ದತ್ತಮಾಲಾ ಭಕ್ತರಿಂದ ವಾಹನದ ಮೇಲೆ ಕಲ್ಲು ತೂರಾಟ
ಚಿಕ್ಕಮಗಳೂರು, ಡಿಸೆಂಬರ್ 12: ದತ್ತಜಯಂತಿ ಮುಗಿಸಿ ಹಿಂದುರುಗುತ್ತಿದ್ದ ಭಕ್ತಾದಿಗಳು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ದತ್ತಮಾಲಾ ಯಾತ್ರೆ ಮುಗಿಸಿಕೊಂಡು ಕೆಲವು ಭಕ್ತಾಧಿಗಳು ಪಿಕ್‌ಅಪ್ ವಾಹನದಲ್ಲಿ ಬರುವಾಗ ಮೂಡಿಗೆರೆ ತಾಲೂಕಿನ ಭೂತನಕಾಡು ಗುಲ್ಲನ್ ಪೇಟೆ ಬಳಿ ಮನೆಯ ಮುಂದೆ ನಿಂತಿದ್ದ ಮುಸ್ಲೀಮರಿಗೆ ಸೇರಿದ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ದತ್ತಮಾಲಾ ಭಕ್ತರು ಅಲ್ಲಿಯೇ ಇದ್ದ ಮಸೀದಿಗೆ ಕಲ್ಲು ತೂರಲು ಯತ್ನಿಸಿದ್ದು ಆ ಕಲ್ಲುಗಳು ವಾಹನದ ಮೇಲೆ ಬಿದ್ದಿವೆ ಎನ್ನಲಾಗಿದೆ.

ಪಿಕ್‌ಅಪ್ ವಾಹನದಲ್ಲಿದ್ದ ಕಿಡಿಗೇಡಿ ದತ್ತಮಾಲಾ ಭಕ್ತರು ಕೇಸರಿ ವಸ್ತ್ರದಲ್ಲಿ ಕಲ್ಲು ಸುತ್ತಿಕೊಂಡು ಕಾರುಗಳ ಮೇಲೆ ಎಸೆದಿದ್ದಾರೆ. ಕಲ್ಲು ತೂರಾಟ ನಡೆಸಿ ಸ್ಥಳದಲ್ಲಿ ಪೇರಿ ಕಿತ್ತಿದ್ದಾರೆ.

ಕಲ್ಲೆಸೆತದಿಂದ ಕಾರಿನ ಗಾಜು ಪುಡಿ ಆಗಿವೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಆಲ್ದೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ಥಳಕ್ಕೆ ಆಲ್ದೂರು ಪೊಲೀಸ್ ಠಾಣಾ ಪಿ.ಎಸ್.ಐ ಸುನೀತಾ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications