ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ ಶೃಂಗೇರಿ ಮಠ
ಚಿಕ್ಕಮಗಳೂರು, ಏಪ್ರಿಲ್ 03: ಕೊರೊನಾ ನಿಯಂತ್ರಣ ಮಾಡಲು ಸಹಾಯ ಆಗುವಂತೆ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೆರವು ಬರುತ್ತಿದೆ. ಇದೀಗ ಶೃಂಗೇರಿ ಮಠ ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದೆ.
10 ಲಕ್ಷ ರೂಪಾಯಿಗಳನ್ನು ಶೃಂಗೇರಿ ಮಠ ನೀಡಿದೆ. ಮಠದ ಸಿಬ್ಬಂದಿಗಳು ಸೇರಿ ತಮ್ಮ ಮಾಸಿಕ ವೇತನದಲ್ಲಿ ಈ ಹಣ ನೀಡಿದ್ದಾರೆ. ಇದರೊಂದಿಗೆ, ತಮ್ಮ ಕೈಲಾದಷ್ಟು ಸಹಾಯ ಮಾಡುವಂತೆ ಭಕ್ತರಿಗೆ ಮನವಿ ಮಾಡಿದೆ. ಈ ರೀತಿ ಶೃಂಗೇರಿ ಮಠ ಕೊರೊನಾ ತಡೆಗೆ ಸಹಾಯ ಮಾಡಿದೆ.
ಗೌತಮ್ ಗಂಭೀರ್ ಪಿಎಂ ಪರಿಹಾರ ನಿಧಿಗೆ 2 ವರ್ಷದ ವೇತನ ದೇಣಿಗೆ
ಲಾಕ್ ಡೌನ್ ನಿಂದ ಶೃಂಗೇರಿ ಭಾಗದ ಜನರಿಗೆ ಸಹ ತೊಂದರೆ ಆಗಿದ್ದು, ಅವರ ನೆರವಿಗೆ ಮಠ ಹೋಗಿದೆ. ಊಟ ಇಲ್ಲದೆ ಪರದಾಡುತ್ತಿದ್ದವರಗೆ ಮಠದ ವತಿಯಿಂದ ಊಟ ನೀಡಲಾಗಿದೆ. ಮಠದಿಂದ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಮೂರು ಹೊತ್ತು ಅವಶ್ಯಕತೆ ಇರುವವರಿಗೆ ಊಟ ನೀಡಲಾಗುತ್ತಿದೆ. ಮಠದ ವಾಹನಗಳಲ್ಲಿ ಜನರು ಇರುವ ಕಡೆ ಹೋಗಿ ಊಟವನ್ನು ನೀಡಲಾಗುತ್ತಿದೆ.
ಕೆಲ ದಿನಗಳ ಹಿಂದೆ ಸುತ್ತೂರು ಮಠ ಕೂಡ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿತ್ತು. 50 ಲಕ್ಷ ರೂಪಾಯಿಯ ಚೆಕ್ ಅನ್ನು ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ನೀಡಿದ್ದರು.
ಅಂದಹಾಗೆ, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು 124ಕ್ಕೆ ಏರಿಕೆಯಾಗಿದೆ. ಮೂರು ಜನರು ಕೊರೊನಾದಿಂದ ಮರಣ ಹೊಂದಿದ್ದಾರೆ.