಿದ್ದಾರೆ. ಇದನ್ನು ನಂಬಿದ ಬ್ಯಾಂಕ್ ಚೀಫ್ ಮ್ಯಾನೇಜರ್ ಹಂತ ಹಂತವಾಗಿ ಅಪರಿಚಿತ ಹೇಳಿದ ಬ್ಯಾಂಕ್ ಖಾತೆಗೆ ಒಟ್ಟು 17 ಲಕ್ಷವನ್ನು ಹಾಕಿದ್ದಾರೆ. ವಂಚನೆ ಅರಿವಾಗುತ್ತಲೇ ಹಣ ಕಳೆದುಕೊಂಡಿರುವ ಬ್ಯಾಂಕ್ ಉದ್ಯೋಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಕೊಪ್ಪ ಪೊಲೀಸರು ತನಿಖೆ ಆರಂಭಿಸಿದ್ದಾರೆ.












Click it and Unblock the Notifications